Jio VS Airtel Best Recharge Plan:ಜಿಯೋ ಮತ್ತು ಏರ್ಟೆಲ್ ಭಾರತದ ಎರಡು ದೊಡ್ಡ ಖಾಸಗಿ ಟೆಲಿಕಾಂ ಕಂಪನಿಗಳು. ಎರಡೂ ಕಂಪನಿಗಳು ತಮ್ಮ ಪ್ರೀಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಯೋಜನೆಗಳ ಬೆಲೆಗಳನ್ನು ಗಣನೀಯವಾಗಿ ಹೆಚ್ಚಿಸಿದ್ದರಿಂದ ಬಳಕೆದಾರರು ಕಳೆದ ವರ್ಷದಿಂದ ಜುಲೈ 2024ರಿಂದ ದುಬಾರಿ ಪ್ರೀಪೇಯ್ಡ್ ಯೋಜನೆಗಳನ್ನು ಖರೀದಿಸುತ್ತಿದ್ದಾರೆ. ಹೀಗಾಗಿ ಬಳಕೆದಾರರು ತಮ್ಮ ಬಜೆಟ್ಗೆ ಅನುಗುಣವಾಗಿ ಅಗ್ಗದ ಪ್ರಿಪೇಯ್ಡ್ ಯೋಜನೆಯನ್ನು ಆಯ್ಕೆ ಮಾಡುವುದು ತುಂಬಾ ಕಷ್ಟಕರವಾಗುತ್ತಿದೆ.
ಜಿಯೋದ ಅತ್ಯಂತ ಅಗ್ಗದ ಯೋಜನೆ: ಜಿಯೋದ 249 ರೂ. ಪ್ರೀಪೇಯ್ಡ್ ಯೋಜನೆ ಬಳಕೆದಾರರಿಗೆ ತುಂಬಾ ಉಪಯುಕ್ತ ಮತ್ತು ಕಂಪನಿ ಇದನ್ನು ಜನಪ್ರಿಯ ವರ್ಗದ ಪಟ್ಟಿಯಲ್ಲಿರಿಸಿದೆ. ಇದರ ಮಾನ್ಯತೆ 28 ದಿನಗಳು. ಪ್ರತಿದಿನ 1GB ಡೇಟಾ ಸಿಗುತ್ತದೆ. ದೈನಂದಿನ ಡೇಟಾ ಮಿತಿ ಮುಗಿದ ನಂತರ 64kbps ವೇಗದಲ್ಲಿ ಡೇಟಾ ಸೌಲಭ್ಯವಿದೆ.
ಇದಲ್ಲದೆ ಈ ಯೋಜನೆಯೊಂದಿಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಸೌಲಭ್ಯವನ್ನೂ ಪಡೆಯಬಹುದು. ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಚಂದಾದಾರಿಕೆಯೂ ಇದೆ. ಆದರೆ, ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಉಚಿತವಾಗಿ ಲಭ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.