ಕರ್ನಾಟಕ

karnataka

ETV Bharat / technology

ಬೆಂಗಳೂರು ಸೇರಿ 250 ಹೊಸ ಫಾಸ್ಟ್ ಚಾರ್ಜಿಂಗ್ ಇವಿ ಸ್ಟೇಷನ್‌ಗಳನ್ನು ಸ್ಥಾಪಿಸಲಿರುವ ಟಾಟಾ ಮೋಟಾರ್ಸ್ - New Fast Charging Stations - NEW FAST CHARGING STATIONS

ಬೆಂಗಳೂರು ಸೇರಿದಂತೆ 250 ಹೊಸ ಫಾಸ್ಟ್ ಚಾರ್ಜಿಂಗ್ ಇವಿ ಸ್ಟೇಷನ್‌ಗಳನ್ನು ಸ್ಥಾಪಿಸುವುದಾಗಿ ಟಾಟಾ ಮೋಟಾರ್ಸ್ ಹೇಳಿದೆ.

TATA MOTORS  CHARGING STATIONS  GREENER ENVIRONMENT  TATA MOTORS OFFERS
ಬೆಂಗಳೂರು ಸೇರಿ 250 ಹೊಸ ಫಾಸ್ಟ್ ಚಾರ್ಜಿಂಗ್ ಇವಿ ಸ್ಟೇಷನ್‌ಗಳನ್ನು ಸ್ಥಾಪಿಸಲಿರುವ ಟಾಟಾ ಮೋಟಾರ್ಸ್ (IANS)

By ETV Bharat Tech Team

Published : Aug 22, 2024, 11:39 AM IST

ಮುಂಬೈ: ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಮತ್ತು ಥಂಡರ್‌ಪ್ಲಸ್ ಸೊಲ್ಯೂಷನ್‌ಗಳ ಸಹಯೋಗದೊಂದಿಗೆ ದೇಶಾದ್ಯಂತ 250 ಹೊಸ ವೇಗದ ಚಾರ್ಜಿಂಗ್ ಇವಿ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಟಾಟಾ ಮೋಟಾರ್ಸ್ ಪ್ರಕಟಿಸಿದೆ. ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಪುಣೆ ಮತ್ತು ಕೊಚ್ಚಿ ಸೇರಿದಂತೆ 50 ಕ್ಕೂ ಹೆಚ್ಚು ನಗರಗಳಲ್ಲಿ ನೆಲೆಗೊಂಡಿರುವ ಈ ಹೊಸ ಚಾರ್ಜಿಂಗ್ ಸ್ಟೇಷನ್‌ಗಳು ಅಸ್ತಿತ್ವದಲ್ಲಿರುವ 540 ವಾಣಿಜ್ಯ ವಾಹನ ಚಾರ್ಜಿಂಗ್ ಪಾಯಿಂಟ್‌ಗಳ ನೆಟ್‌ವರ್ಕ್ ಅನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ ಎಂದು ವಾಹನ ತಯಾರಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೆಚ್ಚು-ಬಳಕೆಯ ಮಾರ್ಗಗಳಲ್ಲಿ ಲಭ್ಯವಿರುವ ಚಾರ್ಜಿಂಗ್ ಮೂಲಸೌಕರ್ಯವನ್ನು ವಿಸ್ತರಿಸುವುದರಿಂದ ಹೆಚ್ಚಿನ ಗ್ರಾಹಕರು ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳನ್ನು ಆಯ್ಕೆ ಮಾಡಲು ಮತ್ತು ವಾಹನದ ಸಮಯವನ್ನು ಸುಧಾರಿಸಲು ಉತ್ತೇಜಿಸುತ್ತದೆ. ಅಷ್ಟೇ ಅಲ್ಲ ಹೆಚ್ಚಿನ ಆದಾಯ ಮತ್ತು ಉತ್ತಮ ಲಾಭದಾಯಕತೆಯ ಪರಿಣಾಮವಾಗಿ ಸ್ವಚ್ಛ, ಹಸಿರು ಪರಿಸರಕ್ಕೆ ಕೊಡುಗೆ ನೀಡುತ್ತದೆ ಎಂದು ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ವ್ಯಾಪಾರ ಮುಖ್ಯಸ್ಥ ವಿನಯ್ ಪಾಠಕ್ ಹೇಳಿದರು.

ಈ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಸೂಕ್ತವಾದ ಸ್ಥಳಗಳು ಮತ್ತು ಹತ್ತಿರದ ಡೀಲರ್‌ಶಿಪ್‌ಗಳನ್ನು ಶಿಫಾರಸು ಮಾಡಲಾಗುವುದು. ಡೆಲ್ಟಾ ಎಲೆಕ್ಟ್ರಾನಿಕ್ಸ್ ಅಗತ್ಯ ಹಾರ್ಡ್‌ವೇರ್ ಅನ್ನು ಪೂರೈಸುತ್ತದೆ, ಥಂಡರ್‌ಪ್ಲಸ್ ಸೊಲ್ಯೂಷನ್ಸ್ ಅವುಗಳನ್ನು ಸ್ಥಾಪಿಸುತ್ತದೆ ಮತ್ತು ನಿರ್ವಹಿಸುತ್ತದೆ ಎಂದು ಕಂಪನಿ ಹೇಳಿದೆ.

