Paraplegics Walk Robot: ದಕ್ಷಿಣ ಕೊರಿಯಾದ ಸಂಶೋಧಕರು ಪಾರ್ಶ್ವವಾಯು ಪೀಡಿತರಿಗೆ ನಡೆಯಲು ಸಹಾಯ ಮಾಡುವ ಧರಿಸಬಹುದಾದ ರೋಬೋಟ್ವೊಂದನ್ನು ಕಂಡುಕೊಂಡಿದ್ದಾರೆ. ಈ ಕಡಿಮೆ ತೂಕದ ರೋಬೋಟ್ ಸಹಾಯದಿಂದ ಸೊಂಟದಿಂದ ಕೆಳಕ್ಕೆ ಪಾರ್ಶ್ವವಾಯುವಿಗೆ ಒಳಗಾದವರೂ ಮೆಟ್ಟಿಲುಗಳನ್ನು ಏರಲು ಸಾಧ್ಯವಾಗುತ್ತದೆ. ಅದರ ವಿಶೇಷವೆಂದರೆ ಅದು ತನ್ನ ಬಳಕೆದಾರರ ಮುಂದೆ ರೋಬೋಟ್ ತಾನೇ ಮುಂದೆ ಬರುತ್ತದೆ.
ಕೊರಿಯಾ ಅಡ್ವಾನ್ಸ್‌ಡ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ (ಕೆಎಐಎಸ್‌ಟಿ) ಎಕ್ಸೋಸ್ಕೆಲಿಟನ್ ಲ್ಯಾಬೊರೇಟರಿ ತಂಡವು ಈ ರೋಬೋಟ್ ಅನ್ನು ಸಿದ್ಧಪಡಿಸಿದೆ. ವಿಕಲಚೇತನರಿಗೆ ಅವರ ದೈನಂದಿನ ಜೀವನದಲ್ಲಿ ಸಹಾಯ ಮಾಡುವ ರೋಬೋಟ್ ಅನ್ನು ರಚಿಸುವುದು ತನ್ನ ಗುರಿಯಾಗಿದೆ ಎಂದು ತಂಡವು ಹೇಳಿದೆ.
ಪಾರ್ಶ್ವವಾಯು ಪೀಡಿತ ತಂಡದ ಸದಸ್ಯ ಕಿಮ್ ಸೆಯುಂಗ್-ಹ್ವಾನ್ ಅವರು ಈ ರೋಬೋಟ್‌ನ ಡೆಮೊವನ್ನು ತೋರಿಸಿದರು. ರೋಬೋಟ್ ಸಹಾಯದಿಂದ ಗಂಟೆಗೆ ಸುಮಾರು 3.2 ಕಿಲೋಮೀಟರ್ ವೇಗದಲ್ಲಿ ನಡೆದು ಮೆಟ್ಟಿಲು ಹತ್ತುವುದರಲ್ಲಿ ಯಶಸ್ವಿಯಾಗಿದ್ದರು. ಈ ರೋಬೋಟ್ ಸಹಾಯದಿಂದ, ಅವರು ಸೈಬಾಥ್ಲಾನ್ 2024 ರ ಎಕ್ಸೋಸ್ಕೆಲಿಟನ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.
ತನ್ನಷ್ಟಕ್ಕೆ ತಾನೇ ನಡೆದುಕೊಂಡು ಬಳಕೆದಾರರ ಹತ್ತಿರ ಬರುತ್ತದೆ ಎಂಬುದು ಇದರ ವಿಶೇಷತೆ ಎಂದು ಕಿಮ್ ಹೇಳಿದ್ದಾರೆ. ಈ ಎಕ್ಸೋಸ್ಕೆಲಿಟನ್ ಅನ್ನು WalkON Suit F1 ಎಂದು ಹೆಸರಿಸಲಾಗಿದೆ ಮತ್ತು ಇದು ಅಲ್ಯೂಮಿನಿಯಂ, ಟೈಟಾನಿಯಂನಿಂದ ತಯಾರಿಸಲ್ಪಟ್ಟಿದೆ. ಇದರ ತೂಕ ಸುಮಾರು 50 ಕೆಜಿ ಇದ್ದು, 12 ಎಲೆಕ್ಟ್ರಾನಿಕ್ ಮೋಟಾರ್ಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಮೋಟಾರುಗಳು ಮಾನವ ದೇಹದ ಕೀಲುಗಳನ್ನು ಅನುಕರಿಸುವ ಮೂಲಕ ಚಲಿಸುತ್ತವೆ.
