Say Goodbye to Type 1 Diabetes:ಚೀನಾದ ವಿಜ್ಞಾನಿಗಳು ಟೈಪ್-1 ಮಧುಮೇಹಕ್ಕೆ ಹೊಸ ಚಿಕಿತ್ಸೆಯನ್ನು ಕಂಡುಹಿಡಿದಿದ್ದಾರೆ. ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟೇಷನ್ ಅಂದ್ರೆ ಮೂಲಕಣ ಬದಲಾಯಿಸುವ ಮೂಲಕ ವಿಶ್ವದಲ್ಲಿಯೇ ಮೊದಲ ಬಾರಿಗೆ ರೋಗಿಯೊಬ್ಬರನ್ನು ಈ ರೋಗದಿಂದ ಗುಣಪಡಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಟೈಪ್-1 ಮಧುಮೇಹದಿಂದ ಬಳಲುತ್ತಿದ್ದ ಅವರು ಎರಡೂವರೆ ತಿಂಗಳ ಚಿಕಿತ್ಸೆಯ ನಂತರ ಇನ್ಸುಲಿನ್ ಅಗತ್ಯವಿಲ್ಲದೇ ತನ್ನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಸಾಧ್ಯವಾಗಿದೆ. ಟಿಯಾಂಜಿನ್ ಫಸ್ಟ್ ಸೆಂಟ್ರಲ್ ಆಸ್ಪತ್ರೆ ಮತ್ತು ಪೀಕಿಂಗ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ವಿವರಗಳು ‘ಸೆಲ್’ ಪತ್ರಿಕೆಯಲ್ಲಿ ಪ್ರಕಟವಾಗಿವೆ.
ಐಲೆಟ್ ಚಿಕಿತ್ಸೆ:ಇಲ್ಲಿಯವರೆಗೆ ತಜ್ಞರು ಐಲೆಟ್ ಸೆಲ್ ಟ್ರಾನ್ಸ್‌ಪ್ಲಾಂಟೇಶನ್ ಅನ್ನು ಟೈಪ್-1 ಮಧುಮೇಹಕ್ಕೆ ಪರಿಣಾಮಕಾರಿ ಚಿಕಿತ್ಸೆ ಎಂದು ಪರಿಗಣಿಸಿದ್ದಾರೆ. ಮೇದೋಜ್ಜೀರಕ ಗ್ರಂಥಿಯ ಐಲೆಟ್ ಕೋಶಗಳು ಇನ್ಸುಲಿನ್ ಮತ್ತು ಗ್ಲುಕಗನ್‌ನಂತಹ ಹಾರ್ಮೋನುಗಳ ಉತ್ಪಾದನೆಗೆ ಕಾರಣವಾಗಿವೆ. ಈ ಹಾರ್ಮೋನುಗಳು ರಕ್ತದಲ್ಲಿ ಬಿಡುಗಡೆಯಾಗುತ್ತವೆ ಮತ್ತು ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಐಲೆಟ್ ಚಿಕಿತ್ಸೆ ವಿಧಾನದಲ್ಲಿ ಸತ್ತವರ (ದಾನಿಗಳು) ಮೇದೋಜ್ಜೀರಕ ಗ್ರಂಥಿಯಿಂದ ಐಲೆಟ್ ಕೋಶಗಳನ್ನು ಮೊದಲು ಸಂಗ್ರಹಿಸಲಾಗುತ್ತದೆ. ಟೈಪ್-1 ಮಧುಮೇಹ ಪೀಡಿತರ ಯಕೃತ್ತಿಗೆ ಅವುಗಳನ್ನು ಜೋಡಿಸಲಾಗುತ್ತದೆ. ದಾನಿಗಳ ಕೊರತೆಯಿಂದ ಈ ಚಿಕಿತ್ಸೆಗೆ ಹೆಚ್ಚಿನ ವೇಗ ಸಿಗುತ್ತಿಲ್ಲ ಎಂಬುದು ಗಮನಿಸ ಬೇಕಾದ ಅಂಶ.
