ಕರ್ನಾಟಕ

karnataka

ETV Bharat / technology

ಉದ್ಯೋಗಿಗಳಿಗೆ ಶಾಕ್​ ನೀಡಿದ ಓಲಾ - 500 ಕೆಲಸಗಾರರು ವಜಾ! - OLA ELECTRIC LAYOFFS

Ola Electric layoffs: ಓಲಾ ಎಲೆಕ್ಟ್ರಿಕ್ 500 ಉದ್ಯೋಗಿಗಳನ್ನು ವಜಾಗೊಳಿಸಿದೆ.

Ola Electric layoffs
ಓಲಾ (file photo)

By ETV Bharat Karnataka Team

Published : Nov 23, 2024, 10:02 AM IST

Ola Electric layoffs: ಓಲಾ ಎಲೆಕ್ಟ್ರಿಕ್​ ಕಂಪನಿ ಉದ್ಯೋಗಿಗಳಿಗೆ ಶಾಕ್​ ನೀಡಿದೆ. ಸುಮಾರು 500 ಕೆಲಸಗಾರರನ್ನು ವಜಾಮಾಡಿದೆ. ಪುನಾರಚನೆ ಭಾಗವಾಗಿ ಪ್ರಕ್ರಿಯೆ ನಡೆದಿದೆ ಎಂದು ಕಂಪನಿ ತಿಳಿಸಿದೆ.

ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಓಲಾ ಎಲೆಕ್ಟ್ರಿಕ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. 500 ನೌಕರರನ್ನು ಮನೆಗೆ ಕಳುಹಿಸಲಾಗಿದೆ. ತನ್ನ ಪುನಾರಚನೆಯ ಪ್ರಕ್ರಿಯೆಯ ಭಾಗವಾಗಿ ಕಂಪನಿಯು ವಿವಿಧ ವಿಭಾಗಗಳಲ್ಲಿ ಮತ್ತು ವಿವಿಧ ಹಂತಗಳಲ್ಲಿನ ಜನರಿಗೆ ವಜಾಗೊಳಿಸುವಿಕೆಯನ್ನು ಘೋಷಿಸಿದೆ ಎಂದು ಮೂಲಗಳು ತಿಳಿಸಿವೆ. ಮಾರಾಟದ ನಂತರದ ಸೇವೆಗಳ ವಿಷಯದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಓಲಾ ಎಲೆಕ್ಟ್ರಿಕ್​ನಿಂದ ಈ ನಿರ್ಧಾರ ಹೊರಬಿದ್ದಿರುವುದು ಗಮನಾರ್ಹ.

ಜುಲೈ ತಿಂಗಳಿನಿಂದ ವಜಾಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿಷಯಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಬಹಿರಂಗಪಡಿಸಿದ್ದಾರೆ. ವಿವಿಧ ಇಲಾಖೆಗಳಲ್ಲಿ ವಿವಿಧ ಹಂತಗಳಲ್ಲಿ ನಿರ್ಮೂಲನೆ ಪ್ರಕ್ರಿಯೆ ನಡೆಯುತ್ತಿದೆ. ಈ ತಿಂಗಳ ಅಂತ್ಯದೊಳಗೆ ವಜಾಗೊಳಿಸುವ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಸ್ತಿತ್ವದಲ್ಲಿರುವ ಉದ್ಯೋಗಿಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಮತ್ತು ಆ ಮೂಲಕ ಮಾರ್ಜಿನ್ ಮತ್ತು ಲಾಭದಾಯಕತೆಯನ್ನು ಹೆಚ್ಚಿಸಲು ಕಂಪನಿಯು ಉದ್ದೇಶಿಸಿದೆ ಎಂದು ಹೆಸರು ಹೇಳಲು ಬಯಸದ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ, ಓಲಾ ಎಲೆಕ್ಟ್ರಿಕ್ ತನ್ನ ಸೇವೆಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ ಎಂದು ತಿಳಿದಿದೆ. ಈ ಸಂಬಂಧ 10,000 ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದ ನಂತರ ಗ್ರಾಹಕ ಹಕ್ಕುಗಳ ನಿಯಂತ್ರಣ ಸಂಸ್ಥೆ CCPA ಕಂಪನಿಗೆ ನೋಟಿಸ್ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅದು ಶೇ.99ರಷ್ಟು ದೂರುಗಳನ್ನು ಪರಿಹರಿಸಲಾಗಿದೆ ಎಂದು ವಿವರಿಸಿದೆ. ಸಿಸಿಪಿಎ ಕೆಲವೇ ದಿನಗಳಲ್ಲಿ ಸಮಗ್ರ ತನಿಖೆಗೆ ಆದೇಶಿಸಿದೆ. ಎನ್‌ಎಸ್‌ಇಯಲ್ಲಿ ಓಲಾ ಎಲೆಕ್ಟ್ರಿಕ್‌ನ ಷೇರಿನ ಬೆಲೆ ಸ್ವಲ್ಪ ಏರಿಕೆಯಾಗಿದ್ದು, ರೂ.68ರಲ್ಲಿ ಮುಂದುವರಿದಿದೆ.

