ಕರ್ನಾಟಕ

karnataka

ETV Bharat / technology

'ತಂತ್ರಜ್ಞಾನ, ತಂತ್ರಾಂಶಗಳ ಬಳಕೆಯಿಂದ ಬಾಹ್ಯಾಕಾಶ ಅವಶೇಷಗಳ ತೊಂದರೆಗಳು ತಗ್ಗುತ್ತವೆ' - Isro Chief Somanath - ISRO CHIEF SOMANATH

ಗಗನಯಾನ ಯೋಜನೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಪರೀಕ್ಷಾ ಸರಣಿಯನ್ನು ಯೋಜಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ತಿಳಿಸಿದ್ದಾರೆ.

ತಂತ್ರಜ್ಞಾನ, ತಂತ್ರಾಂಶಗಳನ್ನು ಬಳಸುವುದರಿಂದ ಬಾಹ್ಯಾಕಾಶ ಅವಶೇಷಗಳ ತೊಂದರೆಗಳು ತಗ್ಗುತ್ತವೆ: ಸೋಮನಾಥ್
ತಂತ್ರಜ್ಞಾನ, ತಂತ್ರಾಂಶಗಳನ್ನು ಬಳಸುವುದರಿಂದ ಬಾಹ್ಯಾಕಾಶ ಅವಶೇಷಗಳ ತೊಂದರೆಗಳು ತಗ್ಗುತ್ತವೆ: ಸೋಮನಾಥ್

By ETV Bharat Karnataka Team

Published : Apr 16, 2024, 9:31 PM IST

Updated : Apr 16, 2024, 11:01 PM IST

ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್

ಬೆಂಗಳೂರು:ತಂತ್ರಜ್ಞಾನಗಳು ಮತ್ತು ವಿವಿಧ ತಂತ್ರಾಂಶಗಳನ್ನು ಬಳಸುವುದರಿಂದ ಬಾಹ್ಯಾಕಾಶ ಅವಶೇಷಗಳ ತೊಂದರೆಗಳು ತಗ್ಗುತ್ತವೆ. ಭಾರತ ಬೃಹತ್ ಬಾಹ್ಯಾಕಾಶ ಸಂಪತ್ತು ಹೊಂದಿರುವುದರಿಂದ ನಮಗೂ ಕೂಡ ಇದು ಪ್ರಮುಖ ವಿಷಯವಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದರು.

ಇಂಟರ್-ಏಜೆನ್ಸಿ ಸ್ಪೇಸ್ ಡೆಬ್ರಿಸ್ ಸಮನ್ವಯ ಸಮಿತಿಯ ನಾಲ್ಕು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿದ ನಂತರ 'ಈಟಿವಿ ಭಾರತ್‌'ನೊಂದಿಗೆ ಮಾತನಾಡಿದ ಅವರು, ಇಸ್ರೋ ಇಂದು ಮೂರನೇ ಬಾರಿ ಐಎಡಿಸಿ ಸಭೆಯನ್ನು ಆಯೋಜಿಸುತ್ತಿದೆ. ಬೆಂಗಳೂರಿನಲ್ಲಿ ಇದು ಎರಡನೇಯ ಬಾರಿ. ಈ ಹಿಂದೆ ತಿರುವಂತಪುರದಲ್ಲೂ ಸಭೆ ನಡೆದಿತ್ತು ಎಂದು ತಿಳಿಸಿದರು.