ಹೊಸ ವ್ಯವಸ್ಥೆ:ಚೀನಾದ ವಿಜ್ಞಾನಿಗಳು ಇತ್ತೀಚೆಗೆ ಅಭಿವೃದ್ಧಿಪಡಿಸಿದ ಸ್ಟೆಮ್ ಸೆಲ್ ವಿಧಾನದಿಂದ ಮಧುಮೇಹ ಚಿಕಿತ್ಸೆಗೆ ಹೊಸ ಬಾಗಿಲು ತೆರೆಯಲಾಗಿದೆ. ಈ ಪ್ರಕ್ರಿಯೆಯಲ್ಲಿ, ಟೈಪ್-1 ಮಧುಮೇಹ ಪೀಡಿತರಿಂದ ಅಡಿಪೋಸ್ ಕೋಶಗಳನ್ನು ಮೊದಲು ಸಂಗ್ರಹಿಸಲಾಗುತ್ತದೆ. ರಾಸಾಯನಿಕ ಪ್ರಕ್ರಿಯೆಗಳು ಅವುಗಳನ್ನು ಪ್ಲುರಿಪೊಟೆಂಟ್ ಕಾಂಡಕೋಶಗಳಾಗಿ ಪುನರುತ್ಪಾದಿಸುತ್ತದೆ. ನಂತರ, ಆ ಕಾಂಡಕೋಶಗಳನ್ನು ಐಲೆಟ್ ಕೋಶಗಳಾಗಿ ಪರಿವರ್ತಿಸಲಾಗುತ್ತದೆ. ಅವು ತಮ್ಮದೇ ದೇಹದಿಂದ ಪಡೆದ ಜೀವಕೋಶಗಳಾಗಿರುವುದರಿಂದ, ಪ್ರತಿರಕ್ಷಣಾ ವ್ಯವಸ್ಥೆಯಿಂದ ತಿರಸ್ಕರಿಸುವ ಅಪಾಯವಿಲ್ಲ.
ಚೀನಾದ ಸಂಶೋಧನಾ ತಂಡವು ಜುಲೈನಲ್ಲಿ ಈ ಕಾಂಡಕೋಶ ಕಸಿ ಚಿಕಿತ್ಸೆಗೆ ಅನುಮೋದನೆ ಪಡೆದುಕೊಂಡಿದೆ. ವಯಸ್ಸಾದ ಮಧುಮೇಹ ರೋಗಿಯೊಬ್ಬರು ಸಂಬಂಧಿತ ಶಸ್ತ್ರಚಿಕಿತ್ಸೆಯನ್ನು 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿದರು. ಈಗಾಗಲೇ ಎರಡು ಯಕೃತ್ತು ಕಸಿ ಮತ್ತು ಒಂದು ಐಲೆಟ್ ಟ್ರಾನ್ಸ್‌ಪ್ಲಾಂಟ್‌ಗೆ (ಯಶಸ್ವಿಯಾಗಿಲ್ಲ) ಒಳಗಾಗಿದ್ದ ಸಂತ್ರಸ್ತ ಕಾಂಡಕೋಶ ಚಿಕಿತ್ಸೆಯ ನಂತರ ಬಹುತೇಕ ಸಹಜ ಸ್ಥಿತಿಗೆ ಮರಳಿದ್ದರು.
ರೋಗಿಯು ಶಸ್ತ್ರಚಿಕಿತ್ಸೆಯ ನಂತರ 75 ದಿನಗಳ ನಂತರ ಅವರು ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಇನ್ನೊಂದು ಎರಡೂವರೆ ತಿಂಗಳ ಕೊನೆಯಲ್ಲಿ, ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು 98% ಕ್ಕಿಂತ ಹೆಚ್ಚು ಸಮಯ ನಿಯಂತ್ರಣದಲ್ಲಿದೆ. ಯಕೃತ್ತಿನ ಬದಲಾಗಿ ಕಿಬ್ಬೊಟ್ಟೆಯ ಸ್ನಾಯುಗಳಿಗೆ ಕಾಂಡಕೋಶಗಳನ್ನು ಕಳುಹಿಸಿರುವುದರಿಂದ ಚಿಕಿತ್ಸೆಗಾಗಿ ದೊಡ್ಡ ಛೇದನ ಮಾಡುವ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ವಿವರಿಸಿದರು.
ಓದಿ:ವಿಜ್ಞಾನ ಲೋಕದ ಬಗ್ಗೆ ಆಸಕ್ತಿ ಮೂಡಿಸಲು ಲಿಲ್ ಬಿಗ್ ಫ್ಯಾಂಟಸಿ ಸೈನ್ಸ್ ಬಸ್ ಅನಾವರಣ; ಆಯ್ದ ಮಕ್ಕಳಿಗೆ ನಾಸಾ ಭೇಟಿಯ ಅವಕಾಶ - Science Bus unveiled