New Kia Sonet Sale In India: ಕಿಯಾ ಮೋಟಾರ್ಸ್‌ನ ಹೊಸ ಸೋನೆಟ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಕಿಯಾ ಸೋನೆಟ್ ಫೇಸ್‌ಲಿಫ್ಟ್ ಬಿಡುಗಡೆಯಾದ ಕೇವಲ 11 ತಿಂಗಳಲ್ಲಿ 1 ಲಕ್ಷ ಮಾರಾಟದ ಗಡಿಯನ್ನು ದಾಟಿದೆ. ಜನವರಿ 2024 ರಲ್ಲಿ ಬಿಡುಗಡೆಯಾದ ಈ ಕಾರಿನ ಆರಂಭಿಕ ಬೆಲೆ ರೂ 7.99 ಲಕ್ಷ (ಎಕ್ಸ್ ಶೋ ರೂಂ). ಪ್ರತಿ ತಿಂಗಳು ಸರಾಸರಿ 10,000 ವಾಹನಗಳು ಮಾರಾಟವಾಗುತ್ತಿವೆ ಎಂಬ ಅಂಶದಿಂದ ಇದರ ಜನಪ್ರಿಯತೆ ಅಳೆಯಬಹುದು. ಪೆಟ್ರೋಲ್ ರೂಪಾಂತರಗಳು ಹೆಚ್ಚು ಇಷ್ಟವಾಗುತ್ತಿವೆ. ಸನ್‌ರೂಫ್ ಹೊಂದಿರುವ ವಾಹನಗಳು ಸಹ ಉತ್ತಮ ಬೇಡಿಕೆಯಲ್ಲಿವೆ. ಗ್ರಾಹಕರ ಅಗತ್ಯಗಳನ್ನು ಅರಿತುಕೊಂಡು ಈ ಯಶಸ್ಸು ಸಾಧಿಸಲಾಗಿದೆ ಎಂದು ಕಂಪನಿಯ ಹಿರಿಯ ಅಧಿಕಾರಿ ಹೇಳಿದ್ದಾರೆ.
22 ವಿಭಿನ್ನ ರೂಪಾಂತರಗಳಲ್ಲಿ ಲಭ್ಯ:ಹೊಸ ಕಿಯಾ ಸೋನೆಟ್ 6 ವಿಭಿನ್ನ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿರುವ 22 ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ಶೇಕಡಾ 76 ರಷ್ಟು ಗ್ರಾಹಕರು ಪೆಟ್ರೋಲ್ ಎಂಜಿನ್ ವಾಹನಗಳಿಗೆ ಆದ್ಯತೆ ನೀಡುತ್ತಿದ್ದರೆ, ಶೇಕಡಾ 24 ರಷ್ಟು ಗ್ರಾಹಕರು ಡೀಸೆಲ್ ಎಂಜಿನ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮಾರಾಟದ ಮಾಹಿತಿ ಪ್ರಕಾರ ತಿಳಿದು ಬಂದಿದೆ. ಆಟೋಮೆಟಿಕ್ ಮತ್ತು ಇಂಟೆಲಿಜೆಂಟ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ (iMT) ಹೊಂದಿರುವ ರೂಪಾಂತರಗಳು ಒಟ್ಟು ಮಾರಾಟದ ಶೇಕಡಾ 34 ರಷ್ಟಿದೆ. IMT ಅಂದರೆ ಇಂಟೆಲಿಜೆಂಟ್ ಮ್ಯಾನುಯಲ್ ಸಿಸ್ಟಮ್, ಮ್ಯಾನ್ಯುವಲ್ ಗೇರ್ಡ್ ವಾಹನದಲ್ಲಿ ಕ್ಲಚ್‌ನ ಕೆಲಸವನ್ನು ಆಟೋಮೆಟಿಕ್ ಆಗಿರುವ ಸಿಸ್ಟಮ್ ಆಗಿದೆ. ಇದು ಚಾಲನೆಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ.