ನವದೆಹಲಿ:ಸುಟ್ಟ ಗಾಯಗಳನ್ನು ತ್ವರಿತವಾಗಿ ಗುಣಪಡಿಸಲು ನೆರವಾಗುವಂಥ ಜೈವಿಕ ವಿಘಟನೀಯ ವಸ್ತುಗಳಿಂದ ಅಭಿವೃದ್ಧಿಪಡಿಸಿದ ಮತ್ತು ವಿಟಮಿನ್ ಸಿ ಯಿಂದ ತುಂಬಿದ ಹೊಸ ಬ್ಯಾಂಡೇಜ್ ಒಂದನ್ನು ಇಟಲಿಯ ಸಂಶೋಧಕರು ಆವಿಷ್ಕರಿಸಿದ್ದಾರೆ.
ಇಟಾಲಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ಸಂಶೋಧಕರ ತಂಡವು ಅಭಿವೃದ್ಧಿಪಡಿಸಿದ ಬ್ಯಾಂಡೇಜ್ ಮೆಕ್ಕೆಜೋಳದಿಂದ ಪಡೆದ ಜೀನ್ ಎಂಬ ಪ್ರೋಟೀನ್, ಸೇಬಿನಂತಹ ಅನೇಕ ಹಣ್ಣುಗಳ ಸಿಪ್ಪೆಯಲ್ಲಿ ಕಂಡುಬರುವ ಸಕ್ಕರೆ ಪೆಕ್ಟಿನ್ ಮತ್ತು ಸೋಯಾ ಲೆಸಿಥಿನ್ ಹೆಸರಿನ ಸಸ್ಯದಿಂದ ಪಡೆದ ಸೋಯಾ ಲೆಸಿಥಿನ್ ಎಂಬ ಅಂಶಗಳನ್ನು ಒಳಗೊಂಡಿದೆ.
ದೇಹಕ್ಕೆ ಸುಟ್ಟ ಗಾಯವಾದಾಗ ದೇಹದ ನೈಸರ್ಗಿಕ ರಕ್ಷಣಾ ಕಾರ್ಯವಿಧಾನದ ಕಾರಣದಿಂದ ಆ ಜಾಗದಲ್ಲಿ ಉರಿಯೂತ ಅಥವಾ ನೋವು ಉಂಟಾಗುತ್ತದೆ. ನೋವಿನ ಕಾರಣದಿಂದ ಗಾಯವಾದ ಜಾಗದಲ್ಲಿ ಕೆಂಪಾಗಿ ಊದಿಕೊಳ್ಳುತ್ತದೆ. ಆದರೆ ಉರಿಯೂತವು ಜಾಸ್ತಿಯಾದಲ್ಲಿ ಆ ಜಾಗದಲ್ಲಿ ಆಮ್ಲಜನಕ ಮುಕ್ತ ರಾಡಿಕಲ್ಗಳ ಉತ್ಪಾದನೆಯು ಹೆಚ್ಚಾಗುತ್ತದೆ ಮತ್ತು ಇದೇ ಕಾರಣದಿಂದ ಗಾಯ ಗುಣಮುಖವಾಗುವ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ.
ಎಸಿಎಸ್ ಅಪ್ಲೈಡ್ ಬಯೋ ಮೆಟೀರಿಯಲ್ಸ್ ಜರ್ನಲ್ನಲ್ಲಿ ವಿವರಿಸಲಾದ ಹೊಸ ಬ್ಯಾಂಡೇಜ್, ಉರಿಯೂತದ ಮಟ್ಟದಲ್ಲಿನ ಹೆಚ್ಚಳವನ್ನು ತಡೆಗಟ್ಟುವ ಮತ್ತು ಫ್ರೀ ರಾಡಿಕಲ್ಗಳ ಸಂಖ್ಯೆಯನ್ನು ಕಡಿತಗೊಳಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಗಾಯ ಗುಣಮುಖವಾಗುವ ಅವಧಿಯನ್ನು ಕಡಿಮೆ ಮಾಡುತ್ತದೆ. ಎಂದು ತಿಳಿಸಲಾಗಿದೆ.