ಹೈದರಾಬಾದ್: ಎರಡು ವರ್ಷದ ಹಿಂದೆ ಟ್ವಿಟರ್ನಿಂದ ಮಾಲೀಕತ್ವ ಪಡೆದ ಬಳಿಕ ಎಲೋನ್ ಮಸ್ಕ್, ಸಂಸ್ಥೆಯಲ್ಲಿ ಒಂದೊಂದೇ ಬದಲಾವಣೆ ನಡೆಸುತ್ತಾ ತಮ್ಮ ಹಿಡಿತ ಸಾಧಿಸಿದರು. ಲೋಗೋದಿಂದ ಹಲವು ವಿಷಯಗಳಲ್ಲಿ ಮಾರ್ಪಾಡುಗಳನ್ನು ಮಾಡಿದರು. ಆದರೆ, ಇದರ ಯುಆರ್ಎಲ್ ಮಾತ್ರ ಬದಲಾವಣೆ ಕಂಡಿರಲಿಲ್ಲ. ಇದೀಗ ಮಸ್ಕ್ ಯುಆರ್ಎಲ್ ಒಡೆತನ ಸಾಧಿಸುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ. ಇನ್ಮುಂದೆ ಟ್ವಿಟರ್.ಕಾಂ ನಿಂದ ಎಕ್ಸ್.ಕಾಂಗೆ ಸಂಪೂರ್ಣವಾಗಿ ಬದಲಾಗಿದೆ.
ಡೊಮೈನ್ ಹಿಡಿತ ಪಡೆದ ಮಸ್ಕ್: ಡೊಮೈನ್ ಯುಆರ್ಎಲ್ ಎಂಬುದು ಸಾಮಾಜಿಕ ಜಾಲತಾಣದ ವೆಬ್ಸೈಟ್ಗಳ ಮೂಲವನ್ನು ತಿಳಿಸುತ್ತದೆ. ಯಾವುದೇ ಒಂದು ಸಂಸ್ಥೆಯ ವೆಬ್ಸೈಟ್ ಈ ಡೊಮೈನ್ಗಳ ಹಿಡಿತ ಸಾಧಿಸುವುದು ಅವಶ್ಯ. ಅದರ ಅನುಸಾರವಾಗಿ ಬ್ರೌಸಿಂಗ್ನಲ್ಲಿ ಇಷ್ಟು ದಿನ Twitter.com ಆಗಿದ್ದ ಎಕ್ಸ್ ಇನ್ಮುಂದೆ ಅಧಿಕೃತವಾಗಿ X.com ಆಗಿರಲಿದೆ. X ಲಾಗಿನ್ ಯುಆರ್ಎಲ್ನಿಂದ ಟ್ವಿಟರ್ ಸಂಪೂರ್ಣವಾಗಿ ಕಣ್ಮರೆಯಾಗಲಿದೆ. ಈ ಮೂಲಕ ಡೊಮೈನ್ ಒಡೆತನವನ್ನು ಇದೀಗ ಮಸ್ಕ್ ಪಡೆದಿದ್ದಾರೆ.
ಈ ಕುರಿತು ತಿಳಿಸಿರುವ ಮಸ್ಕ್, 'ಇದೀಗ ಟ್ವಿಟರ್ ಸಂಪೂರ್ಣವಾಗಿ ಎಕ್ಸ್.ಕಾಮ್ ವಲಸೆ ಬಂದಿದೆ. ಸಂಪೂರ್ಣವಾಗಿ ಟ್ವಿಟರ್ ಬ್ರೌಸರ್ನಿಂದ ಎಕ್ಸ್ ಡೊಮೈನ್ ಬಂದಿದೆ. ಎಲ್ಲಾ ಕೋರ್ ವ್ಯವಸ್ಥೆ ಇದೀಗ ಎಕ್ಸ್.ಕಾಂ ಆಗಿರಲಿದೆ. ಇನ್ಮುಂದೆ ಬ್ರೌಸಿಂಗ್ ವೇಳೆ ಟ್ವಿಟರ್ ಬದಲಾಗಿ ಎಕ್ಸ್ ಡೊಮೈನ್ ಕಾರ್ಯ ನಿರ್ವಹಿಸಲಿದೆ' ಎಂದು ಪೋಸ್ಟ್ ಮೂಲಕ ತಿಳಿಸಿದ್ದಾರೆ.