ಕರ್ನಾಟಕ

karnataka

ETV Bharat / technology

ಚಿಲ್ಲರೆ ಸಮಸ್ಯೆಗೆ ಮುಕ್ತಿ; ನಿಮಗೆ ಬೇಕಾದ ಕಾಯಿನ್​ ನೀಡುತ್ತೆ ಕ್ಯೂಆರ್​ ಕೋಡ್​​ ಆಧಾರಿತ ಈ ವೆಂಡಿಂಗ್​ ಮಷಿನ್​! - COIN VENDING MACHINE

ಈ ಮಷಿನ್​ನಿಂದ ಕೂಡ ಎಟಿಎಂನಂತೆ ಹಣ ಪಡೆಯುವಂತೆ ಸುಲಭವಾಗಿ ನಾಣ್ಯವನ್ನು ಪಡೆಯಬಹುದಾಗಿದ್ದು, ಸಾಮಾನ್ಯ ಜನರು ಸುಲಭವಾಗಿ ಬಳಕೆ ಮಾಡಬಹುದು.

indias-first-qr-code-based-coin-vending-machine-installed-in-federal-bank-in-kerala
ಕ್ಯೂಆರ್​ ಕೋಡ್​​ ಆಧಾರಿತ ಕಾಯಿನ್​ ವೆಂಡಿಂಗ್​ ಮೆಷಿನ್​ (ಈಟಿವಿ ಭಾರತ್​​)

By ETV Bharat Karnataka Team

Published : Oct 26, 2024, 5:37 PM IST

ಕೋಝಿಕ್ಕೋಡ್(ಕೇರಳ): ಡಿಜಿಟಲ್​ ಜಗತ್ತಿನಲ್ಲಿ ಇಂದು ಜನರು ಚಿಲ್ಲರೆಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಡಿಜಿಟಲ್​ ಪಾವತಿ ಹೊರತಾಗಿಯೂ ಅನೇಕ ಬಾರಿ ಚಿಲ್ಲರೆಗಾಗಿ ಪರಿತಪಿಸಬೇಕಾಗುತ್ತದೆ. ಈ ಸಮಸ್ಯೆಗೆ ಮುಕ್ತಿ ನೀಡುವ ಉದ್ದೇಶದಿಂದ ಫೆಡರಲ್​ ಬ್ಯಾಂಕ್​ ಹೊಸ ಯೋಜನೆ ಚಾಲನೆಗೆ ತಂದಿದೆ. ಅದುವೇ ಕ್ಯೂಆರ್​ ಕೋಡ್​ ಆಧಾರಿತ ನಾಣ್ಯದ ವೆಂಡಿಂಗ್​ ಮಷಿನ್​. ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಪುಥಿಯಾರಾ ಶಾಖೆಯಲ್ಲಿ ಇದನ್ನು ಅಳವಡಿಸಲಾಗಿದೆ. ಇದರಲ್ಲಿ 1, 2, 5, 10 ರೂ. ನಾಣ್ಯಗಳು ಲಭ್ಯವಿವೆ. ನಾಣ್ಯ ಬೇಕು ಎನ್ನುವವರು ಇಲ್ಲಿನ ವೆಂಡಿಂಗ್​ ಮಷಿನ್​ನಿಂದ ಸುಲಭವಾಗಿ ಪಡೆಯಬಹುದು. ಈ ಮಷಿನ್​ನಿಂದ ಕೂಡ ಎಟಿಎಂನಂತೆ ಹಣ ಪಡೆಯುವಂತೆ ಸುಲಭವಾಗಿ ನಾಣ್ಯವನ್ನು ಪಡೆಯಬಹುದಾಗಿದ್ದು, ಸಾಮಾನ್ಯ ಜನರು ಸುಲಭವಾಗಿ ಬಳಕೆ ಮಾಡಬಹುದು.

ಏನಿದು ಕ್ಯೂಆರ್​ ಕೋಡ್​ ಆಧಾರಿತ ವೆಂಡಿಂಗ್ ಮಷಿನ್​;ಕ್ಯಾಶ್​ಲೆಸ್​ ನಾಣ್ಯವನ್ನು ನೀಡುವ ವ್ಯವಸ್ಥೆ ಇದಾಗಿದ್ದು, ಇದಕ್ಕಾಗಿ ಗ್ರಾಹಕರು ತಮ್ಮ ಮೊಬೈಲ್ ಮೂಲಕವಾಗಿ ಕ್ಯೂಆರ್​ ಕೋಡ್​ ಮೂಲಕ ಯುಪಿಐ ವಹಿವಾಟು ಮಾಡಬಹುದಾಗಿದೆ. ಜನರಿಗೆ ನಾಣ್ಯದ ಕೊರತೆ ಸಮಸ್ಯೆ ಪರಿಹಾರವಾಗಲಿ ಎಂಬ ಗುರಿಯೊಂದಿಗೆ ಈ ಕ್ಯೂ ಆರ್​ ಕೋಡ್​ ಆಧಾರಿತ ನಾಣ್ಯದ ವೆಂಡಿಂಗ್​ ಮೆಷಿನ್​ಗೆ ಚಾಲನೆ ನೀಡಲಾಗಿದೆ. ಕ್ಯೂಆರ್​ ಕೋಡ್​ ಸ್ಕ್ಯಾನ್​ ಮಾಡುವ ಮೂಲಕ ಪಾವತಿಯನ್ನು ಮಾಡಬಹುದಾಗಿದೆ. ಮಷಿನ್​ ಮೂಲಕ ನಾಣ್ಯಗಳು ಲಭ್ಯವಾಗಿದೆ.

