ಕರ್ನಾಟಕ

karnataka

ETV Bharat / technology

ಹೊಸ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಮಾರುತಿ: CNG, EVಗಳೊಂದಿಗೆ ಹೊಸ ಕಾರುಗಳ ಬಿಡುಗಡೆಗೆ ಸನ್ನದ್ಧ! - MARUTI SUZUKI NEW CARS - MARUTI SUZUKI NEW CARS

ಮಾರುತಿ ಸುಜುಕಿ, ದೇಶದ ಹೆಸರಾಂತ ಕಾರುಗಳ ಬ್ರಾಂಡ್​. ನೂತನ ವೈಶಿಷ್ಟ್ಯಗಳೊಂದಿಗೆ ಹೊಸ-ಜೆನ್ ಮಾರುತಿ ಕಾರುಗಳನ್ನು ಅನಾವರಣಗೊಳಿಸಲು ಸನ್ನದ್ಧವಾಗಿದೆ. ಇವುಗಳು ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಲು ಸಿದ್ದವಾಗಿದೆ. ಈ ಹೊಸ ಮಾದರಿಯ ಕಾರುಗಳು ನೂತನ ಎಂಜಿನ್ ಮತ್ತು ವೈಶಿಷ್ಟ್ಯಗಳನ್ನು ಹೊಂದಿರಲಿವೆ.

Maruti Suzuki Gears Up To Launch New Gen Cars With CNG, EV Versions In Indian Market
ಹೊಸ ರೀತಿಯಲ್ಲಿ ಮಾರುಕಟ್ಟೆಗೆ ಮಾರುತಿ: CNG, EVಗಳೊಂದಿಗೆ ಹೊಸ ಕಾರುಗಳ ಬಿಡುಗಡೆಗೆ ಸನ್ನದ್ಧ (ETV Bharat)

By ETV Bharat Karnataka Team

Published : Jun 25, 2024, 8:30 AM IST

Updated : Jun 25, 2024, 8:54 AM IST

Launch New Gen Cars With CNG, EV Versions:ದೇಶದ ಪ್ರಸಿದ್ಧ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇತರ ಕಂಪನಿಗಳಿಗೆ ಮತ್ತಷ್ಟು ಪೈಪೋಟಿ ನೀಡಲು ಸನ್ನದ್ಧವಾಗಿದೆ. ಪ್ರತಿ ವರ್ಷ ಅತಿ ಹೆಚ್ಚು ಕಾರು ಮಾರಾಟ ಮಾಡುವ ಮೂಲಕ ಅಗ್ರಸ್ಥಾನದಲ್ಲಿ ಮುಂದುವರೆದಿರುವ ಕಂಪನಿ, ತನ್ನ ಓಟವನ್ನು ತಡೆಯದಂತೆ ನೋಡಿಕೊಳ್ಳಲು ಮತ್ತಷ್ಟು ಆವಿಷ್ಕಾರಗಳಿಗೆ ಮುಂದಾಗಿದೆ.

ನ್ಯೂಮೆರೋ ಯುನೊ ಸ್ಥಾನವನ್ನು ಮುಂದುವರೆಸಿರುವ ಮಾರುತಿ ಸುಜುಕಿ, ಮುಂದಿನ ಕೆಲವು ತಿಂಗಳುಗಳಲ್ಲಿ ಮೂರು ಹೊಸ ಕಾರುಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಅವುಗಳೆಂದರೆ ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್‌ಜಿ, ಹೊಸ - ಜೆನ್ ಮಾರುತಿ ಸುಜುಕಿ ಡಿಜೈರ್, ಮಾರುತಿ ಸುಜುಕಿ ಇವಿಎಕ್ಸ್ ಎಸ್‌ಯುವಿ. ಈ ಹೊಸ ಮಾದರಿಯ ಕಾರುಗಳು ವಿನೂತನ ಎಂಜಿನ್ ಮತ್ತು ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ತೋರುತ್ತದೆ.

ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್‌ಜಿ: ಹೊಸ-ಜೆನ್ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಸಿಎನ್‌ಜಿ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆಯಂತೆ. ಈ ವರ್ಷದ ದ್ವಿತೀಯಾರ್ಧದಲ್ಲಿ ಈ ಕಾರು ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಈ ಕಾರು ಪ್ರಸ್ತುತ ಭಾರತೀಯ ರಸ್ತೆ ಪರಿಸ್ಥಿತಿಗಳಿಗೆ ತಕ್ಕಂತೆ ಮರು ವಿನ್ಯಾಸಗೊಳಿಸಲಾಗಿದೆ.

ಆದರೆ, ಈ ಸಿಎನ್ ಜಿಯಿಂದ ವಿದ್ಯುತ್ ಉತ್ಪಾದನೆ ಕಡಿಮೆಯಾಗಲಿದೆ ಎನ್ನುತ್ತಾರೆ ತಜ್ಞರು. ಅಂದ ಹಾಗೆ ಈ ಕಾರು 32 ಕಿಮೀ ಮೈಲೇಜ್ ನೀಡಲಿದೆ ಎಂದು ವರದಿಯಾಗಿದೆ. ಮಾರುಕಟ್ಟೆ ಮೂಲಗಳ ಪ್ರಕಾರ ಸಿಎನ್ ಜಿ ಎಂಜಿನ್ ಹೊಂದಿರುವ ಕಾರಿನ ಬೆಲೆ ಪೆಟ್ರೋಲ್ ಆವೃತ್ತಿಗಿಂತ 90,000 ರಿಂದ 95,000 ರೂ. ಹೆಚ್ಚು ಇರಲಿದೆ.

