ETV Bharat / technology

ಭಾರತದಲ್ಲಿ ಸಾರ್ವಕಾಲಿಕ ಆದಾಯದ ದಾಖಲೆ ಬರೆದ ಆಪಲ್​: ಮತ್ತೆ ನಾಲ್ಕ ಸ್ಟೋರ್​ ತೆಗೆಯುವುದಾಗಿ ಹೇಳಿದ ಕುಕ್ - APPLE SETS ALL TIME REVENUE RECORD

Apple Sets All Time Revenue Record: ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆಪಲ್ ಭಾರತದಲ್ಲಿ ಸಾರ್ವಕಾಲಿಕ ಆದಾಯದ ದಾಖಲೆ ಗಳಿಸಿದೆ. ಕಂಪನಿಯು ಭಾರತದಲ್ಲಿ ಇನ್ನೂ ನಾಲ್ಕು ಚಿಲ್ಲರೆ ಅಂಗಡಿಗಳನ್ನು ತೆರೆಯಲು ಸಿದ್ಧತೆ ನಡೆಸಿದೆ.

TIM COOK  APPLE STORE  APPLE STORE INDIA
ಭಾರತದಲ್ಲಿ ಸಾರ್ವಕಾಲಿಕ ಆದಾಯದ ದಾಖಲೆ ಬರೆದ ಆಪಲ್ (Apple)
author img

By ETV Bharat Tech Team

Published : Nov 1, 2024, 2:09 PM IST

Apple Sets All Time Revenue Record: ಭಾರತದಲ್ಲಿ ಆಪಲ್​ ಕಂಪನಿಯ ಹವಾ ಜೋರಾಗಿಯೇ ನಡೆಯುತ್ತಿದೆ. ಈ ಬಾರಿ ತ್ರೈಮಾಸಿಕದಲ್ಲಿ ಕಂಪನಿ ಆದಾಯದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಈ ಬಗ್ಗೆ ಟೀಂ ಕುಕ್​ ಸಂತಸ ವ್ಯಕ್ತ ಪಡಿಸಿದ್ದು, ಇನ್ನು ನಾಲ್ಕು ಆಪಲ್​ ಸ್ಟೋರ್​ಗಳನ್ನು ತೆಗೆಯಲು ಬಯಸಿದೆ.

ಭಾರತದಲ್ಲಿ ಸೆಪ್ಟಂಬರ್​ ಕ್ವಾರ್ಟರ್​ನ ಆದಾಯದ ವಿಷಯದಲ್ಲಿ ಆಪಲ್​ ಸಾರ್ವಕಾಲಿಕ ದಾಖಲೆ ಬರೆದಿದೆ. ಇದರ ಬಗ್ಗೆ ಸಂತಸ ವ್ಯಕ್ತ ಪಡಿಸಿದೆ ಆಪಲ್​ ಕಂಪನಿಯ ಸಿಇಒ ಭಾರತದಲ್ಲಿ ಇನ್ನು ನಾಲ್ಕು ರಿಟೈಲ್​ ಶಾಪ್​ ತೆರೆಯುವುದಾಗಿ ಹೇಳಿದ್ದಾರೆ.

ಈ ಜುಲೈ ಮತ್ತು ಸೆಪ್ಟಂಬರ್​ ಅಂತರದಲ್ಲಿ 94.9 ಬಿಲಿಯನ್​ ಡಾಲರ್​ ಆದಾಯದ ವರದಿ ಮಾಡಿದೆ. ಈ ಸೆಪ್ಟಂಬರ್​ ಕ್ವಾರ್ಟರ್​ನಲ್ಲಿ ಆಪಲ್​ ದಾಖಲೆ ಬರೆದಿದ್ದು, ಕಳೆದ ವರ್ಷಕ್ಕಿಂತ ಶೇಕಡ 6ರಷ್ಟು ಹೆಚ್ಚಾಗಿದೆ. ಪ್ರತಿ ಭೌಗೋಳಿಕ ವಿಭಾಗದಲ್ಲಿ ಐಫೋನ್​ ಬೆಳೆಯುತ್ತಿದೆ. ಸರ್ವಿಸ್​ ವಿಭಾಗದಲ್ಲಿಯೂ ಸಹ ಸಾರ್ವಕಾಲಿಕ ದಾಖಲೆ ಬರೆದಿದ್ದು, ವರ್ಷದಿಂದ ವರ್ಷಕ್ಕೆ ಶೇಕಡ 12ರಷ್ಟು ಏರಿಕೆಯಾಗುತ್ತಿದೆ.

ನಾವು ಭಾರತದಲ್ಲಿ ಸಾರ್ವಕಾಲಿಕ ಆದಾಯ ದಾಖಲೆ ಬರೆದಿದ್ದೇವೆ. ಅಲ್ಲಿಯ ಸಂಭ್ರಮದಿಂದ ನಾವು ಉತ್ಸುಕರಾಗಿದ್ದೇವೆ. ಇದು ಆಪಲ್​ನ ಅಸಾಧಾರಣ ವರ್ಷವಾಗಿದೆ ಎಂದು ಟೀಂ ಕುಕ್​ ಹೇಳಿದ್ದಾರೆ.

ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳ ಬೆಳವಣಿಗೆ ಜೊತೆಗೆ, ಮೆಕ್ಸಿಕೋ, ಬ್ರೆಜಿಲ್, ಮಧ್ಯಪ್ರಾಚ್ಯ, ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ ಎರಡಂಕಿಯ ಬೆಳವಣಿಗೆಯೊಂದಿಗೆ ನಾವು ಅನೇಕ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಬಲವಾದ ಕಾರ್ಯಕ್ಷಮತೆ ಕಂಡಿದ್ದೇವೆ ಎಂದು ಕುಕ್​ ಮಾಹಿತಿ ನೀಡಿದರು. ಆಪಲ್ ಭಾರತದಲ್ಲಿ (ನವದೆಹಲಿ (Saket) ಮತ್ತು ಮುಂಬೈ (BKC)) ಎರಡು ಚಿಲ್ಲರೆ ಅಂಗಡಿಗಳನ್ನು ಹೊಂದಿದೆ.