ಇದು ಬಾಹ್ಯಾಕಾಶ ಸಂಸ್ಥೆಗಳ ಜಾಗತಿಕ ಸಮಿತಿ. ಬಾಹ್ಯಾಕಾಶ ಅವಶೇಷಗಳು ಮತ್ತು ಅದರ ಸವಾಲುಗಳ ಬಗ್ಗೆ ವಿವಿಧ ಅಂಶಗಳನ್ನು ಚರ್ಚಿಸಲಾಗುವುದು. ಬಾಹ್ಯಾಕಾಶ ಸುಸ್ಥಿರತೆ ಮತ್ತು ಕಕ್ಷೆಯ ನಿರ್ವಹಣೆ ಇಲ್ಲಿ ಚರ್ಚೆಯಾಗುವ ಮುಖ್ಯ ವಿಷಯಗಳಾಗಿವೆ. ಬಾಹ್ಯಾಕಾಶ ಅವಶೇಷಗಳನ್ನು ತಗ್ಗಿಸಲು ತಂತ್ರಜ್ಞಾನಗಳು ಮತ್ತು ವಿವಿಧ ತಂತ್ರಗಳನ್ನು ಚರ್ಚಿಸಲಾಗುತ್ತಿದೆ. ಈ ಸಭೆಯ ಫಲಿತಾಂಶವನ್ನು ವಿವಿಧ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ವಿಶ್ಲೇಷಿಸಿ ಕಾರ್ಯಗತಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಗಗನಯಾನ ಮಿಷನ್ ಸಿದ್ಧತೆಗಳು ಭರದಿಂದ ಸಾಗಿವೆ. ಪರೀಕ್ಷೆಗಳ ಸರಣಿಯನ್ನೇ ಯೋಜಿಸಲಾಗಿದೆ. ಈ ವರ್ಷ ಇಸ್ರೋ ಈ ಮಿಷನ್‌ಗಾಗಿ ಸಂಪೂರ್ಣವಾಗಿ ಕೆಲಸ ಮಾಡಲಿದೆ. ಎಲ್ಲವೂ ಸರಿಯಾಗಿ ನಡೆದರೆ ನಾವು ಈ ವರ್ಷದ ದ್ವಿತೀಯಾರ್ಧದಲ್ಲಿ ಬಾಹ್ಯಾಕಾಶಕ್ಕೆ ಮೊದಲ ಮಾನವಸಹಿತ ನೌಕೆಯನ್ನು ನಡೆಸುತ್ತೇವೆ. ಚಂದ್ರಯಾನ-3 ಮಿಷನ್ ಮುಗಿದಿದ್ದು, ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದ್ದೇವೆ. ಎಲ್ಲಾ ವೈಜ್ಞಾನಿಕ ಡೇಟಾ ಸಂಗ್ರಹಿಸಲಾಗಿದೆ. ಅಂಕಿಅಂಶಗಳು ಪರಿಶೀಲನಾ ಹಂತದಲ್ಲಿವೆ. ಅಂತಿಮ ಫಲಿತಾಂಶ ಶೀಘ್ರದಲ್ಲೇ ಹೊರಬೀಳಲಿದೆ ಎಂದರು.

ಇನ್ನು ಆದಿತ್ಯ ಎಲ್ 1 ಮಿಷನ್ ಮುಂದಿನ ಐದು ವರ್ಷಗಳವರೆಗೆ ಮುಂದುವರಿಯಲಿದೆ. ಆದಿತ್ಯ ಮಿಷನ್ ದೀರ್ಘ ಅವಲೋಕನಗಳನ್ನು ಒಳಗೊಂಡಿದೆ. ಇದು ಇತರ ಮಿಷನ್​ಗಳಿಗಿಂತ ಬಹಳ ಭಿನ್ನವಾಗಿದೆ. ಇದರಲ್ಲಿ ದೀರ್ಘಕಾಲದಲ್ಲಿ ಸ್ಥಿರವಾಗಿ ಗಮನಿಸುವುದನ್ನು ಒಳಗೊಂಡಿದೆ. ಇದರಲ್ಲಿ ಬಾಹ್ಯಾಕಾಶ ಹವಾಮಾನದ ಮೇಲೆ ಮಾಸ್ ಎಜೆಕ್ಷನ್‌ಗಳು ಅದರ ಪ್ರಭಾವ ಮತ್ತು ಇತರ ಹಲವು ಅಂಶಗಳನ್ನು ಮುಂದಿನ ಐದು ವರ್ಷಗಳ ಕಾಲ ಅಧ್ಯಯನ ಮಾಡಲಾಗುವುದು ಎಂದು ವಿವರಿಸಿದರು.

ಈ ವೇಳೆ ಐ.ಎಸ್.ಟಿ.ಆರ್.ಸಿ ಅಧ್ಯಕ್ಷ ಡಾ.ಎ.ಕೆ.ಅನಿಲ್ ಕುಮಾರ್, ಇಸ್ರೋ ಸಂಸ್ಥೆಯ ಗೌರವ ಪ್ರಾಧ್ಯಾಪಕ ವಿ.ಆದಿಮೂರ್ತಿ, ಸ್ಥಳೀಯ ಸಂಘಟನಾ ಸಮಿತಿಯ ಕಾರ್ಯದರ್ಶಿ ಸಿ.ಬಾಲಮುರುಗನ್ ಉಪಸ್ಥಿತರಿದ್ದರು.

ಇದನ್ನೂ ಓದಿ:ಇಸ್ರೇಲ್‌-ಇರಾನ್‌ ಸಂಘರ್ಷದಿಂದ ತೈಲ ಕೊರತೆ ಭೀತಿ: ಜೈಶಂಕರ್‌ - Dr S Jaishankar

Last Updated : Apr 16, 2024, 11:01 PM IST

ABOUT THE AUTHOR

...view details