ಹೈದರಾಬಾದ್: ಮಹಿಳೆಯರು ಯಾವುದೇ ಬಟ್ಟೆ ತೊಟ್ಟಿದ್ದರೂ ಪುರುಷರು ಅವರತ್ತ ಲೈಂಗಿಕ ವಸ್ತುನಿಷ್ಟತೆಯಿಂದ ನೋಡುತ್ತಾರೆ ಎಂದು ಅಧ್ಯಯನ ತಿಳಿಸಿದೆ. ಐಐಟಿ ಹೈದರಾಬಾದ್ನ ಕಾಗ್ನಿಟಿವ್ ಸೈನ್ಸ್ ಲ್ಯಾಬ್ನಲ್ಲಿ ಇತ್ತೀಚೆಗೆ ಮಹಿಳೆಯರನ್ನು ದುರುಗಟ್ಟಿ ಅನುಚಿತವಾಗಿ ನೋಡುವ ಮನಸ್ಥಿತಿಯ ಕುರಿತು ಅಧ್ಯಯನ ನಡೆಸಲಾಗಿದೆ. ಈ ಸಂಶೋಧನಾ ವರದಿಯನ್ನು ಕಳೆದ ತಿಂಗಳು ನೆದರ್‌ಲ್ಯಾಂಡ್‌ನ ರೋಟರ್‌ಡ್ಯಾಮ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಈ ಸಂಶೋಧನೆಯನ್ನು ಮಂಡಿಸಲಾಗಿದೆ.
ಪ್ರೊ ಕವಿತಾ ವೆಮುರಿ ನೇತೃತ್ವದಲ್ಲಿ ನಡೆದ ಈ ಅಧ್ಯಯನದಲ್ಲಿ ಸಂಶೋಧನಾ ವಿದ್ಯಾರ್ಥಿಗಳಾದ ಆಯುಷಿ ಅಗರ್ವಾಲ್ ಮತ್ತು ಶ್ರೀಜಾ ಭುಪತಿರಾಜು ಅವರು ಭಾಗಿಯಾಗಿದ್ದರು. ಇದಕ್ಕಾಗಿ ಅವರು ಅನೇಕ ಪದವಿ, ಇಂಜಿನಿಯರಿಂಗ್ ಸೇರಿಂದಂತೆ ಭಾರತದೆಲ್ಲೆಡೆ ಐಟಿ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಿದ್ದಾರೆ. ಅನೇಕ ಬಗೆಯ ದಿರಿಸುಗಳಲ್ಲಿ ಯುವತಿಯರು ತೊಟ್ಟಾಗ ಪುರುಷ ಐಟಿ ಉದ್ಯೋಗಿಗಳು ನೋಡುವ ದೃಷ್ಟಿಯನ್ನು ಅಳೆಯಲು ಅವರು ಐ ಟ್ರ್ಯಾಕಿಂಗ್ ತಂತ್ರಜ್ಞಾನವನ್ನು ಬಳಕೆ ಮಾಡಿದ್ದಾರೆ. ಅಧ್ಯಯನದಲ್ಲಿ ಭಾಗಿಯಾದವರ ಭಾವನಾತ್ಮಕ ಪ್ರತಿಕ್ರಿಯೆ ಸಂಗ್ರಹಿಸುವ ಮೂಲಕ ದೃಷ್ಟಿಕೋನವನ್ನು ಅರ್ಥೈಸಿಕೊಳ್ಳಲಾಗಿದೆ
ಪುರುಷರು ಸಾರ್ವಜನಿಕ ಸಾರಿಗೆ, ಸಾಮಾಜಿಕ ಕೂಟಗಳು ಮತ್ತು ಮದುವೆ ಸಮಾರಂಭದಂತಹ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಆಗಾಗ್ಗೆ ಮಹಿಳೆಯರನ್ನು ಅನುಚಿತವಾಗಿ ನೋಡುತ್ತಾರೆ. ಅವರು ಕಣ್ಣಿನ ಸಂಪರ್ಕ ಗೌರವ ಕಾಪಾಡಿಕೊಳ್ಳುವ ಬದಲಾಗಿ ದೇಹದ ಕೆಲವು ಭಾಗದಲ್ಲಿ ಗಮನ ಕೇಂದ್ರೀಕರಿಸುತ್ತಾರೆ ಎಂದು ಅಧ್ಯಯನದಲ್ಲಿ ಕಂಡು ಬಂದಿದೆ.
ಕೊಡುಗೆ ನೀಡುವ ಅಂಶಗಳು: ಅಧ್ಯಯನದಲ್ಲಿ ಯುವತಿಯರು ಮತ್ತು ಬಾಲಕಿಯರ ಮೇಲೆ ಲೈಂಗಿಕದ ದೌರ್ಜನ್ಯ ಹೆಚ್ಚಾಗಲು ಅನೇಕ ಅಂಶಗಳು ಕೊಡುಗೆ ನೀಡುತ್ತದೆ ಎಂದು ಪ್ರೊ ಕವಿತಾ ವೆಮುರಿ ತಿಳಿಸಿದ್ದಾರೆ. ಇದರಲ್ಲಿ ಮಾದಕತೆ, ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲತೆ ಮತ್ತು ಚಲನಚಿತ್ರಗಳಲ್ಲಿನ ಐಟಂ ಹಾಡುಗಳು ಅವರ ಅನುಚಿತ ವರ್ತನೆಗಳ ಮೇಲೆ ಪ್ರಭಾವ ಬೀರುವ ಅಂಶಗಳಾಗಿವೆ. ಇಂತಹ ಸಾಂಸ್ಕೃತಿಕ ಅಂಶಗಳಿಂದಾಗಿ ಯುವಕರು, ಮಹಿಳೆಯರನ್ನು ಲೈಂಗಿಕ ವಸ್ತು ಎಂದು ದೃಷ್ಟಿ ಹೊಂದುವಂತೆ ಮಾಡುತ್ತದೆ. ಇದು ಪರಿಚಯ ಮತ್ತು ಅಪರಿಚಿತ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗುತ್ತದೆ