ಕರ್ನಾಟಕ

karnataka

ETV Bharat / technology

ಸ್ಮಾರ್ಟ್​ಫೋನ್ ಮಾರುಕಟ್ಟೆ ಶೇ 19ರಷ್ಟು ಬೆಳವಣಿಗೆ: ಅಗ್ರಸ್ಥಾನದಲ್ಲಿ ಶಿಯೋಮಿ - ಸ್ಮಾರ್ಟ್​ಫೋನ್

2023ರ 4ನೇ ತ್ರೈಮಾಸಿಕದಲ್ಲಿ ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆ ಶೇ 19ರಷ್ಟು ಬೆಳವಣಿಗೆ ದಾಖಲಿಸಿದೆ.

India smartphone market grows 19% in Q4 2023, 5G share up 65%
India smartphone market grows 19% in Q4 2023, 5G share up 65%

By ETV Bharat Karnataka Team

Published : Feb 6, 2024, 7:17 PM IST

ನವದೆಹಲಿ: 2023ರ 4ನೇ ತ್ರೈಮಾಸಿಕದಲ್ಲಿ ಭಾರತದ ಸ್ಮಾರ್ಟ್​ಫೋನ್​ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ಶೇಕಡಾ 19ರಷ್ಟು ಬೆಳೆದಿದೆ. ಒಟ್ಟಾರೆ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಶಿಯೋಮಿ ಅಗ್ರಸ್ಥಾನದಲ್ಲಿದ್ದರೆ, ಸ್ಯಾಮ್​ಸಂಗ್ ನಂತರದ ಸ್ಥಾನದಲ್ಲಿದೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ.

ಏತನ್ಮಧ್ಯೆ ಭಾರತದ ಮಾರುಕಟ್ಟೆಯಲ್ಲಿ 5 ಜಿ ಸ್ಮಾರ್ಟ್​ಪೋನ್ ಪಾಲು ಶೇಕಡಾ 65ಕ್ಕೆ ಏರಿಕೆಯಾಗಿದೆ. ಇದು ಶೇಕಡಾ 122ರಷ್ಟು ಬೆಳವಣಿಗೆಯಾಗಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ ಸೈಬರ್ ಮೀಡಿಯಾ ರಿಸರ್ಚ್ (ಸಿಎಂಆರ್) ವರದಿಯ ಪ್ರಕಾರ, ಸ್ಯಾಮ್​ಸಂಗ್ 5ಜಿ ಸ್ಮಾರ್ಟ್​​ಪೋನ್ ಮಾರುಕಟ್ಟೆಯಲ್ಲಿ ಶೇಕಡಾ 22ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದರೆ, ವಿವೋ ಶೇಕಡಾ 18ರಷ್ಟು ಪಾಲು ಹೊಂದಿದೆ.

ಹಾಗೆಯೇ ಒಟ್ಟಾರೆ ಮೊಬೈಲ್ ಮಾರುಕಟ್ಟೆಯು ಶೇಕಡಾ 29ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಶಿಯೋಮಿ ಶೇ 19, ಸ್ಯಾಮ್​ಸಂಗ್ ಶೇ 18.9 ಮತ್ತು ವಿವೋ ಶೇ 16ರಷ್ಟು ಪಾಲಿನೊಂದಿಗೆ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ರಿಯಲ್ ಮಿ ಶೇ 12 ಮತ್ತು ಒಪ್ಪೋ ಶೇ 8ರಷ್ಟು ಪಾಲಿನೊಂದಿಗೆ ನಂತರದ ಸ್ಥಾನಗಳಲ್ಲಿವೆ.

"5 ಜಿ ಮತ್ತು ದೃಢವಾದ ಪ್ರೀಮಿಯಂ ಫೋನ್​ಗಳ ಮಾರಾಟವು ಭಾರತದಲ್ಲಿ ಸ್ಮಾರ್ಟ್​ಫೋನ್​ ಮಾರುಕಟ್ಟೆಯ ಬೆಳವಣಿಗೆಯನ್ನು ತೋರಿಸಿತ್ತು. ಸುಮಾರು 58 ಪ್ರತಿಶತದಷ್ಟು 5ಜಿ ಸ್ಮಾರ್ಟ್​ಪೋನ್‌ಗಳು ಕಡಿಮೆ ದರದಲ್ಲಿ (7,000-25,000 ರೂ.) ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುವ ಫೋನ್​ಗಳಾಗಿವೆ. ಇದು 2022ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 47 ರಷ್ಟಿತ್ತು" ಎಂದು ಸಿಎಂಆರ್​ನ ಇಂಡಸ್ಟ್ರಿ ಇಂಟೆಲಿಜೆನ್ಸ್ ಗ್ರೂಪ್​ನ ವಿಶ್ಲೇಷಕ ಶಿಪ್ರಾ ಸಿನ್ಹಾ ಹೇಳಿದ್ದಾರೆ.

ಇದಲ್ಲದೆ 50,000 ರೂ. ಶ್ರೇಣಿಯ ಸೂಪರ್ ಪ್ರೀಮಿಯಂ ಸ್ಮಾರ್ಟ್​ಫೋನ್ ವಿಭಾಗವು 65 ಪ್ರತಿಶತದಷ್ಟು ಗಮನಾರ್ಹ ಬೆಳವಣಿಗೆ ದಾಖಲಿಸಿದೆ. "4ಜಿ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಮುಖ್ಯವಾಗಿ ಇದು ಜಿಯೋದಿಂದ ಬಂದಿದ್ದಾಗಿದೆ" ಎಂದು ಅವರು ಹೇಳಿದರು.

ಇನ್ನು ಇಡೀ ವರ್ಷದ ಅಂಕಿ ಅಂಶಗಳನ್ನು ನೋಡಿದರೆ ಒಂದು ವರ್ಷದಲ್ಲಿ ಸ್ಮಾರ್ಟ್​ಫೋನ್​ ಮಾರುಕಟ್ಟೆಯು ಶೇಕಡಾ 2ರಷ್ಟು ಕುಸಿತ ದಾಖಲಿಸಿದೆ. ಮತ್ತೊಂದೆಡೆ, 5 ಜಿ ಸ್ಮಾರ್ಟ್​ಫೋನ್ ಮಾರಾಟ 2023 ರಲ್ಲಿ ಶೇಕಡಾ 67ರಷ್ಟು ಹೆಚ್ಚಾಗಿದೆ. ಸ್ಯಾಮ್​ಸಂಗ್ ಶೇಕಡಾ 18 ಮಾರುಕಟ್ಟೆ ಪಾಲನ್ನು ಉಳಿಸಿಕೊಂಡರೆ, ವಿವೋ 2023 ರಲ್ಲಿ ಶೇಕಡಾ 16 ರಷ್ಟು ಪಾಲನ್ನು ಹೊಂದಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಜನವರಿಯಲ್ಲಿ ಎಐ, ಎಫ್​ಎಂಸಿಜಿ ವಲಯದ ನೇಮಕಾತಿ ಹೆಚ್ಚಳ: ವರದಿ

ABOUT THE AUTHOR

...view details