ಹೊಸ ಮಾರುತಿ ಸುಜುಕಿ ಡಿಜೈರ್:ಈ ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ ಕಾರು ಜುಲೈನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಹಿಂದೆ ‘ಡಿಜೈರ್’ ಮಾದರಿಯು ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಆಗುವ ಕಾರಾಗಿತ್ತು. ಹೊಸ ಮಾದರಿಯೊಂದಿಗೆ ಮಾರಾಟವು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ಕಾರಿನಲ್ಲಿ ಹೊಸ ಸನ್ ರೂಫ್ ಕೂಡ ಅಳವಡಿಸಲಾಗುತ್ತಿದೆಯಂತೆ. ಅದು ಸಂಭವಿಸಿದಲ್ಲಿ, ಹೊಸ-ಜೆನ್ ಮಾರುತಿ ಸುಜುಕಿ ಡಿಜೈರ್ ಸನ್‌ರೂಫ್ ಸೌಲಭ್ಯವನ್ನು ಪಡೆದ ಮೊದಲ ಸೆಡಾನ್ ಆಗಲಿದೆ.

ಈ ಕಾರು ಹೆಚ್ಚುವರಿ ಬೂಟ್ ಸ್ಪೇಸ್‌ನೊಂದಿಗೆ ಬರುವ ಎಲ್ಲ ಸಾಧ್ಯತೆಗಳಿವೆ. ಇದರ ಎಲ್ಲ ವಿನ್ಯಾಸಗಳು ಹಳೆಯ ಮಾದರಿಯಂತೆಯೇ ಇರುತ್ತವೆ ಎನ್ನಲಾಗಿದೆ. ಈ ಕಾರು 1.2 ಲೀಟರ್ Z ಸರಣಿಯ ಮೂರು ಸಿಲಿಂಡರ್ Z12E ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಫೀಚರ್‌ಗಳನ್ನು ಈ ಕಾರಿನಲ್ಲಿ ಸೇರಿಸಲಾಗಿದೆ. ಇವುಗಳ ಜೊತೆಗೆ, ಕಾರು ಸ್ವಯಂಚಾಲಿತ HVAC, ಕೀಲೆಸ್ ಎಂಟ್ರಿ, ಕ್ರೂಸ್ ಕಂಟ್ರೋಲ್ ಮತ್ತು ಒಂಬತ್ತು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಸಹ ಅಳವಡಿಸಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

ಮಾರುತಿ ಸುಜುಕಿ ಇವಿಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ:ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ಪ್ರವೇಶಿಸುತ್ತಿರುವ ಮಾರುತಿ ಸುಜುಕಿ 2024 ರ ಅಂತ್ಯದ ವೇಳೆಗೆ ಮಾರುತಿ ಸುಜುಕಿ ಇವಿಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಪ್ರಸ್ತುತ ಪರೀಕ್ಷೆಯಲ್ಲಿರುವ ಈ ಕಾರನ್ನು ಇನ್ನೂ ತಯಾರಿಕಾ ಹಂತದಲ್ಲಿದೆ. ಬಾರ್ನ್-ಎಲೆಕ್ಟ್ರಿಕ್ ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್.

ಕಾರು 4.3 ಮೀಟರ್ ಉದ್ದವಿದ್ದು, 2700 ಎಂಎಂ ವ್ಹೀಲ್ ಬೇಸ್ ಹೊಂದಿದೆ. ಕಂಪನಿ ಹೇಳಿಕೆ ಪ್ರಕಾರ, ಈ ಕಾರುಗಳು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳಲ್ಲಿ ಲಭ್ಯವಿದೆ. 48 kWh ಬ್ಯಾಟರಿ ಕಾರು ಒಮ್ಮೆ ಚಾರ್ಜ್ ಮಾಡಿದರೆ 400 ಕಿ.ಮೀ. ಓಡಲಿದೆ. ಇನ್ನೊಂದು 60 kWh ಬ್ಯಾಟರಿ ಮಾದರಿಯಾಗಿದ್ದು, ಇದು ಒಮ್ಮೆ ಚಾರ್ಜ್​ ಮಾಡಿದರೆ 550 ಕಿಮೀ ಮೈಲೇಜ್​ ಕೊಡಲಿದೆ. ಹ್ಯುಂಡೈ ಕ್ರೆಟಾ ಇವಿ, ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ 400 ಇವಿಗಳಿಗೆ ಸ್ಪರ್ಧಿಸಲು ಮಾರುತಿ ಸುಜುಕಿ ಈ ಕಾರು ಬಿಡುಗಡೆ ಮಾಡಲು ಎಲ್ಲ ತಯಾರಿ ಮಾಡಿಕೊಂಡಿದೆ.

ಇದನ್ನು ಓದಿ:ಭಾರತದ ಮಾರುಕಟ್ಟೆಗೆ ಬರಲಿವೆ ಕೈಗೆಟಕುವ ದರದಲ್ಲಿ 7 ಸೀಟರ್​​ ಕಾರುಗಳು: ಮುಂಬರುವ ತಿಂಗಳಲ್ಲೇ ಈ SUVಗಳು ಲಾಂಚ್​!? - UPCOMING 7 SEATER CARS

Last Updated : Jun 25, 2024, 8:54 AM IST

ABOUT THE AUTHOR

...view details