ಕರ್ನಾಟಕ

karnataka

ETV Bharat / technology

ಮೊಟೊ ಎಐ ಬೀಟಾ ಪ್ರೋಗ್ರಾಂ ಘೋಷಿಸಿದ ಮೊಟೊರೊಲಾ, ಭಾರತದಲ್ಲಿಯೂ ಲಭ್ಯ - MOTO AI BETA PROGRAM

MOTO AI BETA PROGRAM: ಮೊಟೊರೊಲಾ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಂತಸದ ಸುದ್ದಿ. ಮೊಟೊರೊಲಾ ತನ್ನ ಮೊಟೊ ಎಐ ಬೀಟಾ ಪ್ರೋಗ್ರಾಂ ಅನ್ನು ಘೋಷಿಸಿದೆ. ಇದು ಭಾರತದಲ್ಲಿಯೂ ಲಭ್ಯವಿದೆ.

MOTO AI BETA PROGRAMM ANNOUNCED  MOTO AI BETA  MOTOROLA AI FEATURES
ಮೊಟೊ ಎಐ ಬೀಟಾ ಪ್ರೋಗ್ರಾಂ ಘೋಷಿಸಿದ ಮೊಟೊರೊಲಾ (Motorola)

By ETV Bharat Tech Team

Published : Nov 30, 2024, 12:23 PM IST

MOTO AI BETA PROGRAM:ಮೊಟೊರೊಲಾ ತನ್ನ ಮೊಟೊ ಎಐ ಬೀಟಾ ಪ್ರೋಗ್ರಾಂ ಅನ್ನು ಘೋಷಿಸಿದೆ. ಮೊಟೊನ ಮುಂಬರುವ ವಿಶೇಷ ಎಐ-ಚಾಲಿತ ವೈಶಿಷ್ಟ್ಯಗಳು ಗ್ಯಾಲೆಕ್ಸಿ ಎಐ ಮತ್ತು ಆಪಲ್​ ಇಂಟೆಲಿಜೆನ್ಸ್‌ಗೆ ಹೋಲುತ್ತವೆ. ಬಳಕೆದಾರರು ತಮ್ಮ ಮೊಟೊ ಫೋನ್‌ಗಳಲ್ಲಿ Catch Me Up, Pay Attention ಮತ್ತು Remember This ಎಂಬ ಮೂರು ಹೊಸ ಎಐ ವೈಶಿಷ್ಟ್ಯಗಳನ್ನು ಅನುಭವಿಸಲು ಬೀಟಾ ಪ್ರೋಗ್ರಾಂಗೆ ಸೈನ್ ಅಪ್ ಮಾಡಬಹುದು. ಖುಷಿ ಸಂಗತಿಯೆಂದ್ರೆ ಮೊಟೊ ಎಐ ಬೀಟಾ ಭಾರತದಲ್ಲಿಯೂ ಲಭ್ಯವಿದೆ. ಈ ಹೊಸ ವೈಶಿಷ್ಟ್ಯಗಳ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

ಮೊಟೊ ಎಐ ಬೀಟಾ ಪ್ರೋಗ್ರಾಂ: ಮೊಟೊ ಎಐಗೆ ಮೊದಲ ಆರಂಭಿಕ ಪ್ರವೇಶವು ಮೂರು ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇಮೇಜ್​ಗಳು, ಸ್ಕ್ರೀನ್‌ಶಾಟ್‌ಗಳು, ವಿಡಿಯೋಗಳು, ನೋಟ್ಸ್​ ಅಥವಾ ಯಾವುದೇ ಇತರ ಮಾಹಿತಿಯನ್ನು ಸಂದರ್ಭೋಚಿತ ರೀತಿಯಲ್ಲಿ ಉಳಿಸಲು Remember This ವೈಶಿಷ್ಟ್ಯ ಬಳಕೆದಾರರನ್ನು ಆಕರ್ಷಿಸಲಿದೆ.

ಉದಾಹರಣೆಗೆ ನೀವು ನಿಮ್ಮ ಶರ್ಟ್‌ನ ಚಿತ್ರವೊಂದನ್ನು ಕ್ಲಿಕ್​ ಮಾಡಿ ಅದನ್ನು ಪ್ರವಾಸಕ್ಕೆ ಕೊಂಡೊಯ್ಯುವುದಕ್ಕೆ ನೆನಪಿನಲ್ಲಿಟ್ಟಕೊಳ್ಳಲು ಮೊಟೊ ಎಐನಲ್ಲಿ ಸೇವ್​ ಮಾಡಿಕೊಳ್ಳಿ. ಆ ಸಮಯದಲ್ಲಿ ನೀವು ನನ್ನ ಪ್ರವಾಸಿ ಉಡುಗೆ ಯಾವುದು ಎಂದು ಮೊಟೊ ಎಐಗೆ ಸರಳವಾದ ಪ್ರಶ್ನೆಯನ್ನು ಕೇಳಬಹುದು. ಆಗ ಮೊಟೊ ಎಐ ನಿಮಗೆ ನಿಖರವಾದ ಚಿತ್ರವನ್ನು ತೋರಿಸುತ್ತದೆ.

