ಕರ್ನಾಟಕ

karnataka

ETV Bharat / technology

2030ರ ವೇಳೆಗೆ 20 ಲಕ್ಷ ಕೋಟಿಗೆ ತಲುಪಲಿದೆ ಇವಿ ಮಾರುಕಟ್ಟೆ, 5 ಕೋಟಿ ಉದ್ಯೋಗ ಸೃಷ್ಠಿ: ನಿತಿನ್​ ಗಡ್ಕರಿ - NITIN GADKARI ON ELECTRIC VEHICLES

2030ರ ವೇಳೆಗೆ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ 20 ಲಕ್ಷ ಕೋಟಿ ರೂ.ಗಳಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಇದರಿಂದ 5 ಕೋಟಿ ಉದ್ಯೋಗ ಸೃಷ್ಟಿಯಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

EV EXPO 2024  ELECTRIC VEHICLES  NITIN GADKARI SPEECH
2030ರ ವೇಳೆಗೆ ಇವಿ ಮಾರುಕಟ್ಟೆ 20 ಲಕ್ಷ ಕೋಟಿ (ETV Bharat)

By ETV Bharat Tech Team

Published : 11 hours ago

Nitin Gadkari On Electric Vehicles:ದೇಶದಲ್ಲಿ ಉತ್ತಮ ರಸ್ತೆಗಳ ಜಾಲ ಹಾಕಿದ ನಂತರ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೈವೇ ಮ್ಯಾನ್ ಎಂದು ಜನಪ್ರಿಯರಾಗಿದ್ದಾರೆ. ಈಗ ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ತಮ್ಮ ಅತ್ಯುತ್ತಮ ಪ್ರಯತ್ನ ಮುಂದುವರೆಸಿದ್ದಾರೆ.

ದೆಹಲಿಯ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದಲ್ಲಿ ನಡೆಯುತ್ತಿರುವ EV ಎಕ್ಸ್‌ಪೋ-2024 ರಲ್ಲಿ ಅವರು ಮಾತನಾಡಿ, 2030ರ ವೇಳೆಗೆ ಭಾರತದ ಎಲೆಕ್ಟ್ರಿಕ್ ವೆಹಿಕಲ್ (EV) ಮಾರುಕಟ್ಟೆಯು 20 ಲಕ್ಷ ಕೋಟಿ ರೂ.ಗಳಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.

ಕೇಂದ್ರ ಸಚಿವರು ಇವಿ ಹಣಕಾಸು ಮಾರುಕಟ್ಟೆಯು 4 ಲಕ್ಷ ಕೋಟಿ ರೂ.ಗೆ ತಲುಪಲಿದೆ ಎಂದು ಅಂದಾಜಿಸಿದ್ದಾರೆ. 40ರಷ್ಟು ವಾಯುಮಾಲಿನ್ಯಕ್ಕೆ ಸಾರಿಗೆ ವಲಯ ಕಾರಣವಾಗಿದೆ. ಭಾರತವು 22 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪಳೆಯುಳಿಕೆ ಇಂಧನಗಳನ್ನು ಆಮದು ಮಾಡಿಕೊಳ್ಳುತ್ತದೆ. ಇದು ಪ್ರಮುಖ ಆರ್ಥಿಕ ಸವಾಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಹಸಿರು ಇಂಧನಕ್ಕೆ ಒತ್ತು ನೀಡುತ್ತಿದೆ. ದೇಶದಲ್ಲಿ ಒಂದು ಲಕ್ಷ ಎಲೆಕ್ಟ್ರಿಕ್ ಬಸ್‌ಗಳ ಅಗತ್ಯವಿದ್ದು, ಪ್ರಸ್ತುತ 50 ಸಾವಿರ ಬಸ್‌ಗಳಿವೆ. ಇವಿ ತಯಾರಕರು ಗುಣಮಟ್ಟದ ಬಗ್ಗೆ ಗಮನಹರಿಸಬೇಕು ಎಂದು ಗಡ್ಕರಿ ಒತ್ತಾಯಿಸಿದರು.

2014 ರಲ್ಲಿ ವಾಹನೋದ್ಯಮವು 7 ಲಕ್ಷ ಕೋಟಿ ರೂಪಾಯಿ ಮೌಲ್ಯದ್ದಾಗಿತ್ತು. ಅದು ಈಗ 22 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ. ಈ ವಲಯದಲ್ಲಿ ಭಾರತ ಈಗ ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರವಾಗಿದೆ. 78 ಲಕ್ಷ ಕೋಟಿಯೊಂದಿಗೆ ಅಮೆರಿಕ ಮೊದಲ ಸ್ಥಾನದಲ್ಲಿದ್ದು, 47 ಲಕ್ಷ ಕೋಟಿ ರೂಪಾಯಿಗಳೊಂದಿಗೆ ಚೀನಾ ಎರಡನೇ ಸ್ಥಾನದಲ್ಲಿದೆ.

EV ಎಕ್ಸ್‌ಪೋ 2024 ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಲವು ವಿಶೇಷ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಎಲೆಕ್ಟ್ರಿಕ್ ವಾಹನಗಳಿಗೆ ಹಣಕಾಸು ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆಯೂ ಚರ್ಚೆ ನಡೆಯಿತು. EV ಹಣಕಾಸು ಮಾರುಕಟ್ಟೆಯು 2030 ರ ವೇಳೆಗೆ 4 ಲಕ್ಷ ಕೋಟಿ ರೂಪಾಯಿಗಳ ಮೌಲ್ಯದ್ದಾಗಿದೆ ಎಂದು ಗಡ್ಕರಿ ಅಂದಾಜಿಸಿದ್ದಾರೆ. ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಬಯಸುವವರಿಗೆ ಇದು ಒಳ್ಳೆಯ ಸುದ್ದಿ. ಇದು EV ಖರೀದಿಸುವುದನ್ನು ಇನ್ನಷ್ಟು ಸುಲಭಗೊಳಿಸುತ್ತದೆ.

ಸರ್ಕಾರ ಹಸಿರು ಇಂಧನಕ್ಕೆ ಒತ್ತು ನೀಡುತ್ತಿದೆ ಎಂದು ಗಡ್ಕರಿ ಹೇಳಿದರು. ಭಾರತದ ಶೇಕಡಾ 44 ರಷ್ಟು ಇಂಧನ ವಿದ್ಯುತ್ ಸೌರಶಕ್ತಿಯಿಂದ ಬರುತ್ತದೆ. ನಾವು ಜಲವಿದ್ಯುತ್ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ನಂತರ ಸೌರ ಶಕ್ತಿ, ಹಸಿರು ಶಕ್ತಿ ವಿಶೇಷವಾಗಿ 'ಬಯೋಮಾಸ್'. ಈಗ ಸೌರಶಕ್ತಿ ನಮ್ಮೆಲ್ಲರಿಗೂ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಎಲೆಕ್ಟ್ರಿಕ್ ವಾಹನ ತಯಾರಕರು ಗುಣಮಟ್ಟಕ್ಕೆ ಒತ್ತು ನೀಡುವಂತೆ ಗಡ್ಕರಿ ಕೇಳಿಕೊಂಡರು. 2014ರಲ್ಲಿ ವಾಹನೋದ್ಯಮ 7 ಲಕ್ಷ ಕೋಟಿ ರೂ.ಗಳಷ್ಟಿತ್ತು, ಈಗ 22 ಲಕ್ಷ ಕೋಟಿ ರೂ.ಗಳಾಗಿದೆ ಎಂದು ಹೇಳಿದರು.

ಓದಿ:ಲಕ್ಷ - ಲಕ್ಷಗಟ್ಟಲೇ ಏರಿಕೆ ಕಂಡ ಜನಪ್ರಿಯ ಐಷಾರಾಮಿ ರೇಂಜ್ ರೋವರ್ ಕಾರಿನ ಬೆಲೆ : ಗ್ರಾಹಕರಿಗೆ ಹೊರೆ!

ABOUT THE AUTHOR

...view details