ನಾಲ್ಕು ಹೊಸ ಮಳಿಗೆ: ಭಾರತದಲ್ಲಿ ಗ್ರಾಹಕರಿಗೆ ನಾಲ್ಕು ಹೊಸ ಮಳಿಗೆಗಳನ್ನು ತರುತ್ತಿದ್ದೇವೆ. ನಾವು ಶಿಕ್ಷಣದ ಬಗ್ಗೆ ಉತ್ಸುಕರಾಗಿದ್ದೇವೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಪ್ರಪಂಚದ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ನಂಬುತ್ತೇವೆ ಅಂತಾ ಕುಕ್ ಹೇಳಿದರು.

ಲುಕಾ ಮೇಸ್ಟ್ರಿ, SVP, ಮುಖ್ಯ ಹಣಕಾಸು ಅಧಿಕಾರಿ ಪ್ರಕಾರ, ಕಂಪನಿಯು "ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸಾರ್ವಕಾಲಿಕ ಆದಾಯದ ದಾಖಲೆಯನ್ನು" ಸ್ಥಾಪಿಸಿದೆ. ಸ್ಥಳೀಯ ಮೊಬೈಲ್ ಉತ್ಪಾದನೆಯಲ್ಲಿ ಭಾರತವು ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುವುದನ್ನು ಮುಂದುವರೆಸುತ್ತಿರುವುದರಿಂದ, ಟೆಕ್ ದೈತ್ಯ ಆಪಲ್ ಭಾರತದಿಂದ ರಫ್ತು ಮಾಡುವ FY24 ಅಂಕಿ- ಅಂಶಗಳನ್ನು ಮೀರಿಸುವ ಹಾದಿಯಲ್ಲಿದೆ, ಇತ್ತೀಚಿನ ಉದ್ಯಮದ ಮಾಹಿತಿಯ ಪ್ರಕಾರ, ಈ ಹಣಕಾಸು ವರ್ಷದ (FY25) ಮೊದಲ ಆರು ತಿಂಗಳಲ್ಲಿ 50,000 ಕೋಟಿ ($ 6 ಶತಕೋಟಿಗಿಂತ ಹೆಚ್ಚು) ತಲುಪಿದೆ.

ಕಂಪನಿಯು "ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸಾರ್ವಕಾಲಿಕ ಆದಾಯದ ದಾಖಲೆಯನ್ನು" ಸ್ಥಾಪಿಸಿದೆ. ಸ್ಥಳೀಯ ಮೊಬೈಲ್ ಉತ್ಪಾದನೆಯಲ್ಲಿ ಭಾರತವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುವುದನ್ನು ಮುಂದುವರೆಸುತ್ತಿರುವುದರಿಂದ, ಟೆಕ್ ದೈತ್ಯ ಆಪಲ್ ಭಾರತದಿಂದ ರಫ್ತು ಮಾಡುವ FY24 ಅಂಕಿ - ಅಂಶಗಳನ್ನು ಮೀರಿಸುವ ಹಾದಿಯಲ್ಲಿದೆ. ಈ ಹಣಕಾಸು ವರ್ಷದ (FY25) ಮೊದಲ ಆರು ತಿಂಗಳಲ್ಲಿ 50,000 ಕೋಟಿ ($ 6 ಶತಕೋಟಿಗಿಂತ ಹೆಚ್ಚು) ತಲುಪಿದೆ ಎಂದು SVP ಮುಖ್ಯ ಹಣಕಾಸು ಅಧಿಕಾರಿ ಲುಕಾ ಮೇಸ್ಟ್ರಿ ಹೇಳಿದ್ದಾರೆ.

ಭಾರತದಿಂದ ಐಫೋನ್ ರಫ್ತು 2022-23 ರಲ್ಲಿ $ 6.27 ಶತಕೋಟಿಯಿಂದ 2023-24 ರಲ್ಲಿ $ 10 ಶತಕೋಟಿ ದಾಟಿದೆ. ಒಟ್ಟಾರೆಯಾಗಿ, ಕಳೆದ ಹಣಕಾಸು ವರ್ಷದಲ್ಲಿ (FY24) ಐಫೋನ್ ತಯಾರಕರ ಭಾರತದ ಕಾರ್ಯಾಚರಣೆಗಳು 23.5 ಬಿಲಿಯನ್​ ಡಾಲರ್​ ಮೌಲ್ಯವನ್ನು ತಲುಪಿದೆ. ಆಪಲ್ ಕಳೆದ ಹಣಕಾಸು ವರ್ಷದಲ್ಲಿ ಭಾರತದಲ್ಲಿ 14 ಬಿಲಿಯನ್​ ಡಾಲರ್​ ಐಫೋನ್‌ಗಳನ್ನು ಜೋಡಿಸಿದೆ, ಅಷ್ಟೇ ಅಲ್ಲ 10 ಬಿಲಿಯನ್​ ಡಾಲರ್​ ಮೌಲ್ಯದ ಸಾಧನಗಳನ್ನು ರಫ್ತು ಮಾಡಿದೆ.

ಓದಿ: ಮೋಸ್ಟ್​ ಪವರ್​ಫುಲ್​ ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಐಕ್ಯೂ 13!; ಇದರ ಬೆಲೆ ಎಷ್ಟು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.