Mercedes Benz to Hike Prices in India:ಐಷಾರಾಮಿ ಕಾರು ದೈತ್ಯ ಮರ್ಸಿಡಿಸ್ ಬೆಂಜ್ ಇಂಡಿಯಾ ತನ್ನ ಅಭಿಮಾನಿಗಳಿಗೆ ಶಾಕಿಂಗ್ ಸಂಗತಿಯೊಂದನ್ನು ನೀಡಿದೆ. ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸಲು ಬೆಂಜ್ ಸಿದ್ಧವಾಗಿದೆ. ಬೆಂಜ್ ತನ್ನ ಎಲ್ಲ ಮಾಡೆಲ್ ಕಾರುಗಳ ಬೆಲೆಯನ್ನು ಶೇಕಡಾ 3ರಷ್ಟು ಏರಿಸುವುದಾಗಿ ಘೋಷಿಸಿದೆ. ಈ ಹೊಸ ಬೆಲೆಗಳು ಮುಂದಿನ ವರ್ಷ ಜನವರಿ 1 ರಿಂದ ಆರಂಭವಾಗಲಿದೆ. ಹಣದುಬ್ಬರ ಮತ್ತು ಏರಿಳಿತದ ಇಂಧನ ಬೆಲೆಗಳಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಬೆಂಜ್ ಹೇಳಿದೆ.
ಹಣದುಬ್ಬರ ಮತ್ತು ಇಂಧನ ಬೆಲೆಗಳಲ್ಲಿನ ಏರಿಳಿತಗಳಿಂದ ವ್ಯಾಪಾರ ಚಟುವಟಿಕೆಗಳ ಮೇಲೆ ಭಾರಿ ಒತ್ತಡ ನಿರ್ಮಾಣವಾಗಿದೆ. ಕಳೆದ ಮೂರು ತ್ರೈಮಾಸಿಕಗಳಿಂದ ಕಂಪನಿಯ ನಿರ್ವಹಣಾ ವೆಚ್ಚಗಳು ಹೆಚ್ಚುತ್ತಿವೆ. ಆದ್ದರಿಂದ, ನಾವು ಬೆಲೆಗಳನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಮರ್ಸಿಡಿಸ್-ಬೆಂಜ್ ಇಂಡಿಯಾ ಎಂಡಿ, ಸಿಇಒ ಸಂತೋಷ್ ಅಯ್ಯರ್ ತಿಳಿಸಿದ್ದಾರೆ.
ಕಂಪನಿ ತೆಗೆದುಕೊಂಡಿರುವ ನಿರ್ಧಾರದಿಂದ ಮರ್ಸಿಡಿಸ್ ಬೆಂಜ್ ಕಾರುಗಳ ಬೆಲೆ ಕನಿಷ್ಠ ರೂ.2 ಲಕ್ಷದಿಂದ ಗರಿಷ್ಠ ರೂ.9 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಡಿಸೆಂಬರ್ 31 ರ ಮೊದಲು ಈ ಕಾರುಗಳನ್ನು ಬುಕ್ ಮಾಡಿದವರಿಗೆ ಹೆಚ್ಚಿದ ಬೆಲೆಗಳು ಅನ್ವಯಿಸುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಮರ್ಸಿಡಿಸ್ ಬೆಂಜ್ ಪ್ರಸ್ತುತ ದೇಶೀಯವಾಗಿ ವಿವಿಧ ವಾಹನಗಳನ್ನು ಮಾರಾಟ ಮಾಡುತ್ತಿದೆ. ರೂ.45 ಲಕ್ಷ ಮೌಲ್ಯದ A-ಕ್ಲಾಸ್ ಕಾರುಗಳಿಂದ ರೂ.3.6 ಕೋಟಿ ಮೌಲ್ಯದ G63 SUV ವರೆಗೆ ಇದರ ಬೆಲೆ ಇದೆ.
ಮರ್ಸಿಡಿಸ್-ಬೆಂಜ್ ಇತ್ತೀಚೆಗೆ ಹೊಸ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿತು. ಇದು ತನ್ನ AMG C63 S E ಕಾರ್ಯಕ್ಷಮತೆಯ ಕಾರನ್ನು ಭಾರತೀಯ ಮಾರುಕಟ್ಟೆಗೆ ಅದ್ಭುತ ಲುಕ್ನಲ್ಲಿ ತಂದಿದೆ. ಇದು ತನ್ನ ಹಿಂದಿನ ಮಾದರಿಯನ್ನು ಪ್ರೀಮಿಯಂ ವೈಶಿಷ್ಟ್ಯಗಳು, ಅದ್ಭುತ ವಿನ್ಯಾಸ ಮತ್ತು ಅತ್ಯುತ್ತಮ ಮೈಲೇಜ್‌ನೊಂದಿಗೆ ಅಪ್ಡೇಟ್ ಮಾಡಿದೆ. ಈ ಕಾರು 0-100 ಕಿ.ಮೀ. ವೇಗವನ್ನು 3.4 ಸೆಕೆಂಡುಗಳಲ್ಲಿ ಚಲಿಸಬಹುದಾಗಿದೆ. ಇದರ ಡೆಲಿವೆರಿ 2025 ರ ಎರಡನೇ ತ್ರೈಮಾಸಿಕದಲ್ಲಿ ಪ್ರಾರಂಭವಾಗುತ್ತದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯಲು ಈ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ..
ಇದನ್ನೂ ಓದಿ:ಸೂಪರ್ ಫೀಚರ್, ಹೊಸ ಲುಕ್, ಅಟ್ರ್ಯಾಕ್ಟಿವ್ ಡಿಸೈನ್ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಬಿಎಂಡಬ್ಲೂ ನೂತನ ಮಾಡೆಲ್