ನವದೆಹಲಿ: ರಿಯಲ್ ಮಿ ತನ್ನ ಹೊಸ ಮಧ್ಯಮ ಶ್ರೇಣಿಯ ಸ್ಮಾರ್ಟ್ ಫೋನ್ ನಾರ್ಜೋ 70 ಪ್ರೊ 5 ಜಿ (Narzo 70 Pro 5G) ಯನ್ನು ಬಿಡುಗಡೆ ಮಾಡಿದೆ. 10 ಕ್ಕೂ ಹೆಚ್ಚು ರೀತಿಯ ಸನ್ನೆಗಳೊಂದಿಗೆ ದೈಹಿಕ ಸಂಪರ್ಕವಿಲ್ಲದೆ ಸಾಧನವನ್ನು ನಿರ್ವಹಿಸಲು ಅನುವು ಮಾಡಿಕೊಡುವ 'ಏರ್ ಗೆಸ್ಚರ್ಸ್' (air gestures) ಎಂಬ ವೈಶಿಷ್ಟ್ಯವನ್ನು ಈ ಫೋನ್ ಹೊಂದಿದೆ. ವೇಗದ ಸಂಪರ್ಕ, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ದೃಢವಾದ ವೈಶಿಷ್ಟ್ಯಗಳನ್ನು ಈ ಫೋನ್ ಒಳಗೊಂಡಿದೆ.
ರಿಯಲ್ ಮಿ ನಾರ್ಜೋ 70 ಪ್ರೊ 5 ಜಿ ಸರಣಿಯ 8GB+256GB ಮಾದರಿಯ ಇತರ ವೈಶಿಷ್ಟ್ಯಗಳನ್ನು ನೋಡುವುದಾದರೆ, ಇದು ನಯವಾದ ಮತ್ತು ಆಧುನಿಕ ವಿನ್ಯಾಸವನ್ನು ಹೊಂದಿದೆ. ಸಾಧನವು ವೃತ್ತಾಕಾರದ ಅಂಚುಗಳ ಸ್ಲಿಮ್ ಪ್ರೊಫೈಲ್ ಹೊಂದಿರುವುದರಿಂದ ಕೈಯಲ್ಲಿ ಹಿಡಿದುಕೊಳ್ಳಲು ಆರಾಮದಾಯಕವಾಗಿದೆ. ಹಿಂಭಾಗದಲ್ಲಿ ಗಾಜಿನ ನವಿರು ಮ್ಯಾಟ್ ಫಿನಿಶ್ ನೊಂದಿಗೆ ಸಂಯೋಜಿಸಲ್ಪಟ್ಟಿರುವುದು ಗಮನ ಸೆಳೆಯುತ್ತದೆ. ಇನ್ನು ಕ್ಯಾಮೆರಾ ಮಾಡ್ಯೂಲ್ನ ಸ್ಥಾನವು ಅತ್ಯಾಧುನಿಕತೆಯ ಸ್ಪರ್ಶವನ್ನು ನೀಡುತ್ತದೆ.
ಈ ಸ್ಮಾರ್ಟ್ ಫೋನ್ 6.67 ಇಂಚಿನ ಅಮೋಲೆಡ್ ಡಿಸ್ ಪ್ಲೇ, ನಯವಾದ 120 ಹೆರ್ಟ್ಜ್ ರಿಫ್ರೆಶ್ ರೇಟ್ ಹೊಂದಿದೆ. ಸಾಮಾಜಿಕ ಮಾಧ್ಯಮ ಫೀಡ್ ಗಳ ಮೂಲಕ ಸ್ಕ್ರಾಲ್ ಮಾಡುವಾಗ ಅಥವಾ ವೀಡಿಯೊಗಳನ್ನು ನೋಡುವಾಗ ಈ ಹೆಚ್ಚಿನ ರಿಫ್ರೆಶ್ ರೇಟ್ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ. ಬಣ್ಣಗಳು ಸ್ಪಷ್ಟವಾಗಿವೆ ಮತ್ತು ಪ್ರಕಾಶಮಾನತೆಯ ಮಟ್ಟಗಳು ಒಳಾಂಗಣ ಮತ್ತು ಹೊರಾಂಗಣ ಬಳಕೆಗೆ ಸೂಕ್ತವಾಗಿವೆ. 50MP Sony IMX890 ಕ್ಯಾಮೆರಾ ಜೊತೆಗೆ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ವೈಶಿಷ್ಟ್ಯ ಇದರಲ್ಲಿದೆ.
ನಾರ್ಜೋ 70 ಪ್ರೊ 5ಜಿ ಮೀಡಿಯಾಟೆಕ್ ಡೈಮೆನ್ಸಿಟಿ 7050 5ಜಿ ಚಿಪ್ ಸೆಟ್ ಹೊಂದಿದೆ. ಇಮೇಲ್ ಕಳುಹಿಸುವುದು, ಫೋನ್ ಕರೆ ಮಾಡುವುದು, ಸರ್ಫಿಂಗ್, ಬ್ರೌಸಿಂಗ್, ವೀಡಿಯೊ ನೋಡುವುದು ಮತ್ತು ಇತರ ವಾಡಿಕೆಯ ಕೆಲಸಗಳ ಸಂದರ್ಭದಲ್ಲಿ ಇದು ಯಾವುದೇ ಅಡೆತಡೆ ಇಲ್ಲದೆ ಕೆಲಸ ಮಾಡುತ್ತದೆ.