ಕರ್ನಾಟಕ

karnataka

ETV Bharat / technology

ಓಪನ್ ಎಐ ಮತ್ತೊಂದು ಸಂಚಲನ: ಚಾಟ್​ಜಿಪಿಟಿಯಲ್ಲಿ ಅದ್ಭುತ ವೈಶಿಷ್ಟ್ಯ ಪರಿಚಯ!

ChatGPT Search Engine Feature: ಓಪನ್ ಎಐ ಮತ್ತೊಂದು ಸಂಚಲನ ಸೃಷ್ಟಿಸಿದೆ. ಚಾಟ್​ಜಿಪಿಟಿಯಲ್ಲಿ ಸರ್ಚ್​ ಎಂಜಿನ್​ ಎಂಬ ಅದ್ಭುತ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ..

CHATGPT SEARCH ENGINE  CHATGPT SEARCH ENGINE FEATURE  OPENAI NEW FEATURE  OPENAI CHATGPT
ಚಾಟ್​ಜಿಪಿಟಿಯಲ್ಲಿ ಅದ್ಭುತ ವೈಶಿಷ್ಟ್ಯ ಪರಿಚಯ (ETV Bharat)

By ETV Bharat Tech Team

Published : 4 hours ago

ChatGPT Search Engine Feature: ಎಐ ಆಧಾರಿತ ಚಾಟ್ ಜಿಪಿಟಿ ಬಿಡುಗಡೆ ಮಾಡುವ ಮೂಲಕ ಸಂಚಲನ ಮೂಡಿಸಿರುವ ಓಪನ್ AI ಮತ್ತೊಂದು ಅದ್ಭುತ ಫೀಚರ್ ತಂದಿದೆ. ಗೂಗಲ್​ಗೆ ಪೈಪೋಟಿ ನೀಡಲು ಚಾಟ್​ಜಿಪಿಟಿ ಸರ್ಚ್ ಎಂಜಿನ್ ವೈಶಿಷ್ಟ್ಯವನ್ನು ತಂದಿದೆ. ಈ ಹೊಸ ವೈಶಿಷ್ಟ್ಯವು ಬಳಕೆದಾರರು ತಮ್ಮ ಚಾಟ್ ಇತಿಹಾಸವನ್ನು ಹುಡುಕಲು ಅನುಮತಿಸುತ್ತದೆ. ಅಂದರೆ ಈ ವೈಶಿಷ್ಟ್ಯದ ಮೂಲಕ ಬಳಕೆದಾರರು ತಮಗೆ ಬೇಕಾದ ಮಾಹಿತಿಯನ್ನು ಹಳೆಯ ಚಾಟ್‌ಗಳಿಂದ ಹಿಂಪಡೆಯಬಹುದಾಗಿದೆ.

ChatGPT ಈಗಾಗಲೇ ಈ ಹೊಸ ಹುಡುಕಾಟ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಇದು ಕಾಲಕಾಲಕ್ಕೆ ಬಳಕೆದಾರರ ಪ್ರಶ್ನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಹುಡುಕುತ್ತದೆ ಮತ್ತು ಅವುಗಳನ್ನು ಬಳಕೆದಾರರ ಮುಂದೆ ಪ್ರಸ್ತುತಪಡಿಸುತ್ತದೆ. ಅಲ್ಲದೇ, ಕ್ರೀಡೆಯಿಂದ ಹಿಡಿದು ಸ್ಟಾಕ್ ಅಪ್​ಡೇಟ್​ವರಿಗೆ ಎಲ್ಲವನ್ನೂ ಒಳಗೊಂಡಿರುವ ಕಂಪನಿಯು ಇನ್ನು ಮುಂದೆ ಬಳಕೆದಾರರು ತಮ್ಮ ಪ್ರಶ್ನೆಗಳಿಗೆ ಮತ್ತು ಸಂಬಂಧಿತ ವೆಬ್ ಲಿಂಕ್‌ಗಳಿಗೆ ತ್ವರಿತ ಉತ್ತರಗಳನ್ನು ಪಡೆಯಲಿದ್ದಾರೆ. ಆದರೆ, ಈ ವೈಶಿಷ್ಟ್ಯವು ಪ್ರಸ್ತುತ ChatGPT ವೆಬ್ ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದೆ.