ಈ ಸಹಯೋಗವು ಭಾರತದ ಎಲೆಕ್ಟ್ರಿಕ್ ಕಾರ್ಗೋ ಪರಿಸರ ವ್ಯವಸ್ಥೆಗೆ ಗಮನಾರ್ಹ ಕೊಡುಗೆ ನೀಡಲು ನಮಗೆ ಅವಕಾಶ ನೀಡುತ್ತದೆ. ನಮ್ಮ ಸುಧಾರಿತ ಚಾರ್ಜಿಂಗ್ ತಂತ್ರಜ್ಞಾನವು ದೇಶಾದ್ಯಂತ ಬಳಕೆದಾರರಿಗೆ ಎಲೆಕ್ಟ್ರಿಕ್ ವಾಣಿಜ್ಯ ವಾಹನದ ಅನುಭವವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ನಿರಂಜನ್ ನಾಯಕ್ ಹೇಳಿದರು.

Ace EV ಅನ್ನು ಟಾಟಾ ಮೋಟಾರ್ಸ್ ಆಫರ್​ ನೀಡುತ್ತಿದೆ. ಲಾಸ್ಟ್​ ಮೈಲಿ ಡೆಲಿವರಿಗಳಿಗೆ ಈ ಫೋರ್​ ವ್ಹೀಲರ್​ ಇ-ಕಾರ್ಗೋ ಪರಿಹಾರವಾಗಿದೆ. ಇದು ದೇಶಾದ್ಯಂತ 150 ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನ ಸೇವಾ ಕೇಂದ್ರಗಳಿಂದ ಬೆಂಬಲಿತವಾಗಿದೆ ಎಂದು ಟಾಟಾ ಮೋಟಾರ್ಸ್​ ಹೇಳಿದೆ. ಕ್ಲೀನರ್ ಸಾರಿಗೆ ವ್ಯವಸ್ಥೆಗಳು ಮತ್ತು ವಿವಿಧ ಸರ್ಕಾರಿ ಉಪಕ್ರಮಗಳ ಮೇಲೆ ಹೆಚ್ಚುತ್ತಿರುವ ಗಮನದಿಂದಾಗಿ ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಬೇಡಿಕೆಯು ದೃಢವಾಗಿ ಹೆಚ್ಚುವ ನಿರೀಕ್ಷೆಯಿದೆ.

ಕಳೆದ ವರ್ಷ, ಸರ್ಕಾರವು PM ಇ-ಬಸ್ ಸೇವಾ ಯೋಜನೆಯನ್ನು ಅನಾವರಣಗೊಳಿಸಿತು. 169 ಅರ್ಹ ನಗರಗಳಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ ಮಾದರಿಯ ಮೂಲಕ 10,000 ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಲು ಮತ್ತು ನಿರ್ವಹಿಸಲು ಗಣನೀಯ $2.4 ಶತಕೋಟಿಯನ್ನು ನಿಗದಿಪಡಿಸಿತು. ಈ ಪರಿಸರ ಸ್ನೇಹಿ ವಾಹನಗಳು ಶೀಘ್ರದಲ್ಲೇ ರಸ್ತೆಗಿಳಿಯಲಿವೆ. 2026 ರ ವೇಳೆಗೆ ಪೂರ್ಣ ನಿಯೋಜನೆಯನ್ನು ನಿರೀಕ್ಷಿಸಲಾಗಿದೆ.

ಕೇರ್‌ಎಡ್ಜ್ ರೇಟಿಂಗ್ಸ್‌ನ ವರದಿಯ ಪ್ರಕಾರ, ಇ-ಬಸ್ ಮತ್ತು ಲೈಟ್ ಕಮರ್ಷಿಯಲ್ ವೆಹಿಕಲ್ (ಎಲ್‌ಸಿವಿ) ವಿಭಾಗಗಳಲ್ಲಿ ಇವಿಗಳಿಗೆ ಪರಿವರ್ತನೆಯು ವಿಶೇಷವಾಗಿ ಸ್ಪಷ್ಟವಾಗಿದೆ. FY24 ರಲ್ಲಿ, ಎಲೆಕ್ಟ್ರಿಕ್ ಹೆವಿ ಪ್ಯಾಸೆಂಜರ್ ವಾಹನಗಳ (e-HPV ಗಳು), ಪ್ರಾಥಮಿಕವಾಗಿ ದೊಡ್ಡ ಎಲೆಕ್ಟ್ರಿಕ್ ಬಸ್‌ಗಳ ನೋಂದಣಿಗಳು ಗಮನಾರ್ಹವಾಗಿ ಹೆಚ್ಚಿಗೆ ಆಗಿದ್ದಾವೆ. ಮೇಲೆ ತಿಳಿಸಿದ ಅವಧಿಯಲ್ಲಿ ಎಲೆಕ್ಟ್ರಿಕ್ ಲೈಟ್ ಪ್ಯಾಸೆಂಜರ್ ವಾಹನಗಳ (ಇ-ಎಲ್‌ಪಿವಿ) ನೋಂದಣಿಯು 360 ಯುನಿಟ್‌ಗಳಿಂದ 10,500 ಯೂನಿಟ್‌ಗಳಿಗೆ ಏರಿದೆ ಎಂದು ವರದಿ ಉಲ್ಲೇಖಿಸಿದೆ.

ಓದಿ:ಸಣ್ಣ ವ್ಯಾಪಾರಿಗಳಿಗೆ ಬೇಕು ಪಿಕಪ್ ಟ್ರಕ್; 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಬೆಸ್ಟ್​ ವಾಹನಗಳಿವು - PICK UP TRUCKS UNDER 10 LAKHS

ABOUT THE AUTHOR

...view details