ಸಿಯೋಲ್, ದಕ್ಷಿಣ ಕೊರಿಯಾ: ಹ್ಯುಂಡೈ ಮೋಟಾರ್ ತನ್ನ ಮುಂಬರುವ ಆಲ್-ಎಲೆಕ್ಟ್ರಿಕ್ ಅಯೋನಿಕ್ 9 ಸ್ಪೋರ್ಟ್ಸ್ ಯುಟಿಲಿಟಿ ವಾಹನದ ಟೀಸರ್ ಅನ್ನು ಬುಧವಾರ ಅನಾವರಣಗೊಳಿಸಿದೆ. ಅದರ ನಯವಾದ ಬಾಹ್ಯ ವಿನ್ಯಾಸ ವಿಶ್ವಾದ್ಯಂತ ಗ್ರಾಹಕರ ಗಮನ ಸೆಳೆಯುತ್ತಿದೆ.
ಎಲೆಕ್ಟ್ರಿಕ್ SUV ಟೀಸರ್ ಹೊಸ ಮಾದರಿಯ ಕಾರಿನ ಎಲ್ಲ ಪೀಚರ್ಸ್ಗಳನ್ನು ಪ್ರಸ್ತುತಪಡಿಸಿದೆ. ಹುಂಡೈ Ioniq 9 ಹೊಳೆಯುವ ಹೊರಭಾಗಗಳು ಮತ್ತು ಅತ್ಯುತ್ತಮ ಒಳಾಂಗಣ ಹೊಸ ಅನುಭೂತಿ ನೀಡುವಂತಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
Ioniq 9 ಹುಂಡೈ ಮೋಟರ್‌ನ Ioniq ಶ್ರೇಣಿಯಲ್ಲಿನ ಅತಿ ದೊಡ್ಡ ಮಾದರಿಯನ್ನು ಸಂಕೇತಿಸುತ್ತದೆ ಮತ್ತು ದೊಡ್ಡ ಎಲೆಕ್ಟ್ರಿಕ್ SUV ಮಾದರಿಗಳ ಕ್ಷೇತ್ರದಲ್ಲಿ ಕಂಪನಿಯ ಹೊಸ ಸಾಹಸ ಇದಾಗಿದೆ. ಮುಂದಿನ ತಿಂಗಳು ನಡೆಯಲಿರುವ ಜಾಗತಿಕ ಪ್ರದರ್ಶನ ಸಮಾರಂಭದಲ್ಲಿ Ioniq 9 ನ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಸಂಪೂರ್ಣವಾಗಿ ಅನಾವರಣಗೊಳಿಸಲು ಹುಂಡೈ ಯೋಜಿಸಿದೆ.
100 ಮಿಲಿಯನ್ ಯುನಿಟ್‌ಗಳ ಪ್ರಮುಖ ಮೈಲಿಗಲ್ಲು ಸ್ಥಾಪಿಸಿದ ಕಂಪನಿ:ಏತನ್ಮಧ್ಯೆ, ಹ್ಯುಂಡೈ ಮೋಟಾರ್ ಜಾಗತಿಕ ಸಂಚಿತ ಉತ್ಪಾದನೆಯಲ್ಲಿ 100 ಮಿಲಿಯನ್ ಯುನಿಟ್‌ಗಳ ಪ್ರಮುಖ ಮೈಲಿಗಲ್ಲು ತಲುಪಿದೆ, ಕಂಪನಿಯ ಸ್ಥಾಪನೆಯ ನಂತರದ 57 ವರ್ಷಗಳಲ್ಲಿ ಈ ಸಾಧನೆ ಮೂಡಿ ಬಂದಿದೆ. ತನ್ನ 100ನೇ ಮಿಲಿಯನ್ ಮತ್ತು Ioniq5ನ ಮೊದಲ ವಾಹನವನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.