ನಾಣ್ಯದ ವೆಂಡಿಂಗ್​ ಮಷಿನ್​ ಎಂಬುದು ಹೊಸ ವಿಷಯವಲ್ಲ. ಈ ಹಿಂದೆ ನೋಟುಗಳನ್ನು ಪಡೆದು ನಾಣ್ಯವನ್ನು ಪಡೆಯಬಹುದಾಗಿತ್ತು. ಆದರೆ, ಇದೀಗ ಕ್ಯೂಆರ್​ ಕೋಡ್​ ಆಧಾರಿತದ ಕಾಯಿನ್​ ವೆಂಡಿಂಗ್​ ಮಷಿನ್​ ಅಲ್ಲಿ ನೋಟುಗಳನ್ನು ಪಡೆಯದೇ ಕ್ಯೂಆರ್​ ಕೋಡ್​ ಮೂಲಕ ಮಾತ್ರವೇ ಹಣ ಪಡೆಯಬೇಕು. ಆರ್​ಬಿಐ 2023ರಲ್ಲಿಯೇ ಈ ರೀತಿಯ ಕ್ಯೂಆರ್​ ಕೋಡ್​ ಆಧಾರಿತ ನಾಣ್ಯದ ವೆಂಡಿಂಗ್​ ಮಷಿನ್​ ಅನ್ನು ಪರಿಚಯಿಸಲು ನಿರ್ಧರಿಸಿತು. ಇದೀಗ ಕೋಝಿಕ್ಕೋಡ್​ನ ಫೆಡರಲ್​ ಬ್ಯಾಂಕ್​ನಲ್ಲಿ ಇದನ್ನು ಅಳವಡಿಸಲಾಗಿದೆ.

ಹೇಗೆ ಕಾರ್ಯ ನಿರ್ವಹಿಸಲಿದೆ:ಫೆಡ್​ ಸ್ಟುಡಿಯೋದಲ್ಲಿ ಇದನ್ನು ಅಳವಡಿಕೆ ಮಾಡಲಾಗಿದ್ದು, ಇದು ಬ್ಯಾಂಕ್​ ಮುಂದೆ ಇದೆ. ಇಲ್ಲಿ ಪರದೆ ಮೇಲೆ ಕಾಣುವ ಅಗತ್ಯವಿರುವ ಮೌಲ್ಯದ ಮೇಲೆ ಹಣ ಪಡೆಯಬಹುದಾಗಿದೆ. ಕ್ಯೂಆರ್​ ಕೋಡ್​ ಅನ್ನು ಮುಂದಿನ ಸ್ಕ್ರೀನ್​ನಲ್ಲಿ ಕಾಣುವ ಮೌಲ್ಯಗಳ ಆಧಾರದ ಮೇಲೆ ಹಣವನ್ನು ಆಯ್ಕೆ ಮಾಡಬಹುದು. ಒಮ್ಮೆ ಡಿಜಿಟಲ್​​ ಪಾವತಿ ಆ್ಯಪ್​ ತೆರೆದಾಗ, ಕ್ಯೂಆರ್​ ಕೋಡ್​​ ಅನ್ನು ಗೂಗಲ್​ ಪೇ, ಫೋನ್​ ಪೇ ಮತ್ತು ಪೇಟಿಎಂ ಮೂಲಕ ಮಾಡಬಹುದು. ಗ್ರಾಹಕರು ಬ್ಯಾಂಕ್​ ಮೂಲಕ ಹಣ ಪಡೆಯಬಹುದಾಗಿದೆ. ಸದ್ಯ ಒಂದು, ಎರಡು ರೂ. ಸೇರಿದಂತೆ ದೊಡ್ಡ ಪ್ರಮಾಣದ ಹಣ ಪಡೆಯಬಹುದು. ಸದ್ಯ ಇದರಲ್ಲಿ ಹೆಚ್ಚಿನ ಫಲಾನುಭವಿಗಳು ಬಸ್​ ಚಾಲಕರು ಮತ್ತು ಅಂಗಡಿಯವರಾಗಿದ್ದಾರೆ. ಇನ್ನು ಬಸ್​ಗೆ ಓಡಾಡುವ ವಿದ್ಯಾರ್ಥಿಗಳು ಇದೀಗ ಈ ಮಷಿನ್​ನಿಂದ ಚಿಲ್ಲರೆ ಸಮಸ್ಯೆಗೆ ಮುಕ್ತಿ ಪಡೆದಿದ್ದಾರೆ.

ಇದನ್ನೂ ಓದಿ: ಡಾನಾ ಚಂಡಮಾರುತ ಅಬ್ಬರ: ಒಡಿಶಾದಲ್ಲಿ ಹಾನಿ, ಪಶ್ಚಿಮ ಬಂಗಾಳದಲ್ಲಿ ಎರಡು ಸಾವು

ABOUT THE AUTHOR

...view details