ರೋಬೋಟ್ ತಯಾರಿಸುವ ತಂಡವು ಐರನ್ ಮ್ಯಾನ್ ಚಲನಚಿತ್ರವನ್ನು ನೋಡುವುದರಿಂದ ಸ್ಫೂರ್ತಿ ಪಡೆದಿದೆ. ಐರನ್ ಮ್ಯಾನ್ ಸಿನಿಮಾ ನೋಡಿದ ನಂತರ ಇಂತಹ ರೋಬೋಟ್ ತಯಾರಿಸಿ ಜನರಿಗೆ ಸಹಾಯ ಮಾಡಿದರೆ ಅದೇ ದೊಡ್ಡ ಕೆಲಸ ಎಂದು ಅನಿಸಿತು ಎನ್ನುತ್ತಾರೆ ತಂಡದ ಸದಸ್ಯ ಪಾರ್ಕ್ ಜಿಯೊಂಗ್ ಸು.
ನಡೆಯುವಾಗ ಆಯತಪ್ಪಿ ಬೀಳುವುದನ್ನು ತಪ್ಪಿಸಲು ಹಲವು ಸೆನ್ಸಾರ್‌ಗಳನ್ನು ಅದರಲ್ಲಿ ಅಳವಡಿಸಲಾಗಿದೆ. ಈ ಸೆನ್ಸಾರ್ಗಳು ಪ್ರತಿ ಸೆಕೆಂಡಿಗೆ 1,000 ಕ್ಕೂ ಹೆಚ್ಚು ಸಂಕೇತಗಳನ್ನು ಮೇಲ್ವಿಚಾರಣೆ ಮಾಡುತ್ತವೆ ಮತ್ತು ಬಳಕೆದಾರರ ಮುಂದಿನ ನಡೆಯನ್ನು ಊಹಿಸುತ್ತವೆ. ಅದರ ಮುಂಭಾಗದ ಭಾಗದಲ್ಲಿ ಲೆನ್ಸ್ಗಳನ್ನು ಸಹ ಅಳವಡಿಸಲಾಗಿದೆ. ಇದು ಸುತ್ತಮುತ್ತಲಿನ ಮೇಲೆ ಕಣ್ಣಿಡುತ್ತದೆ ಮತ್ತು ದಾರಿಯಲ್ಲಿನ ಅಡೆತಡೆಗಳನ್ನು ನಿರ್ಣಯಿಸುತ್ತದೆ. ಈ ಲೆನ್ಸ್ಗಳು ಬಳಕೆದಾರರಿಗೆ ಎತ್ತರವನ್ನು ಅಳೆಯುವ ಮೂಲಕ ಮೆಟ್ಟಿಲುಗಳನ್ನು ಏರಲು ಕೂಡ ಸಹಾಯ ಮಾಡುತ್ತದೆ.
ಓದಿ:ಆಹಾ!! ಹೊಸ ಇಂಟರ್ನೆಟ್ ಟಿವಿ ಸೇವೆ ಪ್ರಾರಂಭಿಸಿದ ಬಿಎಸ್ಎನ್ಎಲ್: ಖಾಸಗಿ ಕಂಪನಿಗಳಿಗೆ ಶುರುವಾಯ್ತು ಢವ-ಢವ!