ಪ್ರಸ್ತುತ ಕಂಪನಿಯಲ್ಲಿ ಸುಮಾರು 4000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಮತ್ತು ವಜಾಗೊಳಿಸುವಿಕೆಯ ಪರಿಣಾಮವು ಅದರ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ಜನರ ಮೇಲೆ ಕಂಡುಬರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಓಲಾ ಎಲೆಕ್ಟ್ರಿಕ್‌ನಲ್ಲಿನ ಪುನರ್ರಚನೆ ಪ್ರಕ್ರಿಯೆಯು ಡಿಸೆಂಬರ್ 2024 ರಲ್ಲಿ ಕೊನೆಗೊಳ್ಳುವ ನಿರೀಕ್ಷೆಯಿದೆ. ಓಲಾ ಎಲೆಕ್ಟ್ರಿಕ್ 2022 ರಲ್ಲಿಯೂ ಇದೇ ರೀತಿಯ ಹೆಜ್ಜೆಯನ್ನು ತೆಗೆದುಕೊಂಡಿತ್ತು.

2024-25 ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಅಂದರೆ ಸೆಪ್ಟೆಂಬರ್‌ಗೆ ಓಲಾ ಎಲೆಕ್ಟ್ರಿಕ್ ಪ್ರಕಟಿಸಿದ ಫಲಿತಾಂಶಗಳ ಪ್ರಕಾರ, ಈ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು 38.5 ಶೇಕಡಾ ಜಿಗಿತದೊಂದಿಗೆ 1240 ಕೋಟಿ ರೂ. ತಲುಪಿತ್ತು. ಎರಡನೇ ತ್ರೈಮಾಸಿಕದಲ್ಲಿ ವಿತರಣೆಯಲ್ಲಿ 73.6 ಪ್ರತಿಶತದಷ್ಟು ಜಿಗಿತ ಕಂಡುಬಂದಿದೆ ಮತ್ತು ವರ್ಷದಿಂದ ವರ್ಷಕ್ಕೆ 56,813 ಯುನಿಟ್‌ಗಳಿಂದ 98,619 ಯುನಿಟ್‌ಗಳಿಗೆ ಏರಿಕೆಯಾಗಿದೆ.

ಓದಿ:ಅಂಧರ ಸ್ವಾವಲಂಬಿ ಬದುಕಿಗೆ KIMS​​ನಿಂದ ಎಐ ಚಾಲಿತ ಸ್ಮಾರ್ಟ್​ ಗ್ಲಾಸ್​; ಸ್ವತಂತ್ರ ಜೀವನಕ್ಕೆ ಬಹುಪಯೋಗಿ!

ABOUT THE AUTHOR

...view details