ವಿಶ್ವದೆಲ್ಲೆಡೆ ಗ್ರಾಹಕರಿಗೆ ವಂದನೆಗಳನ್ನು ಸಲ್ಲಿಸಿದ ಹುಂಡೈ: ’’100 ಮಿಲಿಯನ್ ವಾಹನಗಳ ಜಾಗತಿಕ ಸಂಚಿತ ಉತ್ಪಾದನೆಯನ್ನು ತಲುಪುವುದು ಒಂದು ಅರ್ಥಪೂರ್ಣ ಮೈಲಿಗಲ್ಲು, ಇದು ಮೊದಲಿನಿಂದಲೂ ಹ್ಯುಂಡೈ ಮೋಟರ್ ಆಯ್ಕೆ ಮಾಡಿ ಮತ್ತು ಬೆಂಬಲಿಸಿದ ವಿಶ್ವಾದ್ಯಂತದ ನಮ್ಮ ಗ್ರಾಹಕರಿಗೆ ಧನ್ಯವಾದಗಳು‘‘ ಎಂದು ಹುಂಡೈ ಮೋಟಾರ್‌ನ ಅಧ್ಯಕ್ಷ ಮತ್ತು ಸಿಇಒ ಚಾಂಗ್ ಜೇ-ಹೂನ್ ಹೇಳಿದ್ದಾರೆ.
1968 ರಲ್ಲಿ ಮೊದಲ ಕಾರ್ಯಾಚರಣೆ ಪ್ರಾರಂಭಿಸಿದ ಉಲ್ಸಾನ್ ಪ್ಲಾಂಟ್, ಕೊರಿಯನ್ ಆಟೋಮೊಬೈಲ್ ಉದ್ಯಮದ ಅಭಿವೃದ್ಧಿಯ ಜನ್ಮಸ್ಥಳವಾಗಿ ಐತಿಹಾಸಿಕ ಮಹತ್ವ ಮತ್ತು ಪ್ರಾಮುಖ್ಯತೆ ಹೊಂದಿದೆ. ಸ್ಥಾವರವು ವಿದ್ಯುದೀಕರಣಕ್ಕೆ ಕೇಂದ್ರೀಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಹುಂಡೈ ಪ್ರಸ್ತುತ ಸೈಟ್‌ನಲ್ಲಿ ಮೀಸಲಾದ ಎಲೆಕ್ಟ್ರಿಕ್ ವೆಹಿಕಲ್ (EV) ಸೌಲಭ್ಯ ಸ್ಥಾಪಿಸಿದೆ. ಹುಂಡೈ ಮೋಟಾರ್ ಜಾಗತಿಕ ವಾಹನ ತಯಾರಕರಲ್ಲಿ ಅತ್ಯಂತ ಪ್ರಮುಖ ಕಂಪನಿಯಾಗಿದ್ದು, ಅದರ ವೇಗದ ಬೆಳವಣಿಗೆ ಎಲ್ಲರಿಗೂ ಮಾದರಿಯಂತಿದೆ.
ಕಂಪನಿಯ ಜಾಗತಿಕ ಹೆಜ್ಜೆ ಗುರುತು: ಟರ್ಕಿ, ಭಾರತ, ಅಮೆರಿಕ ಮತ್ತು ಜೆಕ್ ರಿಪಬ್ಲಿಕ್‌ನಲ್ಲಿ ಉತ್ಪಾದನಾ ಸೌಲಭ್ಯಗಳೊಂದಿಗೆ ವಿಸ್ತರಣೆಯಾಗುತ್ತಾ ಸಾಗಿದೆ. 2013 ರಲ್ಲಿ 50 ಮಿಲಿಯನ್ ಯೂನಿಟ್ ವಾಹನಗಳ ಉತ್ಪಾದನೆ ಮಾಡಿ ಸಾಧನೆ ಮಾಡಿತ್ತು. ಮುಂದಿನ 11 ವರ್ಷಗಳಲ್ಲಿ ಕಂಪನಿ 100 ಮಿಲಿಯನ್ ಯೂನಿಟ್ ಉತ್ಪಾದನೆಯ ಗುರಿ ತಲುಪಿದೆ.
ಇದನ್ನು ಓದಿ:ಎಐ ಚಾಲಿತ ಸರ್ಚ್ ಎಂಜಿನ್ ಅಭಿವೃದ್ಧಿಪಡಿಸುತ್ತಿರುವ ಮೆಟಾ: ವರದಿ
ನ್ಯೂ ಜನರೇಷನ್ ಮಾರುತಿ ಸುಜುಕಿ ಡಿಜೈರ್ ಬಿಡುಗಡೆ ದಿನಾಂಕ ಘೋಷಣೆ: ಇದರ ವೈಶಿಷ್ಟ್ಯ, ವಿನ್ಯಾಸ ಹೇಗಿದೆ ಗೊತ್ತಾ?