Catch Me Up:ಈ ವೈಶಿಷ್ಟ್ಯವು ಎಲ್ಲಾ ರೀತಿಯ ಅಪ್ಲಿಕೇಶನ್‌ಗಳಲ್ಲಿನ ಅಧಿಸೂಚನೆಗಳನ್ನು ವಿಶ್ಲೇಷಿಸುತ್ತದೆ. ಉದಾಹರಣೆಗೆ, ನೀವು ಬಹು ಸಂಭಾಷಣೆಗಳಿಂದ ಬಹಳಷ್ಟು ಸಂದೇಶಗಳನ್ನು ಪಡೆದರೆ, ಅವುಗಳನ್ನು ಸಂಕ್ಷಿಪ್ತಗೊಳಿಸಲು ಮೊಟೊ ಎಐ ಅನ್ನು ನೀವು ಕೇಳಬಹುದು. ನೀವು ನಡೆಸುತ್ತಿರುವ ಸಂಭಾಷಣೆಯ ಸಾರಾಂಶವನ್ನು ನಿಮ್ಮ ಫೋನ್​ನಲ್ಲಿ ಕಾಣಬಹುದಾಗಿದೆ. ಎಲ್ಲಾ ಸಂದೇಶಗಳನ್ನು ಓದದೆಯೇ ಚಾಟ್‌ನ ಸಂದರ್ಭವನ್ನು ಅರ್ಥಮಾಡಿಕೊಳ್ಳಲು ಬಳಕೆದಾರರಿಗೆ Catch Me Up ಸುಲಭವಾಗಿಸುತ್ತದೆ.

Pay Attention​ ಫೀಚರ್​:ಪೇ ಅಟೆನ್ಶನ್ ವೈಶಿಷ್ಟ್ಯವು ಸಭೆಗಳನ್ನು ರೆಕಾರ್ಡ್ ಮಾಡಬಹುದು. ಇದು ಇಡೀ ಸಭೆಯ ಎಲ್ಲಾ ಘಟನೆಗಳನ್ನು ಕೆಲವು ವಾಕ್ಯಗಳಲ್ಲಿ ಸಂಕ್ಷಿಪ್ತಗೊಳಿಸಬಹುದು. ಸಭೆಗಳಿಂದ ಪ್ರಮುಖ ಅಂಶಗಳನ್ನು ಹೈಲೈಟ್ ಮಾಡಲು ಮೊಟೊ ಎಐ ಅನ್ನು ನೀವು ಕೇಳಬಹುದು. ಇದರಿಂದ ನಿಮ್ಮ ಸಾಧನವು ಅವುಗಳನ್ನು ನಂತರದ ಉಲ್ಲೇಖಕ್ಕಾಗಿ ನೆನಪಿಸಿಕೊಳ್ಳಬಹುದು.

ಜರ್ನಲ್:ಮೊಟೊ ಎಐ ಸಹ ಜರ್ನಲ್ ಅನ್ನು ಒಳಗೊಂಡಿರುತ್ತದೆ. 'Remember This' ಮತ್ತು 'Pay Attention' ವೈಶಿಷ್ಟ್ಯಗಳ ಮೂಲಕ ದಾಖಲಿಸಲಾದ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ನಿಮ್ಮ ವೈಯಕ್ತಿಕ ಜರ್ನಲ್‌ನಂತೆಯೇ ನಿಮ್ಮ ಜ್ಞಾಪನೆಗಳು, ಸಭೆಗಳು ಮತ್ತು ಇತರ ವೈಯಕ್ತಿಕ ಡೇಟಾವನ್ನು ನೀವು ಒಂದೇ ಸ್ಥಳದಲ್ಲಿ ವೀಕ್ಷಿಸಬಹುದು. ಮೊಟೊ ಎಐ ಪ್ರಸ್ತುತ ಬೀಟಾದಲ್ಲಿದೆ. ಬಳಕೆದಾರರು ಅಧಿಕೃತ ಮೊಟೊರೊಲಾ ವೆಬ್‌ಸೈಟ್‌ನಿಂದ ಬೀಟಾ ಪ್ರೋಗ್ರಾಂಗೆ ಸೈನ್ ಅಪ್ ಮಾಡಬಹುದು. ಇದು ಇಂಗ್ಲಿಷ್, ಸ್ಪ್ಯಾನಿಷ್, ಪೋರ್ಚುಗೀಸ್ ಭಾಷೆಗಳಲ್ಲಿ ಜಾಗತಿಕವಾಗಿ ಲಭ್ಯವಿದೆ.

ಮೊಟೊ ಎಐ : ಪ್ರಸ್ತುತ ಮೊಟೊ ಎಐ ಬೀಟಾ ಪ್ರೋಗ್ರಾಂ ಮೂರು ಫೋನ್‌ಗಳಲ್ಲಿ ಮಾತ್ರ ಲಭ್ಯವಿದೆ. ಇತರ ಸಾಧನಗಳಲ್ಲಿ ಮೊಟೊ ಎಐ ಲಭ್ಯತೆಯ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ನೀಡಿಲ್ಲ. ಈ ವೈಶಿಷ್ಟ್ಯಗಳಿಗೆ ಹೆಚ್ಚಿನ ಪ್ರೊಸೆಸರ್ ಅಗತ್ಯವಿರುವುದರಿಂದ, ಅವುಗಳು ಉನ್ನತ-ಮಟ್ಟದ ರೇಜರ್ ಮತ್ತು ಎಡ್ಜ್ ಸರಣಿಯ ಫೋನ್‌ಗಳಲ್ಲಿ ಲಭ್ಯವಿರುತ್ತವೆ. ಮೊಟೊ ಎಐ ಬೀಟಾ ಭಾರತದಲ್ಲಿಯೂ ಲಭ್ಯವಿದೆ.

ಓದಿ:ಎನ್‌ಕ್ಯಾಪ್ ರೇಟಿಂಗ್‌ ಫೈವ್​ ಸ್ಟಾರ್​ ಪಡೆದ ಹ್ಯುಂಡೈನ ಎಸ್​ಯುವಿ ಟಕ್ಸನ್!

ABOUT THE AUTHOR

...view details