ನವದೆಹಲಿ: ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಸ್ಯಾಮ್ಸಂಗ್ ಗುರುವಾರ ಭಾರತದಲ್ಲಿ ವಿವಿಧ ವೈಶಿಷ್ಟ್ಯಗಳ ಹೊಸ ಕ್ರಿಸ್ಟಲ್ 4 ಕೆ ಟಿವಿ (Crystal 4K TV) ಸರಣಿಯನ್ನು ಬಿಡುಗಡೆ ಮಾಡಿದೆ. ಕ್ರಿಸ್ಟಲ್ ಸರಣಿಯ ಕ್ರಿಸ್ಟಲ್ 4 ಕೆ ವಿವಿಡ್, ಕ್ರಿಸ್ಟಲ್ 4 ಕೆ ವಿಷನ್ ಪ್ರೊ ಮತ್ತು ಕ್ರಿಸ್ಟಲ್ 4 ಕೆ ವಿವಿಡ್ ಪ್ರೊ ಟಿವಿಗಳು ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಕಂಪನಿಯ ಅಧಿಕೃತ ವೆಬ್ಸೈಟ್ ಮತ್ತು ಪ್ರಮುಖ ಆನ್ಲೈನ್ ಸ್ಟೋರ್ಗಳಲ್ಲಿ ಹೊಸ ಟಿವಿಗಳನ್ನು 32,990 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದಾಗಿದೆ.
"2024 ರ ಕ್ರಿಸ್ಟಲ್ 4 ಕೆ ಟಿವಿ ಸರಣಿಯು ಗ್ರಾಹಕರಿಗೆ ಅತ್ಯುನ್ನತ ಟಿವಿ ವೀಕ್ಷಣೆಯ ಅನುಭವವನ್ನು ಒದಗಿಸಲಿದೆ. ಈ ಟಿವಿಗಳು ಸ್ಮಾರ್ಟ್ ಮತ್ತು ಸಂಪರ್ಕಿತ ಜೀವನದ ಅನುಕೂಲತೆಯನ್ನು ಮತ್ತಷ್ಟು ಹೆಚ್ಚಿಸಲಿವೆ" ಎಂದು ಸ್ಯಾಮ್ಸಂಗ್ ಇಂಡಿಯಾದ ವಿಷುಯಲ್ ಡಿಸ್ಪ್ಲೇ ವ್ಯವಹಾರದ ಹಿರಿಯ ಉಪಾಧ್ಯಕ್ಷ ಮೋಹನ್ ದೀಪ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೊಸ ಟಿವಿ ಸರಣಿಯು 43 ಇಂಚು, 50 ಇಂಚು, 55 ಇಂಚು, 65 ಇಂಚು ಮತ್ತು 75 ಇಂಚಿನ ಸ್ಕ್ರೀನ್ ಗಾತ್ರಗಳಲ್ಲಿ ಲಭ್ಯವಿವೆ. ಇವು ಸ್ಯಾಮ್ಸಂಗ್ ಟಿವಿ ಪ್ಲಸ್ ಮತ್ತು Calm Onboarding ನೊಂದಿಗೆ ಅಂತರ್ನಿರ್ಮಿತ ಐಒಟಿ ಹಬ್ನಂಥ ವೈಶಿಷ್ಟ್ಯಗಳನ್ನು ಒಳಗೊಂಡಿವೆ.
ಇದಲ್ಲದೆ ಹೊಸ ಸರಣಿಯು 4 ಕೆ ಅಪ್ ಸ್ಕೇಲಿಂಗ್ ವೈಶಿಷ್ಟ್ಯದಿಂದ ನಿಯಂತ್ರಿಸಲ್ಪಡುತ್ತದೆ. ಇದು 4 ಕೆ ಡಿಸ್ಪ್ಲೇಯ ಹೆಚ್ಚಿನ ರೆಸಲ್ಯೂಶನ್ಗೆ ಸರಿಹೊಂದುವಂತೆ ಕಡಿಮೆ-ರೆಸಲ್ಯೂಶನ್ ಕಂಟೆಂಟ್ನ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇದು ನೈಜವಾಗಿ ಕಾಣುವ 4 ಕೆ ಚಿತ್ರದ ಗುಣಮಟ್ಟವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ. ಈ ಸರಣಿಯು ಸ್ಮಾರ್ಟ್ ಹಬ್ ಅನ್ನು ಸಹ ಒಳಗೊಂಡಿದೆ. ಇದು ಮನರಂಜನೆ, ಆಂಬಿಯೆಂಟ್ ಮತ್ತು ಗೇಮಿಂಗ್ ಆಯ್ಕೆಗಳನ್ನು ಒಟ್ಟಿಗೆ ಜೋಡಿಸುವ ಸ್ಮಾರ್ಟ್ ಹೋಮ್ ವೈಶಿಷ್ಟ್ಯದ ಕೇಂದ್ರ ಬಿಂದುವಾಗಿದೆ.
ಅಮೆರಿಕದ ಮುಂಚೂಣಿ ಗೃಹೋಪಯೋಗಿ ಎಲೆಕ್ಟ್ರಾನಿಕ್ ಬ್ರಾಂಡ್ ಆದ ಸ್ಯಾಮ್ಸಂಗ್: ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಕಳೆದ ವರ್ಷ ಅಮೆರಿಕದಲ್ಲಿ ಮಾರುಕಟ್ಟೆ ಪಾಲಿನ ದೃಷ್ಟಿಯಿಂದ ಅತ್ಯಂತ ಜನಪ್ರಿಯ ಗೃಹೋಪಯೋಗಿ ಬ್ರಾಂಡ್ ಆಗಿ ಹೊರಹೊಮ್ಮಿದೆ. ಮಾರುಕಟ್ಟೆ ಸಂಶೋಧಕ ಟ್ರಾಕ್ ಲೈನ್ನ ಅಂಕಿಅಂಶಗಳ ಪ್ರಕಾರ, ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ 2023 ರಲ್ಲಿ ಯುಎಸ್ನಲ್ಲಿ ಗೃಹೋಪಯೋಗಿ ವಸ್ತುಗಳ ಮಾರುಕಟ್ಟೆಯ ಶೇಕಡಾ 21 ರಷ್ಟು ಪಾಲು ಪಡೆದುಕೊಂಡಿದೆ. ಕೊರಿಯಾದ ಎಲ್ಜಿ ಎಲೆಕ್ಟ್ರಾನಿಕ್ಸ್ ಶೇಕಡಾ 19, ಜನರಲ್ ಎಲೆಕ್ಟ್ರಿಕ್ ಶೇಕಡಾ 18 ಮತ್ತು ವರ್ಲ್ ಪೂಲ್ ಶೇಕಡಾ 15 ರಷ್ಟು ಮಾರುಕಟ್ಟೆ ಪಾಲಿನೊಂದಿಗೆ ನಂತರದ ಸ್ಥಾನಗಳಲ್ಲಿವೆ.
ಇದನ್ನೂ ಓದಿ : ಸ್ಯಾಮ್ಸಂಗ್ ಗ್ಯಾಲಕ್ಸಿ M ಸರಣಿಯ ಹೊಸ ಸ್ಮಾರ್ಟ್ಫೋನ್ ಬಿಡುಗಡೆ: ₹__ಆರಂಭಿಕ ಬೆಲೆಯಲ್ಲಿ ಲಭ್ಯ - Samsung Smartphones