WhatsApp Chat Themes:ಮೆಟಾದ ಇನ್‌ಸ್ಟೆಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಅಂದರೆ ವಾಟ್ಸ್‌ಆ್ಯಪ್ ಹೊಸ 'ಚಾಟ್ ಥೀಮ್ಸ್' ಪರಿಚಯಿಸಿದೆ. ಬಳಕೆದಾರರು ವರ್ಣರಂಜಿತ ಬಬಲ್ಸ್ ಮತ್ತು ನ್ಯೂ ವಾಲ್‌ಪೇಪರ್ಸ್ ಜೊತೆ ತಮ್ಮ ಚಾಟ್‌ಗಳನ್ನು ಕಸ್ಟಮೈಸ್ ಮಾಡಬಹುದು. ಹೊಸ ಅಪ್‌ಡೇಟ್‌ನೊಂದಿಗೆ ಬಳಕೆದಾರರು ಈಗ ಪ್ರಿ-ಸೆಟ್ ಥೀಮ್ಸ್ ಪಡೆಯುತ್ತಾರೆ ಮತ್ತು ತಮ್ಮ ನೆಚ್ಚಿನ ಶೈಲಿಯನ್ನು ಆಧರಿಸಿ ಕಲರ್ ಸಹ ಬದಲಾಯಿಸಬಹುದಾಗಿದೆ.
ವಾಟ್ಸ್‌ಆ್ಯಪ್ ನ್ಯೂ ಕಸ್ಟಮೈಸೇಶನ್ ಫೀಚರ್ಸ್:ಈಗ ಚಾಟ್ ಬಬಲ್ಸ್ ಮತ್ತು ಬ್ಯಾಕ್ಗ್ರೌಂಡ್ ಅನ್ನು ತಮ್ಮ ನೆಚ್ಚಿನ ಬಣ್ಣಕ್ಕೆ ಬದಲಾಯಿಸಬಹುದು. ಇದಲ್ಲದೆ ಕಂಪನಿ ಹಲವಾರು ಪ್ರೀ-ಸೆಟ್ ಥೀಮ್‌ಗಳನ್ನು ಪರಿಚಯಿಸಿದೆ. ಇದು ಬ್ಯಾಕ್ಗ್ರೌಂಡ್ ಮತ್ತು ಬಬಲ್ ಕಲರ್ ಹೊಂದಿಸುತ್ತದೆ. ಇಷ್ಟು ಮಾತ್ರವಲ್ಲದೆ ತಮ್ಮದೇ ಆದ ವಿಶಿಷ್ಟ ಬಣ್ಣವನ್ನೂ ಹೊಂದಿಸಬಹುದು.
30 ನ್ಯೂ ವಾಲ್‌ಪೇಪರ್ಸ್ ಪರಿಚಯಿಸಿದ ವಾಟ್ಸ್‌ಆ್ಯಪ್:ಚಾಟ್‌ಗಳನ್ನು ಇನ್ನಷ್ಟು ರೋಮಾಂಚಕವಾಗಿಸಲು ವಾಟ್ಸ್‌ಆ್ಯಪ್ 30 ಹೊಸ ವಾಲ್‌ಪೇಪರ್ಸ್ ಸೇರಿಸಿದೆ. ಬಳಕೆದಾರರು ಈಗ ತಮ್ಮ ಕ್ಯಾಮೆರಾ ರೋಲ್‌ನಿಂದ ಕಸ್ಟಮ್ ಬ್ಯಾಕ್ಗೌಂಡ್ಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡುವ ಆಯ್ಕೆಯನ್ನೂ ಸಹ ಪಡೆಯುತ್ತಾರೆ. ಇದರ ಸಹಾಯದಿಂದ, ಬಳಕೆದಾರರು ಸಂಪೂರ್ಣವಾಗಿ ಕಸ್ಟಮ್ಗೊಳಿಸಿದ ಅನುಭವ ಪಡೆಯಬಹುದು.
