ಕರ್ನಾಟಕ

karnataka

ETV Bharat / technology

ಇನ್ನೆರಡೇ ದಿನ ಬಾಕಿ! ಆಧಾರ್ ಕಾರ್ಡ್ ಉಚಿತವಾಗಿ ಅಪ್​ಡೇಟ್​ ಮಾಡುವುದು ಹೇಗೆ? - Aadhaar Card Update - AADHAAR CARD UPDATE

Aadhar Card Free Update: ಉಚಿತ ಆಧಾರ್ ಕಾರ್ಡ್ ಅಪ್​ಡೇಟ್​ ಅವಧಿಯನ್ನು ಈ ಹಿಂದೆಯೂ ವಿಸ್ತರಿಸಲಾಗಿತ್ತು. ಈ ಬಾರಿ ಸೆಪ್ಟೆಂಬರ್ 14ರ ನಂತರ ದಿನಾಂಕವನ್ನು ವಿಸ್ತರಿಸುವ ಸಾಧ್ಯತೆ ಕಡಿಮೆ. ನಿಮ್ಮ ಆಧಾರ್​ ಕಾರ್ಡ್​ ಅನ್ನು ಉಚಿತವಾಗಿ ಅಪ್​ಡೇಟ್​ ಮಾಡಿಕೊಳ್ಳಲು ಇನ್ನು ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ.

AADHAAR CARD FREE UPDATE  FREE AADHAAR UPDATE  AADHAAR CARD FREE UPDATE LAST DATE  MYAADHAAR PORTAL
ಆಧಾರ್ ಕಾರ್ಡ್ ಅಪ್ಡೇಟ್‌ ಮಾಹಿತಿ (ETV Bharat)

By ETV Bharat Tech Team

Published : Sep 12, 2024, 11:31 AM IST

Aadhar Card Free Update: ಆಧಾರ್ ಕಾರ್ಡ್ ಭಾರತೀಯ ಪೌರತ್ವದ ಗುರುತಿನ ಚೀಟಿಯಲ್ಲ. ಆದರೆ ರೈಲು ಟಿಕೆಟ್ ಕಾಯ್ದಿರಿಸುವುದರಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವವರೆಗೆ ಈ ದಾಖಲೆಯಿಲ್ಲದೆ ಯಾವುದೇ ಕೆಲಸ ಸಾಧ್ಯವಿಲ್ಲ. ಆಧಾರ್ ಕಾರ್ಡ್‌ನಲ್ಲಿ ಮುದ್ರಿತವಾಗಿರುವ ಹಳೆಯ ಫೋಟೋಗೆ ಸಂಬಂಧಿಸಿದಂತೆ ಮೀಮ್‌ಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ದೀರ್ಘಕಾಲದಿಂದ ಆಧಾರ್ ಕಾರ್ಡ್ ಅನ್ನು ಅಪ್​ಡೇಟ್​ ಮಾಡದ ಜನರಲ್ಲಿ ನೀವೂ ಒಬ್ಬರಾಗಿದ್ದರೆ ಇದು ನಿಮಗೆ ಸರಿಯಾದ ಅವಕಾಶ. ಸೆಪ್ಟೆಂಬರ್ 14, 2024ರ ನಂತರ, ಆಧಾರ್ ಕಾರ್ಡ್‌ನಲ್ಲಿ ಯಾವುದೇ ಬದಲಾವಣೆ ಅಥವಾ ಅಪ್​ಡೇಟ್​ಗಾಗಿ ನೀವು ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ.

ನಿಮ್ಮ ಆಧಾರ್ ಅನ್ನು ಉಚಿತವಾಗಿ ಅಪ್​ಡೇಟ್​ ಮಾಡಲು ನೀವು ಬಯಸಿದರೆ, ಇನ್ನೂ ಎರಡು ದಿನ ಸಮಯವಿದೆ. ಆಧಾರ್ ಕಾರ್ಡ್ ಒಂದು ಪ್ರಮುಖ ದಾಖಲೆ. ಆದ್ದರಿಂದ ಅದರಲ್ಲಿ ನಮೂದಿಸಲಾದ ಎಲ್ಲಾ ಮಾಹಿತಿ ಸರಿಯಾಗಿರುವುದು ಮುಖ್ಯ.

ಆಧಾರ್ ಕಾರ್ಡ್ ನೀಡುವುದು ಯಾರು?: ಆಧಾರ್ ಕಾರ್ಡ್ ನೀಡುವ ಪ್ರಾಧಿಕಾರ ಯುಐಡಿಎಐ (ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ-ಯುಐಡಿಎಐ) ಇದೀಗ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಉಚಿತ ಆಧಾರ್ ಕಾರ್ಡ್ ಅಪ್​ಡೇಟ್​ ಸೌಲಭ್ಯವನ್ನು ಕೊನೆಗೊಳಿಸಲಿದೆ. ಸೆಪ್ಟೆಂಬರ್ 14ರ ನಂತರ, ಯಾವುದೇ ರೀತಿಯ ಅಪ್​ಡೇಟ್​ಗಾಗಿ ನೀವು 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೀಗಾಗಿ ನೀವು ಇನ್ನೂ ಎರಡು ದಿನಗಳ ಸಮಯವನ್ನು ಹೊಂದಿದ್ದೀರಿ. ಇದರಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್​ಡೇಟ್​ ಮಾಡಿಕೊಳ್ಳಬಹುದು. ಉಚಿತ ಆಧಾರ್ ಕಾರ್ಡ್ ಅಪ್​ಡೇಟ್​ ಅವಧಿ ಈಗಾಗಲೇ ವಿಸ್ತರಿಸಲ್ಪಟ್ಟಿದೆ. ಆದ್ದರಿಂದ ಈ ಬಾರಿ ಸೆಪ್ಟೆಂಬರ್ 14ರ ನಂತರ ದಿನಾಂಕವನ್ನು ವಿಸ್ತರಿಸುವ ಸಾಧ್ಯತೆ ತುಂಬಾ ಕಡಿಮೆ.

