ಕರ್ನಾಟಕ

karnataka

ETV Bharat / technology

ಎಐ ಸಾಮರ್ಥ್ಯದ ಮೈಕ್ರೊಸಾಫ್ಟ್​ Copilot+ ಪಿಸಿ ಬಿಡುಗಡೆ; ಬೆಲೆ ಎಷ್ಟು ಗೊತ್ತಾ? - Copilot AI PC Launched - COPILOT AI PC LAUNCHED

ಮೈಕ್ರೊಸಾಫ್ಟ್​ ತನ್ನ ಹೊಸ ಎಐ ಸಾಮರ್ಥ್ಯದ ಪಿಸಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಮೈಕ್ರೊಸಾಫ್ಟ್​ Copilot+ ಪಿಸಿ
ಮೈಕ್ರೊಸಾಫ್ಟ್​ Copilot+ ಪಿಸಿ (IANS)

By ETV Bharat Karnataka Team

Published : Jun 19, 2024, 1:24 PM IST

ನವದೆಹಲಿ:ಮೈಕ್ರೋಸಾಫ್ಟ್ ಮಂಗಳವಾರ ತನ್ನ ಹೊಸ ಕೋಪೈಲೆಟ್+ ಪಿಸಿಗಳಾದ ಸರ್ಫೇಸ್ ಲ್ಯಾಪ್ ಟಾಪ್ ಮತ್ತು ಸರ್ಫೇಸ್ ಪ್ರೊ ಕಂಪ್ಯೂಟರ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ. ಇವು ಎಐ ಯುಗಕ್ಕಾಗಿ ವಿನ್ಯಾಸಗೊಳಿಸಲಾದ ಅತ್ಯಂತ ವೇಗದ ವಿಂಡೋಸ್ ಪಿಸಿಗಳಾಗಿವೆ.

ಈ ಲ್ಯಾಪ್ ಟಾಪ್​ಗಳು ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದ್ದು, Microsoft ಡಾಟ್ com ಮತ್ತು ಮೈಕ್ರೋಸಾಫ್ಟ್ ಎಕ್ಸ್ ಪೀರಿಯನ್ಸ್ ಸೆಂಟರ್​ನಲ್ಲಿ ಇವುಗಳನ್ನು ಖರೀದಿಸಬಹುದಾಗಿದೆ. ಇವು 999 ಡಾಲರ್ ಅಂದಾಜು ಆರಂಭಿಕ ಚಿಲ್ಲರೆ ಬೆಲೆಯಲ್ಲಿ ಲಭ್ಯವಾಗಲಿವೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಏನೆಲ್ಲಾ ವಿಶೇಷತೆಗಳು ಹಾಗೂ ಬೆಲೆ ಎಷ್ಟು? :64 ಜಿಬಿ ರ್‍ಯಾಮ್ ಹೊಂದಿರುವ 64 ಜಿಬಿ ಸರ್ಫೇಸ್ ಲ್ಯಾಪ್ ಟಾಪ್ (7 ನೇ ಆವೃತ್ತಿ) 13.8 ಇಂಚಿನ ಡಿಸ್ ಪ್ಲೇ, ಸ್ನ್ಯಾಪ್ ಡ್ರಾಗನ್ ಎಕ್ಸ್ ಎಲೈಟ್ (12 ಕೋರ್) ಪ್ರೊಸೆಸರ್ ಮತ್ತು 1 ಟಿಬಿ ಎಸ್ಎಸ್​ಡಿ ಸ್ಟೋರೇಜ್​ನೊಂದಿಗೆ ಕಪ್ಪು ಬಣ್ಣದ ಆವೃತ್ತಿಯ ಬೆಲೆ 2,399.99 ಡಾಲರ್​ನಿಂದ ಪ್ರಾರಂಭವಾಗುತ್ತದೆ.

