Huge increase in UPI payments: ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮೂಲಕ ವಹಿವಾಟಿನ ಮೌಲ್ಯವು ಸೆಪ್ಟೆಂಬರ್‌ನಲ್ಲಿ ವಾರ್ಷಿಕ ಆಧಾರದ ಮೇಲೆ 31 ಪ್ರತಿಶತದಷ್ಟು ಏರಿಕೆ ಕಂಡಿದ್ದು, ಒಟ್ಟು 20.64 ಲಕ್ಷ ಕೋಟಿ ರೂ. ವಹಿವಾಟು ನಡೆಸಿದೆ. ಈ ಅವಧಿಯಲ್ಲಿ ವಹಿವಾಟುಗಳ ಸಂಖ್ಯೆಯು ವಾರ್ಷಿಕ ಆಧಾರದ ಮೇಲೆ 42 ಪ್ರತಿಶತದಷ್ಟು ಎಂದರೆ 15.04 ಶತಕೋಟಿಗೆ ಏರಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಮಾಹಿತಿ ನೀಡಿದೆ.
NPCI ಡೇಟಾ ಪ್ರಕಾರ, ಕಳೆದ ತಿಂಗಳು UPI ನಲ್ಲಿ ದಿನಕ್ಕೆ 50.1 ಕೋಟಿ ವಹಿವಾಟುಗಳು ನಡೆದಿವೆ. ಆಗಸ್ಟ್‌ನಲ್ಲಿ ಈ ಸಂಖ್ಯೆ 48.3 ಕೋಟಿಯಷ್ಟಿತ್ತು. ಈ ಅವಧಿಯಲ್ಲಿ ಪ್ರತಿದಿನ ಸರಾಸರಿ 68,800 ಕೋಟಿ ರೂ.ಗಳ ವಹಿವಾಟು ಯುಪಿಐನಲ್ಲಿ ನಡೆದಿದೆ. ಆಗಸ್ಟ್‌ನಲ್ಲಿ ಈ ಸಂಖ್ಯೆ 66,475 ಕೋಟಿ ರೂ. ವಹಿವಾಟು ನಡೆದಿದೆ. ಮಾಸಿಕ UPI ವಹಿವಾಟಿನ ಮೌಲ್ಯವು 20 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಇದು ಸತತ ಐದನೇ ತಿಂಗಳಾಗಿದೆ.
ಸೆಪ್ಟೆಂಬರ್‌ನಲ್ಲಿ 10ಕೋಟಿ ವಹಿವಾಟು:ಸೆಪ್ಟೆಂಬರ್‌ನಲ್ಲಿ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (ಎಇಪಿಎಸ್) ಮೂಲಕ ಸುಮಾರು 10 ಕೋಟಿ ವಹಿವಾಟು ನಡೆಸಲಾಗಿದ್ದು, ಅವುಗಳ ಮೌಲ್ಯ 24,143 ಕೋಟಿ ರೂ.ಗೆ ಏರಿದೆ. ಸೆಪ್ಟೆಂಬರ್‌ನಲ್ಲಿ ತಕ್ಷಣದ ಪಾವತಿ ಸೇವೆ (IMPS) ಮೂಲಕ 5.65 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆಸಲಾಗಿದೆ. ಇದು ವಾರ್ಷಿಕವಾಗಿ ಶೇ.11ರಷ್ಟು ಹೆಚ್ಚಳವಾಗಿದೆ. ಕಳೆದ ತಿಂಗಳು, ದಿನಕ್ಕೆ ಸರಾಸರಿ 1.4 ಕೋಟಿ IMPS ವಹಿವಾಟುಗಳು ನಡೆದಿವೆ ಮತ್ತು ಅವುಗಳ ಸರಾಸರಿ ದೈನಂದಿನ ಮೌಲ್ಯ 18,841 ಕೋಟಿ ರೂ. ಆಗಿದೆ.