ನಾವಿಲ್ಲಿ ನಿಮಗೆ ಹಂತ ಹಂತವಾಗಿ ಆಧಾರ್ ಕಾರ್ಡ್ ನವೀಕರಿಸುವ ಸುಲಭ ಮಾರ್ಗವನ್ನು ಹೇಳುತ್ತೇವೆ. ಅದನ್ನು ಅನುಸರಿಸುವ ಮೂಲಕ ಆಧಾರ್​ ಕಾರ್ಡ್​ ಅನ್ನು ಉಚಿತವಾಗಿ ಅಪ್​ಡೇಟ್​ ಮಾಡಿಕೊಳ್ಳಬಹುದು.

ಹಂತ 1: myAadhaar ಪೋರ್ಟಲ್‌ಗೆ ಹೋಗಿ.

ಹಂತ 2:Enter ಆಯ್ಕೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಚ ಕೋಡ್ ನಮೂದಿಸಿ. 'ಸೆಂಡ್ OTP' ಆಯ್ಕೆ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ OTP ಸ್ವೀಕರಿಸಿದ ನಂತರ, ಅದನ್ನು ನಮೂದಿಸಿ ಮತ್ತು ಆಯ್ಕೆಯನ್ನು ಕ್ಲಿಕ್ಕಿಸಿ.

ಹಂತ 3:ಡಾಕ್ಯುಮೆಂಟ್ ಅಪ್‌ಡೇಟ್ ಆಯ್ಕೆಯ ಮೇಲೆ ಕ್ಲಿಕ್ಕಿಸಿ.

ಹಂತ 4:ಸೂಚನೆಗಳನ್ನು ಓದಿದ ನಂತರ ಮುಂದಿನ ಆಯ್ಕೆ ಕ್ಲಿಕ್ಕಿಸಿ.

ಹಂತ 5: ನಿಮ್ಮ ವಿವರಗಳನ್ನು ಪರಿಶೀಲಿಸಿದ ನಂತರ ಪುಟದಲ್ಲಿ ನೀಡಲಾದ 'ಮೇಲಿನ ವಿವರಗಳು ಸರಿಯಾಗಿವೆಯೇ ಎಂದು ನಾನು ಪರಿಶೀಲಿಸುತ್ತೇನೆ' ಎಂಬ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ಮುಂದಿನ ಆಯ್ಕೆಗೆ ತೆರಳಿ.

ಹಂತ 6: ID ಪುರಾವೆ ಮತ್ತು ವಿಳಾಸ ಪುರಾವೆಗಾಗಿ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಸಲ್ಲಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲಾಗುತ್ತದೆ. ಇದರ ನಂತರ, ನಿಮ್ಮ ನವೀಕರಿಸಿದ ಆಧಾರ್ ಕಾರ್ಡ್ 7 ದಿನಗಳಲ್ಲಿ ಅಪ್​ಡೇಟ್​ ಆಗುತ್ತದೆ.

ನಿಮ್ಮ ಬಳಿ ಈ ಎರಡು ದಾಖಲೆಗಳಿರಲಿ: ಆಧಾರ್ ಅಪ್​ಡೇಟ್​ಗಾಗಿ ನಿಮಗೆ ಎರಡು ಪ್ರಮುಖ ದಾಖಲೆಗಳು ಬೇಕು. ಮೊದಲನೇಯದು ಗುರುತಿನ ಚೀಟಿ ಮತ್ತು ಎರಡನೇಯದು ವಿಳಾಸದ ಪುರಾವೆ. ಸಾಮಾನ್ಯವಾಗಿ, ಆಧಾರ್ ನವೀಕರಣಕ್ಕಾಗಿ ಆಧಾರ್ ಕೇಂದ್ರದಲ್ಲಿ 50 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಆದರೆ UIDAI ಪ್ರಕಾರ, ಈ ಸೇವೆ ಜೂನ್ 14ರವರೆಗೆ ಉಚಿತ. ನೀವು ಗುರುತಿನ ಪುರಾವೆಯಾಗಿ ಪ್ಯಾನ್ ಕಾರ್ಡ್ ಮತ್ತು ವಿಳಾಸಕ್ಕಾಗಿ ಮತದಾರರ ಕಾರ್ಡ್ ನೀಡಬಹುದು.

ಇದನ್ನೂ ಓದಿ:PAN ಕಾರ್ಡ್ ದುರುಪಯೋಗದ ಬಗ್ಗೆ ತಿಳಿಯುವುದು, ದೂರು ಸಲ್ಲಿಸುವುದು ಹೇಗೆ? - PAN Card Misuse

ABOUT THE AUTHOR

...view details