ಹಾಗೆಯೇ, 64 ಜಿಬಿ ರ್‍ಯಾಮ್ ಹೊಂದಿರುವ 15 ಇಂಚಿನ ಸರ್ಫೇಸ್ ಲ್ಯಾಪ್ ಟಾಪ್ (7 ನೇ ಆವೃತ್ತಿ) ಸ್ನ್ಯಾಪ್ ಡ್ರಾಗನ್ ಎಕ್ಸ್ ಎಲೈಟ್ (12 ಕೋರ್) ಪ್ರೊಸೆಸರ್ ಮತ್ತು 1 ಟಿಬಿ ಎಸ್ಎಸ್​ಡಿ ಸ್ಟೋರೇಜ್​ನೊಂದಿಗೆ ಕಪ್ಪು ಬಣ್ಣದ ಆವೃತ್ತಿಯ ಬೆಲೆ 2,499.99 ಡಾಲರ್​ನಿಂದ ಪ್ರಾರಂಭವಾಗುತ್ತದೆ.

"ಇಂದು ಕೋಪೈಲೆಟ್+ ಪಿಸಿಗಳ ಬಿಡುಗಡೆಯೊಂದಿಗೆ ವಿಂಡೋಸ್​ನ ಹೊಸ ಯುಗ ಆರಂಭವಾಗಿದೆ. ಈ ಹೊಸ ಎಐ ಚಾಲಿತ ಸಾಧನಗಳು ಜನರನ್ನು ಹೆಚ್ಚು ಉತ್ಪಾದಕ ಮತ್ತು ಸೃಜನಶೀಲವಾಗಿರುವಂತೆ ಸಶಕ್ತಗೊಳಿಸುತ್ತವೆ" ಎಂದು ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾಡೆಲ್ಲಾ ಹೇಳಿದ್ದಾರೆ.

ಹೆಚ್ಚು ಬ್ಯಾಟರಿ ಬಾಳಿಕೆ:ಹೊಸ ಸರ್ಫೇಸ್ ಲ್ಯಾಪ್​ಟಾಪ್ ಮತ್ತು ಸರ್ಫೇಸ್ ಪ್ರೊ ಸ್ನ್ಯಾಪ್ ಡ್ರಾಗನ್ ಎಕ್ಸ್ ಸರಣಿ ಪ್ರೊಸೆಸರ್​ಗಳೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಯುತವಾಗಿದೆ. ಹೊಸ ಎಐ ಅನುಭವಗಳಿಗಾಗಿ ಶಕ್ತಿಯುತ ನ್ಯೂರಲ್ ಪ್ರೊಸೆಸಿಂಗ್ ಯುನಿಟ್ (ಎನ್​ಪಿಯು) ನೊಂದಿಗೆ ವೇಗದ ಕಾರ್ಯಕ್ಷಮತೆ ಮತ್ತು ಇಡೀ ದಿನದ ಬ್ಯಾಟರಿ ಬಾಳಿಕೆಯನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಸಣ್ಣ ಭಾಷಾ ಮಾದರಿಗಳ (ಎಸ್ಎಲ್ಎಂಗಳು) ಸಂಯೋಜನೆಯಲ್ಲಿ ಅಜುರ್​ ಕ್ಲೌಡ್​ನಲ್ಲಿ ಕೆಲಸ ಮಾಡುವ, ದೊಡ್ಡ ಭಾಷಾ ಮಾದರಿಗಳೊಂದಿಗೆ (ಎಲ್ಎಲ್ಎಂಗಳು) ಸಂಪರ್ಕ ಹೊಂದಿದ ಮತ್ತು ವರ್ಧಿಸಿದ ಕೋಪೈಲಟ್+ ಪಿಸಿಗಳು ಈಗ ಹಿಂದೆಂದೂ ಕಾಣದ ಮಟ್ಟದ ಕಾರ್ಯಕ್ಷಮತೆಯನ್ನು ಸಾಧಿಸಬಹುದು.

"ಎಐ ಕೆಲಸದ ಹೊರೆಯನ್ನು ನಿಭಾಯಿಸಲು ಮತ್ತು ಅತ್ಯಧಿಕ ವೇಗದಿಂದ ಕೆಲಸ ಮಾಡಲು ಅವು 20 ಪಟ್ಟು ಹೆಚ್ಚು ಶಕ್ತಿಯುತ ಮತ್ತು 100 ಪಟ್ಟು ದಕ್ಷವಾಗಿವೆ" ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ :2,500 ವರ್ಷಗಳ ಹಿಂದೆ ಭೂಕಂಪದಿಂದ ಗಂಗಾ ನದಿ ದಿಕ್ಕು ಬದಲಾಗಿತ್ತು: ಅಧ್ಯಯನ ವರದಿ - Ganga River

ABOUT THE AUTHOR

...view details