ಕರ್ನಾಟಕ

karnataka

ETV Bharat / technology

ಕೌಶಲ್ಯ ಆಧಾರಿತ ಇಸ್ಪೋರ್ಟ್​ ಗೇಮಿಂಗ್​ಗೆ ನಿಯಂತ್ರಣ ಹೇರುವ ಅಗತ್ಯವಿಲ್ಲ: ಪ್ರಧಾನಿ ಮೋದಿ - eSport - ESPORT

ಇಸ್ಪೋರ್ಟ್ಸ್ ನಂಥ ಕೌಶಲ್ಯ ಆಧಾರಿತ ಗೇಮಿಂಗ್​ಗೆ ಯಾವುದೇ ನಿಯಂತ್ರಣ ಹೇರುವ ಅಗತ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Skill based gaming doesn t require regulation
Skill based gaming doesn t require regulation

By ETV Bharat Karnataka Team

Published : Apr 14, 2024, 6:03 PM IST

ನವದೆಹಲಿ: ವಿಶೇಷವಾಗಿ ಇಸ್ಪೋರ್ಟ್ಸ್ ನಂಥ ಕೌಶಲ್ಯ ಆಧಾರಿತ ಗೇಮಿಂಗ್​ಗೆ ಯಾವುದೇ ನಿಯಂತ್ರಣ ಹೇರುವ ಅಗತ್ಯವಿಲ್ಲ ಮತ್ತು ಈಗಿರುವ ಕಾನೂನುಗಳ ಅಡಿಯಲ್ಲಿ ಈ ಗೇಮಿಂಗ್ ಬೆಳವಣಿಗೆ ಹೊಂದಲು ಮುಕ್ತವಾಗಿರಬೇಕು. ಇದರಿಂದ ಈ ಕ್ಷೇತ್ರದಲ್ಲಿ ವಿಶ್ವದರ್ಜೆಯ ಆವಿಷ್ಕಾರಗಳನ್ನು ಮಾಡಲು ಯುವಕರಿಗೆ ಹೆಚ್ಚಿನ ಮಾರ್ಗಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಭಾರತದ ಕೆಲ ಪ್ರಮುಖ ಗೇಮರ್​ಗಳೊಂದಿಗೆ ಮುಕ್ತ ಸಂವಾದ ನಡೆಸಿದ ಪಿಎಂ ಮೋದಿ, ಗೇಮಿಂಗ್ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಬೇಕು ಹಾಗೂ ಅವರು ಇದನ್ನು ತಮ್ಮ ವೃತ್ತಿಜೀವನದ ಆಯ್ಕೆಯನ್ನಾಗಿ ಮಾಡಿಕೊಳ್ಳುವ ಅವಕಾಶವಿರಬೇಕು ಎಂದು ಎಂದು ಹೇಳಿದರು.

"ಇಸ್ಪೋರ್ಟ್ಸ್ ಉದ್ಯಮದ ಮೇಲೆ ನಿಯಂತ್ರಣ ಹೇರುವುದರಿಂದ ಯಾವುದೇ ಅನುಕೂಲವಾಗುವುದಿಲ್ಲ. ಇಸ್ಪೋರ್ಟ್ಸ್ ನಮ್ಮ ಯುವಕರಿಗೆ ಅನೇಕ ವೃತ್ತಿ ಆಯ್ಕೆಗಳನ್ನು ಸೃಷ್ಟಿಸುತ್ತದೆ. ಅದು ಸಂಘಟಿತ, ಕಾನೂನು ರಚನೆಯ ಅಡಿಯಲ್ಲಿ ಬೆಳೆಯಬೇಕು. ಗೇಮಿಂಗ್ ಜಗತ್ತನ್ನು ಅರ್ಥಮಾಡಿಕೊಳ್ಳುವ ಮತ್ತು ಅದನ್ನು ನಮ್ಮ ದೇಶದ ಅಗತ್ಯಗಳಿಗೆ ತಕ್ಕಂತೆ ರೂಪಿಸುವ ಸಮಯ ಇದಾಗಿದೆ" ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.

