ನವದೆಹಲಿ:2023 ರ ಡಿಸೆಂಬರ್ನಲ್ಲಿ ಭಾರತದಲ್ಲಿ ಫೇಸ್ಬುಕ್ನ 13 ನೀತಿ ನಿಯಮಗಳ ಅಡಿಯಲ್ಲಿ 19.8 ಮಿಲಿಯನ್ ಕಂಟೆಂಟ್ಗಳನ್ನು ಮತ್ತು ಇನ್ಸ್ಟಾಗ್ರಾಮ್ನ 12 ನೀತಿ ನಿಯಮಗಳ ಅಡಿ 6.2 ಮಿಲಿಯನ್ ಕಂಟೆಂಟ್ಗಳನ್ನು ತೆಗೆದುಹಾಕಲಾಗಿದೆ ಎಂದು ಮೆಟಾ ಹೇಳಿದೆ. ಡಿಸೆಂಬರ್ 1 ರಿಂದ 31 ರ ನಡುವೆ, ಭಾರತೀಯ ಕುಂದುಕೊರತೆ ನಿವಾರಣಾ ವ್ಯವಸ್ಥೆಯ ಮೂಲಕ ಫೇಸ್ಬುಕ್ಗೆ 44,332 ದೂರು ಬಂದಿವೆ ಮತ್ತು 33,072 ಪ್ರಕರಣಗಳಲ್ಲಿ ಬಳಕೆದಾರರ ಸಮಸ್ಯೆಗಳನ್ನು ಪರಿಹರಿಸಲು ಸಾಧನಗಳನ್ನು ಒದಗಿಸಿದೆ ಎಂದು ಮೆಟಾ ಹೇಳಿದೆ.
ನಿರ್ದಿಷ್ಟ ನಿಯಮಗಳ ಉಲ್ಲಂಘನೆಗಳಿಗಾಗಿ ಕಂಟೆಂಟ್ ಅನ್ನು ವರದಿ ಮಾಡಲು ಪೂರ್ವ- ಸ್ಥಾಪಿತ ಚಾನೆಲ್ಗಳು, ಗ್ರಾಹಕರು ತಮ್ಮ ಡೇಟಾವನ್ನು ಡೌನ್ಲೋಡ್ ಮಾಡಬಹುದಾದ ಸ್ವಯಂ - ಪರಿಹಾರ ವ್ಯವಸ್ಥೆಗಳು, ಖಾತೆ ಹ್ಯಾಕ್ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳು ಇತ್ಯಾದಿಗಳನ್ನು ಇವು ಒಳಗೊಂಡಿವೆ ಎಂದು ಐಟಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಗಳು, 2021 ಕ್ಕೆ ಅನುಸಾರವಾಗಿ ಮೆಟಾ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ.
"ವಿಶೇಷ ವಿಮರ್ಶೆಯ ಅಗತ್ಯವಿರುವ ಇತರ 11,260 ದೂರುಗಳಲ್ಲಿ ನಾವು ನಮ್ಮ ನೀತಿಗಳ ಪ್ರಕಾರ ಕಂಟೆಂಟ್ ಪರಿಶೀಲಿಸಿದ್ದೇವೆ ಮತ್ತು ಒಟ್ಟು 6,578 ದೂರುಗಳ ಮೇಲೆ ಕ್ರಮ ಕೈಗೊಂಡಿದ್ದೇವೆ. ಉಳಿದ 4,682 ದೂರುಗಳನ್ನು ಪರಿಶೀಲಿಸಲಾಗಿದೆ. ಆದರೆ, ಅವುಗಳ ವಿಷಯದಲ್ಲಿ ಕ್ರಮ ಕೈಗೊಂಡಿಲ್ಲ" ಎಂದು ಮೆಟಾ ತಿಳಿಸಿದೆ.