ಕರ್ನಾಟಕ

karnataka

ETV Bharat / technology

ಸಣ್ಣ ಗ್ಯಾಲಕ್ಸಿಗಳಲ್ಲಿ ಕಪ್ಪುಕುಳಿ ಪತ್ತೆ ಹಚ್ಚಿದ ತೆಲುಗು ಖಗೋಳ ವಿಜ್ಞಾನಿ ಪುಚ್ಚ ರಾಗದೀಪಿಕಾ - BLACK HOLES IN SMALL GALAXIES

ರಾಗದೀಪಿಕಾ ಅವರ ಈ ಸಂಶೋಧನೆಯು ಖಗೋಳ ಕ್ಷೇತ್ರದಲ್ಲಿ ಇದೀಗ ಮತ್ತಷ್ಟು ಹೊಸ ಅಧ್ಯಯನಕ್ಕೆ ಮುನ್ನುಡಿ ಬರೆದಿದೆ.

telugu-astronomer-puchcha-ragadeepikas-breakthrough-research-on-black-holes-in-small-galaxies-recognized
ಪಚ್ಚು ರಾಗಾದೀಪಿಕಾ (ಈಟಿವಿ ಭಾರತ್​)

By ETV Bharat Karnataka Team

Published : Feb 22, 2025, 3:18 PM IST

ತೆನಾಲಿ (ಆಂಧ್ರಪ್ರದೇಶ): ಬ್ರಹ್ಮಾಂಡದ ಅನೇಕ ಕೌತುಕಗಳ ಹುಡಕಾಟದ ಕುರಿತಾಗಿ ಅನೇಕ ವಿಜ್ಞಾನಿಗಳು ನಿರಂತರ ಸಂಶೋಧನೆ ನಡೆಸುತ್ತಲೇ ಇದ್ದಾರೆ. ಈ ನಡುವೆ ಸಣ್ಣ ಗೆಲಾಕ್ಸಿಗಳಲ್ಲಿ ಕಪ್ಪು ಕುಳಿಗಳ ಕುರಿತು ತೆಲುಗು ನಾಡಿನ ಹುಡುಗಿ ಪುಚ್ಚ ರಾಗದೀಪಿಕಾ ಅಧ್ಯಯನ ನಡೆಸಿದ್ದ, ಅವರ ಸಂಶೋಧನೆ ಖಗೋಳ ಕ್ಷೇತ್ರದಲ್ಲಿ ಹೊಸ ಮಾಹಿತಿ ಹೊರಹಾಕಿದ್ದಾರೆ. ಇದು ವೈಜ್ಞಾನಿಕ ಕ್ಷೇತ್ರದ ಮೇಲೆ ಕೊಡುಗೆ ಹೆಚ್ಚಿದೆ.

ನಿವೃತ್ತ ಕೇಂದ್ರ ಸರ್ಕಾರಿ ಸಿವಿಲ್​ ಇಂಜಿನಿಯರಿಂಗ್​ ರಾಜಗೋಪಾಲ್​ ಅವರ ಮಗಳಾಗಿರುವ ರಾಗದೀಪಿಕಾ ಮೂಲತಃ ತೆನಾಲಿ ಅವರು, ಕೇಂದ್ರೀಯ ವಿವಿಯಲ್ಲಿ ಶಾಲಾ ಶಿಕ್ಷಣವ್ನು ಪೂರೈಸಿದ ಇವರಿಗೆ ಖಗೋಳದ ಬಗ್ಗೆ ಸದಾ ಕೌತುಕತೆ ಇತ್ತು. ಪಶ್ಚಿಮ ಬಂಗಾಳದ ವಿಶ್ವ ಭಾರತಿ ಯುನಿವರ್ಸಿಟಿಯಲ್ಲಿ ಭೌತಶಾಸ್ತ್ರದಲ್ಲಿ ಎಂಎಸ್ಸಿ ಇಂಟಿಗ್ರೇಟೆಡ್​​ ಪದವಿಯನ್ನು ಗೋಲ್ಡ್​ ಮೆಡಲ್​ನೊಂದಿಗೆ ಪೂರ್ಣಗೊಳಿಸಿದ್ದಾರೆ. ಹಾಗೇ ಪ್ರತಿಷ್ಠಿತ ಇನ್ಸಪೈರ್​ ಸ್ಕಾಲರ್​ಸಿಪ್​ ಅನ್ನು ಪಡೆದಿದ್ದಾರೆ.

