ಕರ್ನಾಟಕ

karnataka

ETV Bharat / technology

ಪಿಂಕ್ ಮೂನ್ 2024: ಎಲ್ಲಿ ಯಾವಾಗ ಕಾಣಿಸುತ್ತೆ ಗೊತ್ತಾ..?; ಭಾರತದಲ್ಲಿ ಇದಕ್ಕಿದೆ ಐತಿಹಾಸಿಕ ಮಹತ್ವ! - FULL MOON APRIL - FULL MOON APRIL

ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಹುಣ್ಣಿಮೆಯಂದು ವಿಶ್ವದ ಕೆಲ ಭಾಗಗಳಲ್ಲಿ ಪಿಂಕ್ ಮೂನ್ ಕಾಣಿಸಲಿದೆ.

Pink Full Moon 2024:
Pink Full Moon 2024:

By ETV Bharat Karnataka Team

Published : Apr 23, 2024, 2:25 PM IST

ಹೈದರಾಬಾದ್:2024 ರ ನಾಲ್ಕನೇ ಹುಣ್ಣಿಮೆ ಚಂದ್ರ ಪಿಂಕ್ ಮೂನ್ ಮಂಗಳವಾರ ಮತ್ತು ಬುಧವಾರದಂದು ಕಾಣಿಸಲಿದೆ. 'ಲೈರಿಡ್' ಉಲ್ಕಾಪಾತದ ಮಧ್ಯೆ ಈ ಹುಣ್ಣಿಮೆ ಬರುವುದರಿಂದ ಏಪ್ರಿಲ್ ತಿಂಗಳಲ್ಲಿ ಮತ್ತೊಂದು ಸುಂದರವಾದ ಆಕಾಶದೃಶ್ಯ ಕಾಣಿಸಲಿದೆ.

ಈ ವಿಶೇಷ ಹುಣ್ಣಿಮೆ ಚಂದಿರನ ದರ್ಶನವು ಆಕಾಶ ಪ್ರಿಯರು ಮತ್ತು ನಕ್ಷತ್ರ ವೀಕ್ಷಕರಿಗೆ ಹಬ್ಬವಾಗಲಿದೆ. ನಾಸಾ ಪ್ರಕಾರ, ಏಪ್ರಿಲ್ 23 ರಂದು ಪಿಂಕ್ ಮೂನ್ ಅತ್ಯಂತ ಪ್ರಕಾಶಮಾನವಾಗಿ ಕಾಣಿಸಲಿದ್ದು, ಕನ್ಯಾರಾಶಿ ನಕ್ಷತ್ರಪುಂಜದಲ್ಲಿ, ನಕ್ಷತ್ರ ಸ್ಪಿಕಾಗೆ ಹತ್ತಿರದಲ್ಲಿ ಗೋಚರಿಸುತ್ತದೆ. ಸೋಮವಾರ ಮತ್ತು ಬುಧವಾರ ಗುಲಾಬಿ ಚಂದ್ರನನ್ನು ನೋಡಬಹುದಾದರೂ, ಮಂಗಳವಾರ ಅದು ಮತ್ತೂ ಪ್ರಕಾಶಮಾನವಾಗಿರುತ್ತದೆ.

ಪಿಂಕ್ ಮೂನ್ ಎಂದೂ ಕರೆಯಲ್ಪಡುವ ಏಪ್ರಿಲ್​ನ ಹುಣ್ಣಿಮೆ ಏಪ್ರಿಲ್ 23 ರ ಮಂಗಳವಾರ ನಿಖರವಾಗಿ ಪೂರ್ವ ಸಮಯ (ಇಟಿ) ಸಂಜೆ 7.49 ಕ್ಕೆ ಸಂಭವಿಸಲಿದೆ ಮತ್ತು ಭಾರತದಲ್ಲಿ ಏಪ್ರಿಲ್ 24 ರಂದು ಬೆಳಗ್ಗೆ 5.19 ಕ್ಕೆ ಇಂಡಿಯಾ ಸ್ಟ್ಯಾಂಡರ್ಡ್ ಟೈಮ್ (ಐಎಸ್ ಟಿ) ಗೆ ಇದು ಸಮಾನವಾಗಿರುತ್ತದೆ.

