Hyundai Motor Production: ದಕ್ಷಿಣ ಕೊರಿಯಾ ದೇಶದ ದೈತ್ಯ ವಾಹನ ತಯಾರಕ ಹುಂಡೈ ಜಾಗತಿಕವಾಗಿ 10 ಕೋಟಿ ವಾಹನಗಳನ್ನು ತಯಾರಿಸಿದೆ ಎಂದು ಘೋಷಿಸಿದೆ. ಕಂಪನಿ ಸ್ಥಾಪನೆಯಾಗಿ 57 ವರ್ಷಗಳಲ್ಲಿ ಈ ಸಾಧನೆ ಮಾಡಿರುವುದು ವಿಶೇಷ. ಇದರೊಂದಿಗೆ, ಹ್ಯುಂಡೈ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆಟೋಮೋಟಿವ್ ಕಂಪನಿಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹುಂಡೈ ಮೋಟಾರ್ ಸಿಯೋಲ್‌ನಿಂದ ಆಗ್ನೇಯಕ್ಕೆ ಸುಮಾರು 300 ಕಿ.ಮೀ ದೂರದಲ್ಲಿರುವ ಉಲ್ಸಾನ್‌ನಲ್ಲಿರುವ ತನ್ನ ಘಟಕದಲ್ಲಿ ಈ ಸಾಧನೆಯ ಸಂಭ್ರಮಾಚರಿಸಿತು. ಅಲ್ಲಿ ಕಂಪನಿಯು ದಕ್ಷಿಣ ಕೊರಿಯಾದ ಮೊದಲ ಮಾಸ್-ಪ್ರೊಡ್ಯುಸುಡ್ ಇಂಡಿಪೆಂಡೆಂಟ್ ಮಾಡೆಲ್ ಪೋನಿ ಅನ್ನು 1975ರಲ್ಲಿ ಉತ್ಪಾದಿಸಿತ್ತು. ಇದೀಗ 100 ಮಿಲಿಯನ್ ಮತ್ತು ಮೊದಲ ವಾಹನವಾದ Ioniq 5 ಅನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಿದೆ ಎಂದು ಹೇಳಿದೆ.
ಹುಂಡೈ ತನ್ನ ಮೊದಲ Ioniq 5 ಮಾದರಿಯನ್ನು 10 ಕೋಟಿಯ ವಾಹನವಾಗಿ ಗ್ರಾಹಕರಿಗೆ ಹಸ್ತಾಂತರಿಸಿದೆ. ನಮ್ಮ ಜಾಗತಿಕ ವಾಹನ ಉತ್ಪಾದನೆಯು 100 ಮಿಲಿಯನ್ (10 ಕೋಟಿ) ಗಡಿ ದಾಟಿರುವುದು ಗಮನಾರ್ಹ. ಇದು ಗ್ರಾಹಕರ ಬೆಂಬಲದಿಂದ ಮಾತ್ರ ಸಾಧ್ಯವಾಗಿದೆ. ಪ್ರಪಂಚಾದ್ಯಂತದ ನಮ್ಮ ಗ್ರಾಹಕರಿಗೆ ಧನ್ಯವಾದಗಳು. ಸವಾಲುಗಳನ್ನು ಧೈರ್ಯದಿಂದ ಎದುರಿಸುವುದು ಮತ್ತು ಸೃಜನಶೀಲತೆಯನ್ನು ಉಳಿಸಿಕೊಳ್ಳುವುದೇ ನಮ್ಮ ಬೆಳವಣಿಗೆಗೆ ಕಾರಣ ಎಂದು ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಜೆಹೂನ್ ಚಾಂಗ್ ಹೇಳಿದ್ದಾರೆ.