ಅಮೆರಿಕದ ಅರಿಜೋನಾ ವಿಶ್ವವಿದ್ಯಾಲಯದಲ್ಲಿ ಪಿಹೆಚ್​ಡಿ ಪದವಿ ಪಡೆದಿದ್ದು, ವಿನ್ಯಾಸ, ಅವಿಷ್ಕಾರ ಮತ್ತು ಗ್ಯಾಲಕ್ಸಿಗಳ ಕಪ್ಪು ಕುಳಿಗಳ ಮೇಲೆ ಪರಿಣಿತಿ ಹೊಂದಿದ್ದಾರೆ. ಇದರಲ್ಲಿ 2023ರಲ್ಲಿ ಡಾಕ್ಟರೇಟ್​ ಅನ್ನು ಪಡೆದಿದ್ದಾರೆ.

ಸದ್ಯ ಉತ್ತಾ ಯುನಿವರ್ಸಿಟಿಯಲ್ಲಿ ಸ್ನಾತಕೋತ್ತರ ಡಾಕ್ಟರಲ್​ ಅಧ್ಯಯನದಲ್ಲಿ ತೊಡಗಿರುವ ಅವರು, ಈ ಹೊಸ ಮೈಲಿಗಲ್ಲಿನ ಅವಿಷ್ಕಾರವನ್ನು ಮಾಡಿದ್ದಾರೆ. ಸಣ್ಣ ಗ್ಯಾಲಕ್ಸಿಯಲ್ಲಿ 2,500 ಕಪ್ಪು ಕುಳಿಗಳನ್ನು ಪತ್ತೆ ಮಾಡಿದ್ದಾರೆ. ಈ ಮೊದಲು 500 ಕಪ್ಪು ಕುಳಿಯನ್ನು ಇದೇ ರೀತಿಯ ಗ್ಯಾಲಕ್ಸಿಯಲ್ಲಿ ಅವರು ಪತ್ತೆ ಮಾಡಿದ್ದರು. ಅವರ ಈ ಅಧ್ಯಯನದ ಫಲಿತಾಂಶವೂ ಆಸ್ಟ್ರೋಲಜಿ ಜನರಲ್​ನಲ್ಲಿ ಪ್ರಕಟವಾಗಿದೆ. ಸಾಮಾನ್ಯವಾಗಿ ಶೇ. 2ರಷ್ಟು ಸಣ್ಣ ಗ್ಯಾಲಕ್ಸಿಯ ಕಪ್ಪು ಕುಳಿಯನ್ನು ಕಂಡುಹಿಡಿದಿದ್ದಾರೆ.

ಹೊಸ ಅವಿಷ್ಕಾರಕ್ಕೆ ಮುನ್ನುಡಿ : ಈ ಕುರಿತು ಮಾತನಾಡಿರುವ ರಾಗದೀಪಿಕಾ, ನಮ್ಮ ಅಧ್ಯಯನವು ಸಣ್ಣ ಗ್ಯಾಲಕ್ಸಿಯಲ್ಲಿನ ಕಪ್ಪು ಕುಳಿ ಅರ್ಥ ಮಾಡಿಕೊಳ್ಳಲು ಅವಕಾಶ ನೀಡುವ ಜೊತೆಗೆ ಖಗೋಳದ ಕೌತುಕದಲ್ಲಿನ ಭವಿಷ್ಯದ ಅವಿಷ್ಕಾರಕ್ಕೆ ಇದು ಮಾರ್ಗವಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ವಾತಾವರಣದಿಂದ ಕಾರ್ಬನ್‌ ಡೈಆಕ್ಸೈಡನ್ನು ಶಾಶ್ವತವಾಗಿ ತೆಗೆದುಹಾಕುವ ವಿಧಾನ ಕಂಡುಕೊಂಡ ವಿಜ್ಞಾನಿಗಳು

ಇದನ್ನೂ ಓದಿ:ನುಗ್ಗಿ ಬರ್ತಿದೆ ಕ್ಷುದ್ರಗ್ರಹ 'ಸಿಟಿ-ಕಿಲ್ಲರ್': ಇದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಎಷ್ಟು?

ABOUT THE AUTHOR

...view details