"2047 ರ ವೇಳೆಗೆ ಸರ್ಕಾರದ ಯಾವುದೇ ಅನಗತ್ಯ ಹಸ್ತಕ್ಷೇಪವಿಲ್ಲದೆ ಮಧ್ಯಮ ವರ್ಗದವರು ಬದುಕುವಂತಾಗುವ ಮಟ್ಟಕ್ಕೆ ರಾಷ್ಟ್ರವನ್ನು ಉನ್ನತೀಕರಿಸಲು ನಾನು ಬಯಸುತ್ತೇನೆ" ಎಂದು ಪ್ರಧಾನಿ ಮೋದಿ ನುಡಿದರು. ಕೌಶಲ್ಯ ಆಧಾರಿತ ಗೇಮಿಂಗ್​ನಲ್ಲಿ ಸೃಜನಶೀಲತೆಯನ್ನು ಗುರುತಿಸುವ ಪ್ರಧಾನಿ ಮೋದಿಯವರ ದೃಷ್ಟಿಕೋನವು ತಮಗೆಲ್ಲರಿಗೂ ಉತ್ತೇಜನ ನೀಡುವಂತಿದೆ ಹಾಗೂ ಗೇಮಿಂಗ್ ಉದ್ಯಮವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮತ್ತು ಇತರರಿಗೆ ಸ್ಫೂರ್ತಿ ನೀಡುವ ಸಮಯವಿದು ಕಂಟೆಂಟ್​ ಕ್ರಿಯೇಟರ್​ಗಳು ಶ್ಲಾಘಿಸಿದರು.

"ಗೇಮಿಂಗ್ ಕೆಲವೇ ವರ್ಷಗಳ ಹಿಂದೆ ಪ್ರಾರಂಭವಾಗಿದ್ದರೂ ಈಗ ನಮ್ಮಲ್ಲಿ ಕೆಲವರಿಗೆ ಇದು ಕಾರ್ಯಸಾಧ್ಯವಾದ ವೃತ್ತಿ ಜೀವನದ ಆಯ್ಕೆಯಾಗಿದೆ. ಗೇಮಿಂಗ್ ಬಗ್ಗೆ ದೇಶದಲ್ಲಿನ ಗ್ರಹಿಕೆ ಬದಲಾಗಿದೆ" ಎಂದು ಗೇಮಿಂಗ್ ಕ್ರಿಯೇಟರ್​ಗಳು ಪ್ರಧಾನಿ ಮೋದಿಗೆ ತಿಳಿಸಿದರು.

ಇತ್ತೀಚಿನ ಎಫ್ಐಸಿಸಿಐ- ಇವೈ ವರದಿಯ ಪ್ರಕಾರ, ಇಸ್ಪೋರ್ಟ್ಸ್ ಪಂದ್ಯಾವಳಿಗಳಲ್ಲಿ ಭಾಗವಹಿಸುವವರ ಸಂಖ್ಯೆ 2023 ರಲ್ಲಿ 1.8 ಮಿಲಿಯನ್​ಗೆ ಏರಿಕೆಯಾಗಿದೆ. ಹಲವಾರು ಗಮನಾರ್ಹ ಪಂದ್ಯಾವಳಿಗಳು ಮತ್ತು ಸ್ಪರ್ಧಾತ್ಮಕ ಮಟ್ಟಗಳಲ್ಲಿ ಈ ಸಂಖ್ಯೆಯು 2024 ರ ವೇಳೆಗೆ 2.5 ಮಿಲಿಯನ್ ​ಗೆ ಏರಿಕೆಯಾಗುವ ನಿರೀಕ್ಷೆಯಿದೆ. ಇದಲ್ಲದೆ ಗೇಮ್ ಸ್ಟ್ರೀಮರ್​ಗಳ ವೀಕ್ಷಕರ ಸಂಖ್ಯೆಯಲ್ಲಿ ಶೇಕಡಾ 20 ರಿಂದ 25 ರಷ್ಟು ಗಮನಾರ್ಹ ಬೆಳವಣಿಗೆಯಾಗಿದೆ.

ಇದನ್ನೂ ಓದಿ : ಹವಾಮಾನ ಬದಲಾವಣೆಯಂತಹ ಜಾಗತಿಕ ಸಮಸ್ಯೆ ಕುರಿತು ಗೇಮ್ಸ್​​ ಅಭಿವೃದ್ಧಿಪಡಿಸಿ: ಪ್ರಧಾನಿ ಮೋದಿ - Indian creators must build games

For All Latest Updates

TAGGED:

GAMINGESPORT

ABOUT THE AUTHOR

...view details