iPhone 16 Pro- Pro Max: ಟೆಕ್ ದೈತ್ಯ ಆಪಲ್ ಪ್ರತಿ ವರ್ಷ ಹೊಸ ಐಫೋನ್ ಸರಣಿಯ ಫೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಈ ವರ್ಷವೂ ಐಫೋನ್ 16 ಸರಣಿ ಹೊರ ತರಲು ಸನ್ನದ್ಧವಾಗಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಹೊಸ ಮಾದರಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆಯಂತೆ. ಈ ಐಫೋನ್ 16 ಸರಣಿಯು ಉತ್ತಮ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂದು ವರದಿಯಾಗಿದೆ. iPhone 16 Pro ಮತ್ತು iPhone 16 Pro Max ನ ವೈಶಿಷ್ಟ್ಯಗಳೇನು ಎಂಬುದನ್ನು ತಿಳಿದಕೊಳ್ಳೋಣ
ಐಫೋನ್ 16 ಪ್ರೊ ಮ್ಯಾಕ್ಸ್‌ನಲ್ಲಿ ಹೊಸ ಕ್ಯಾಮೆರಾ ಸೋನಿ ಐಎಂಎಕ್ಸ್ 903, ಐಫೋನ್ 16 ಪ್ರೊ ಮ್ಯಾಕ್ಸ್‌ನಲ್ಲಿ ಹೊಸ ಕ್ಯಾಮೆರಾ ಸೆನ್ಸಾರ್‌ನ ಸಾಧ್ಯತೆಯಿದೆ ಎಂದು ಕಂಪನಿಯ ಮೂಲಗಳಿಂದ ತಿಳಿದು ಬಂದಿದೆ. ಈ ಹೊಸ ಸಂವೇದಕವು 48-ಮೆಗಾಪಿಕ್ಸೆಲ್ ರೆಸಲ್ಯೂಶನ್ ನೀಡುತ್ತದೆ ಎನ್ನಲಾಗಿದೆ. ಇದು ಈ ಹಿಂದಿನ ಮಾದರಿಯ iPhone 15 Pro ಗಿಂತ ಹೆಚ್ಚು ಸ್ಪಷ್ಟತೆಯೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳಬಹುದಂತೆ. ಪ್ರೊ ಮ್ಯಾಕ್ಸ್ 48-ಮೆಗಾಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಹೆಚ್ಚಿನ ರೆಸಲ್ಯೂಶನ್ ಫೋಟೋಗಳನ್ನು ತೆಗೆಯಬಹುದು. ಆದರೆ ಈ ನವೀಕರಣವು iPhone 16 Pro Max ಗೆ ಮಾತ್ರ ಸೀಮಿತವಾಗಿದೆ. ಐಫೋನ್ 16 ಪ್ರೊ 48 ಮೆಗಾಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ ಸೋನಿ IMX803 ಸಂವೇದಕದೊಂದಿಗೆ ಹೊರ ಬರಲಿದೆ ಎಂದು ವರದಿಯಾಗಿದೆ.
ಕ್ಯಾಮೆರಾ ಅಪ್‌ಗ್ರೇಡ್ ಅಲ್ಟ್ರಾ ವೈಡ್ ಕ್ಯಾಮೆರಾವನ್ನು iPhone 16 Pro ಮತ್ತು Pro Max ನಲ್ಲಿ ಅಪ್‌ಗ್ರೇಡ್ ಮಾಡಲಾಗುತ್ತದೆ. ಪ್ರಸ್ತುತ 12 ಮೆಗಾಪಿಕ್ಸೆಲ್ ಸಂವೇದಕಕ್ಕೆ ಬದಲಾಗಿ, ಹೊಸ ಮಾದರಿಗಳು 48 ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿರುವ ಸಾಧ್ಯತೆಯಿದೆ. ಈ ಅಪ್‌ಗ್ರೇಡ್‌ನಿಂದಾಗಿ, ಕಡಿಮೆ - ಬೆಳಕಿನ ಪರಿಸ್ಥಿತಿಗಳಲ್ಲಿಯೂ ಫೋಟೋಗಳು ಸಂಪೂರ್ಣ ಸ್ಪಷ್ಟತೆಯೊಂದಿಗೆ ಬರುತ್ತವೆ. ಚಿಕ್ಕ ಸಂವೇದಕಗಳು ಸಾಮಾನ್ಯವಾಗಿ ಕಡಿಮೆ ಬೆಳಕಿನಲ್ಲಿ ಸ್ಪಷ್ಟ, ಪ್ರಕಾಶಮಾನವಾದ ಫೋಟೋಗಳನ್ನು ಸೆರೆಹಿಡಿಯಲು ಸಾಧ್ಯವಿಲ್ಲ. 48 ಮೆಗಾ ಪಿಕ್ಸೆಲ್ ಸಂವೇದಕವು ಹೆಚ್ಚು ಬೆಳಕನ್ನು ಹೀರಿಕೊಳ್ಳಲು ಪಿಕ್ಸೆಲ್ ಬಿನ್ನಿಂಗ್ ತಂತ್ರಜ್ಞಾನವನ್ನು ಬಳಸುತ್ತದೆ. ಪರಿಣಾಮ ಯಾವುದೇ ಬೆಳಕಿನ ಪರಿಸ್ಥಿತಿಗಳಲ್ಲೂ ಉತ್ತಮ ಸ್ಪಷ್ಟತೆಯೊಂದಿಗೆ ಫೋಟೋಗಳು ಹೊರಬರುತ್ತವೆ.
ಟೆಲಿಫೋಟೋ ಕ್ಯಾಮೆರಾ ಅಪ್‌ಗ್ರೇಡ್ ಆಗುತ್ತಿದೆಯೇ?: 5x ಆಪ್ಟಿಕಲ್ ಜೂಮ್‌ನೊಂದಿಗೆ 12 ಮೆಗಾ ಪಿಕ್ಸೆಲ್ ಸಂವೇದಕದೊಂದಿಗೆ ಐಫೋನ್ 16 ಪ್ರೊನಲ್ಲಿ ಟೆಲಿಫೋಟೋ ಕ್ಯಾಮೆರಾ ಎಂದಿನಂತೆ ಮುಂದುವರಿಯುತ್ತದೆ. ಆದಾಗ್ಯೂ, ಐಫೋನ್ 16 ಪ್ರೊ ನವೀಕರಿಸಿದ ಟೆಲಿಫೋಟೋ ಕ್ಯಾಮೆರಾವನ್ನು ನೀಡಬಹುದು ಎಂದು ತಿಳಿದು ಬಂದಿದೆ.