ವಾಟ್ಸ್‌ಆ್ಯಪ್ ಕಸ್ಟಮೈಸ್ ಆಪ್ಷನ್:ಈಗ ವಾಟ್ಸ್‌ಆ್ಯಪ್ ಬಳಕೆದಾರರು ಎಲ್ಲಾ ಚಾಟ್‌ಗಳಿಗೆ ಒಂದೇ ಥೀಮ್ ಅನ್ನು ಅನ್ವಯಿಸಬಹುದು ಅಥವಾ ಪ್ರತಿ ಚಾಟ್‌ಗೆ ವಿಭಿನ್ನ ಥೀಮ್‌ಗಳನ್ನು ಜೋಡಿಸಬಹುದು. ಆದರೂ ಈ ಥೀಮ್‌ಗಳು ಬಳಕೆದಾರರಿಗೆ ಮಾತ್ರ ಗೋಚರಿಸುತ್ತವೆ. ನೀವು ಈಗ ನಿಮ್ಮ ವಾಟ್ಸ್‌ಆ್ಯಪ್ ಚಾಟ್‌ಗಳನ್ನು ಖಾಸಗಿಯಾಗಿ ಇರಿಸಿಕೊಳ್ಳುವ ಮೂಲಕ ಹೆಚ್ಚು ಆಕರ್ಷಕವಾಗಿ ಮಾಡಬಹುದು. ಬಳಕೆದಾರರು ಈಗ ತಮ್ಮ ವಾಟ್ಸ್‌ಆ್ಯಪ್ ಚಾನೆಲ್‌ಗಳ ಥೀಮ್‌ಗಳನ್ನು ಸಹ ಬದಲಾಯಿಸಬಹುದು, ಇದು ಇತರ ವ್ಯಕ್ತಿಗೆ ಅವರ ಕಮ್ಯುನಿಕೇಶನಲ್ಲಿ ವಿಭಿನ್ನ ಅನುಭವ ನೀಡುತ್ತದೆ.
ಚಾಟ್ ಥೀಮ್ಸ್ ಬಳಕೆ ಹೇಗೆ?:ಡೀಫಾಲ್ಟ್ ಚಾಟ್ ಥೀಮ್ ಅಪ್ಲೈ ಮಾಡಲು, ‘Settings’ಗೆ ಹೋಗಿ 'Chats' ಆಯ್ಕೆ ಮಾಡಿ. ನಂತರ ‘Default chat theme’ ಆಯ್ಕೆ ಮಾಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಆಯ್ಕೆಯ ಥೀಮ್ ಅನ್ನು ನೀವು ಅಪ್ಲೈ ಮಾಡಬಹುದು. ನೀವು iOSನಲ್ಲಿ ಸ್ಕ್ರೀನ್ ಮೇಲ್ಭಾಗದಲ್ಲಿರುವ Chat ಅನ್ನು ಟ್ಯಾಪ್ ಮಾಡುವ ಮೂಲಕ ಇದನ್ನು ಕಸ್ಟಮೈಸ್ ಮಾಡಬಹುದು. ಆದರೂ ನೀವು ಆ್ಯಂಡ್ರಾಯ್ಡ್ ಗ್ರಾಹಕರಾಗಿದ್ರೆ, ಬಲಭಾಗದಲ್ಲಿರುವ ತ್ರೀ-ಡಾಟ್ ಮೆನುವನ್ನು ಕ್ಲಿಕ್ ಮಾಡಿ ಮತ್ತು ‘ಥೀಮ್’ ಆಯ್ಕೆ ಮಾಡಬಹುದು. ಇಲ್ಲಿ ನೀವು ಈಗ ಈ ಎಲ್ಲಾ ಹೊಸ ಥೀಮ್‌ಗಳು ಮತ್ತು ಕಲರ್ಸ್ ಅನ್ನು ಕಾಣುವಿರಿ.
ವಾಟ್ಸ್‌ಆ್ಯಪ್ ಜಾಗತಿಕವಾಗಿ ಹೊಸ ಚಾಟ್ ಥೀಮ್‌ಗಳು ಮತ್ತು ವಾಲ್‌ಪೇಪರ್‌ಗಳನ್ನು ಹೊರತರಲು ಪ್ರಾರಂಭಿಸಿದೆ. ನೀವು ಈ ಹೊಸ ವೈಶಿಷ್ಟ್ಯಗಳನ್ನು ಇನ್ನೂ ಸ್ವೀಕರಿಸದಿದ್ದರೆ ಮುಂದಿನ ಕೆಲವು ವಾರಗಳಲ್ಲಿ ಅಪ್ಡೇಟ್ ಪಡೆಯಬಹುದು.
ಇದನ್ನೂ ಓದಿ:ಐಫೋನ್‌ಪ್ರಿಯರಿಗೆ ಸಿಹಿ ಸುದ್ದಿ ನೀಡಿದ ಟೀಮ್ ಕುಕ್: ಏನದು ಗೊತ್ತಾ?