ಚಾಟ್ ಇತಿಹಾಸ ಹುಡುಕಾಟ ವೈಶಿಷ್ಟ್ಯ:OpenAI X (Twitter) ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಹೊಸ ವೈಶಿಷ್ಟ್ಯ ಪರಿಚಯಿಸಿತು. ಹಳೆಯ ಚಾಟ್‌ಗಳ ಇತಿಹಾಸವನ್ನು ಹುಡುಕಲು ಬಳಸಬಹುದಾದ ಈ ವೈಶಿಷ್ಟ್ಯಕ್ಕಾಗಿ ಬಳಕೆದಾರರು ಬಹಳ ಸಮಯದಿಂದ ಕಾಯುತ್ತಿದ್ದಾರೆ.. ಅಂತಿಮವಾಗಿ ಕಂಪನಿಯು ಇದೀಗ ಇದನ್ನು ಪ್ರಾರಂಭಿಸಿದೆ. ಲಭ್ಯವಿರುವ ಬಳಕೆದಾರರಿಗೆ ವಿಂಡೋದ ಎಡಭಾಗದಲ್ಲಿರುವ ChatGPT ವೆಬ್ ಸೈಡ್‌ಪ್ಯಾನಲ್‌ನಲ್ಲಿ ಮ್ಯಾಗ್ನಿಫೈಯಿಂಗ್​ ಗ್ಲಾಸ್​ ಐಕಾನ್‌ನೊಂದಿಗೆ ಈ ವೈಶಿಷ್ಟ್ಯವು ಗೋಚರಿಸುತ್ತದೆ. ಬಳಕೆದಾರರು ಇದನ್ನು ಟ್ಯಾಪ್ ಮಾಡಿ ಅಗತ್ಯವಿರುವ ಹಳೆಯ ಚಾಟ್‌ಗಳನ್ನು ಹುಡುಕಲು ನಿರ್ದಿಷ್ಟ ಕೀವರ್ಡ್‌ಗಳನ್ನು ಟೈಪ್ ಮಾಡಬಹುದಾಗಿದೆ.

ಇದು ಯಾವಾಗ ಲಭ್ಯ?:ಈ ವೈಶಿಷ್ಟ್ಯವು ಪ್ರಸ್ತುತ ChatGPT ಪ್ಲಸ್ ಬಳಕೆದಾರರು ಮತ್ತು ಕಂಪನಿಯ ತಂಡದ ಸದಸ್ಯರಿಗೆ ಮಾತ್ರ ಲಭ್ಯವಿದೆ. ಈ ವೈಶಿಷ್ಟ್ಯವು ಒಂದು ವಾರದೊಳಗೆ ಲಭ್ಯವಾಗಲಿದೆ ಎಂದು OpenAI ಹೇಳಿದೆ. ಅಂದರೆ ಕೆಲವೇ ದಿನಗಳಲ್ಲಿ ಈ ವೈಶಿಷ್ಟ್ಯವು ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ಆದರೆ ಉಚಿತ ಆವೃತ್ತಿಯನ್ನು ಹೊಂದಿರುವ ಬಳಕೆದಾರರು ಈ ವೈಶಿಷ್ಟ್ಯಕ್ಕಾಗಿ ಮುಂದಿನ ತಿಂಗಳವರೆಗೆ ಕಾಯಬೇಕಾಗಿದೆ.

ಓದಿ:ಮಾರುಕಟ್ಟೆಯಲ್ಲಿ ಆಪಲ್​ ಹವಾ - ಸೂಪರ್ ಸ್ಪೀಡ್ ಮಿನಿ ಡೆಸ್ಕ್‌ಟಾಪ್ ಕಂಪ್ಯೂಟರ್ ಲಾಂಚ್​

ABOUT THE AUTHOR

...view details