ಪಿಂಕ್ ಮೂನ್ ಎಂದರೇನು?: ಪಿಂಕ್ ಮೂನ್ ಎಂಬುದು ವಾಸ್ತವದಲ್ಲಿ ಅದರ ಬಣ್ಣದಿಂದ ಹೆಸರಿಸಲಾಗಿರುವುದು ಅಲ್ಲ. ಬದಲಿಗೆ ಪೂರ್ವ ಉತ್ತರ ಅಮೆರಿಕಾದ ಸ್ಥಳೀಯ "ಪಾಚಿ ಗುಲಾಬಿ" ಸೇರಿದಂತೆ ವಸಂತಕಾಲದ ಆರಂಭದಲ್ಲಿ ಅರಳುವ ವೈಲ್ಡ್ ಫ್ಲವರ್ ಗಳ ಹೆಸರನ್ನು ಅದಕ್ಕೆ ಇಡಲಾಗಿದೆ. ಗುಲಾಬಿ ಚಂದ್ರನು ವಸಂತಕಾಲದ ಆರಂಭವನ್ನು ಸೂಚಿಸುತ್ತಾನೆ. ಈ ವಾರದಲ್ಲಿ ಆಕಾಶದಲ್ಲಿ ನಡೆಯುವ ವಿದ್ಯಮಾನವು ಗುಲಾಬಿ ಚಂದ್ರನನ್ನು ನೋಡುವ ಅದ್ಭುತ ಅವಕಾಶವನ್ನು ನೀಡುತ್ತದೆ.

ಗುಲಾಬಿ ಚಂದ್ರನ ಮಹತ್ವ:ಗುಲಾಬಿ ಚಂದ್ರನು ವಿವಿಧ ಸ್ಥಳೀಯ ಸಮುದಾಯಗಳಲ್ಲಿ ಅಪಾರ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಬದಲಾಗುತ್ತಿರುವ ಋತುವನ್ನು ಪ್ರತಿಬಿಂಬಿಸುವ ವಿಶಿಷ್ಟ ಹೆಸರಿನೊಂದಿಗೆ ಇದನ್ನು ಕರೆಯಲಾಗುತ್ತದೆ. ಓಗ್ಲಾಲರು ಇದನ್ನು "ಕೆಂಪು ಹುಲ್ಲು ಕಾಣಿಸಿಕೊಳ್ಳುವ ಚಂದ್ರ" ಎಂದು ಕರೆಯುತ್ತಾರೆ. ಟ್ಲಿಂಗ್ಟ್ ಗಳು ಇದನ್ನು "ಮೊಳಕೆಯೊಡೆಯುವ ಹುಲ್ಲಿನ ಚಂದ್ರ" ಎಂದು ಕರೆಯುತ್ತಾರೆ ಮತ್ತು ಯಹೂದಿ ಜನರು ಪಸ್ಕ ಹಬ್ಬದ ಆರಂಭವನ್ನು ಸೂಚಿಸಲು ಇದನ್ನು "ಗುಲಾಬಿ ಚಂದ್ರ" ಎಂದು ಕರೆಯುತ್ತಾರೆ.

ಭಾರತದಲ್ಲಿ ಪಿಂಕ್ ಮೂನ್ ನ ಮಹತ್ವ: ಹಿಂದೂ ಲುನಿಸೋಲಾರ್ ಕ್ಯಾಲೆಂಡರ್​ನಲ್ಲಿ ಹಲವಾರು ವ್ಯತ್ಯಾಸಗಳಿವೆ. ಆದರೆ ಹೆಚ್ಚಿನ ಪ್ರದೇಶಗಳಲ್ಲಿ ಈ ಹುಣ್ಣಿಮೆಯಂದು ಹನುಮಾನ್ ಜಯಂತಿಯನ್ನು ಆಚರಿಸಲಾಗುತ್ತದೆ. ಶ್ರೀಲಂಕಾದಲ್ಲಿನ ಬೌದ್ಧರು ಈ ಹುಣ್ಣಿಮೆಯನ್ನು ಬಕ್ ಪೋಯಾ ಎಂದು ಆಚರಿಸುತ್ತಾರೆ. ಬುದ್ಧನು ಶ್ರೀಲಂಕಾಕ್ಕೆ ಭೇಟಿ ನೀಡಿ ಯುದ್ಧವನ್ನು ತಪ್ಪಿಸಿದ ನೆನಪಿಗಾಗಿ ಈ ಹುಣ್ಣಿಮೆಯನ್ನು ಅಲ್ಲಿ ಆಚರಿಸಲಾಗುತ್ತದೆ.

ಇದನ್ನೂ ಓದಿ : ಗೂಗಲ್, ಎನ್ವಿಡಿಯಾದ ಎಐ ತಂತ್ರಜ್ಞಾನದಿಂದ ಚಂಡಮಾರುತಗಳ ನಿಖರ ಮುನ್ಸೂಚನೆ ಸಾಧ್ಯ: ವರದಿ - Artificial intelligence

ABOUT THE AUTHOR

...view details