ಕರ್ನಾಟಕ

karnataka

ಹಬ್ಬದ ಸೀಸನ್​ನಲ್ಲಿ ಇಯರ್​ಬಡ್ಸ್​ ಖರೀದಿಸುತ್ತಿದ್ದೀರಾ? ಹಾಗಾದ್ರೆ ಈ ಅಂಶಗಳ ಮೇಲೆ ಗಮನ ಹರಿಸಿ - How to Choose Best Earbuds

By ETV Bharat Tech Team

Published : 5 hours ago

How to Choose Best Earbuds: ಹಬ್ಬದ ಋತುವಿನಲ್ಲಿ ಗ್ಯಾಜೆಟ್‌ಗಳ ಮೇಲೆ ಆಫರ್‌ಗಳ ಮೇಲೆ ಆಫರ್​ಗಳಿವೆ. ಈ ಹಬ್ಬದ ಮಾರಾಟದಲ್ಲಿ ನೀವು ಉತ್ತಮ ಇಯರ್‌ಬಡ್‌ಗಳನ್ನು ಖರೀದಿಸಲು ಬಯಸುತ್ತಿದ್ರೆ ಕೆಲವೊಂದು ಅಂಶಗಳನ್ನು ಗಮನದಲ್ಲಿಡಬೇಕು..

WHAT MAKES GOOD EARBUDS  HOW TO CHOOSE GOOD EARPHONES  WIRELESS EARBUDS BUYING GUIDE
ಇಯರ್​ಬಡ್ಸ್ (ETV Bharat)

How to Choose Best Earbuds: ಹಬ್ಬಗಳು ಶುರುವಾಗುತ್ತಿದ್ದಂತೆ ಆಫರ್‌ಗಳ ಮೇಲೆ ಆಫರ್‌ಗಳು ಬರುತ್ತಿವೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಹಲವು ಕಂಪನಿಗಳು ಈಗಾಗಲೇ ಬಂಪರ್ ಆಫರ್‌ಗಳನ್ನು ಘೋಷಿಸಿವೆ. ಈ ಹಬ್ಬದ ಮಾರಾಟ ಯಾವಾಗ ಪ್ರಾರಂಭವಾಗುತ್ತದೆ, ಯಾವ ಗ್ಯಾಜೆಟ್‌ಗಳನ್ನು ಖರೀದಿಸಬೇಕು ಎಂದು ಹಲವರು ಕಾತರದಿಂದ ಕಾಯುತ್ತಿದ್ದಾರೆ. ಈ ಹಬ್ಬದ ಆಫರ್‌ನಲ್ಲಿ ಒಳ್ಳೆಯ ಇಯರ್ ಬಡ್ಸ್​ ಖರೀದಿಸಲು ನೋಡುವವರೂ ಇದ್ದಾರೆ. ಕಡಿಮೆ ಬೆಲೆಗೆ ಇಯರ್ ಬಡ್ಸ್ ಖರೀದಿಸಿ ಪೇಚಿಗೆ ಸಿಲುಕಿಕೊಳ್ಳುವರು ಸಹ ಬಹಳ ಜನರಿರುತ್ತಾರೆ. ಹೀಗಾಗಿ ಇಯರ್​ಬಡ್​ಗಳನ್ನು ಖರೀದಿಸುವವರು ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅವುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ..

ಇಯರ್‌ಬಡ್‌ಗಳನ್ನು ಖರೀದಿಸುವಾಗ ಪರಿಗಣಿಸಬೇಕಾದ ಅಂಶಗಳು:

  • ನೆಕ್ ಬ್ಯಾಂಡ್, TWS ಮತ್ತು ವೈರ್‌ನಂತಹ ವಿವಿಧ ರೀತಿಯ ಇಯರ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.
  • ಅವುಗಳಲ್ಲಿ ಬ್ಲೂಟೂತ್ ಆಧಾರಿತ ಇಯರ್‌ಬಡ್‌ಗಳಿಗೆ ಉತ್ತಮ ಕ್ರೇಜ್ ಇದೆ.
  • ಇವುಗಳ ಬೆಲೆ ರೂ.900ರಿಂದ ಆರಂಭವಾಗಿರುತ್ತದೆ.
  • ಅಲ್ಲದೆ ಹೆಚ್ಚು ಫೀಚರ್​ಗಳು ಕಡಿಮೆ ಬೆಲೆಗೆ ಬರುತ್ತಿವೆ ಎಂದು ತಿಳಿದು ಖರೀದಿಸಿದರೆ ಬಳಕೆಯಲ್ಲಿ ತೊಂದರೆ ಎದುರಿಸಬೇಕಾಗುತ್ತದೆ.
  • ಅದಕ್ಕಾಗಿಯೇ ಇಯರ್ ಬಡ್ಸ್ ಖರೀದಿಸುವ ಮೊದಲು, ನೀವು ನಾಯ್ಸ್​ ಕ್ಯಾನ್ಸಲೇಷನ್​, ಬ್ಯಾಟರಿ ಲೈಫ್​, ಬ್ಲೂಟೂತ್ ಕನೆಕ್ಟಿವಿಟಿ, ಸೌಂಡ್​ ಕ್ವಾಲಿಟಿ ಸೇರಿದಂತೆ ಮುಂತಾದ ವಿಷಯಗಳನ್ನು ಪರಿಶೀಲಿಸಬೇಕು.

ಬ್ಯಾಟರಿ:

  • ಬ್ಲೂಟೂತ್ ಇಯರ್‌ಬಡ್‌ಗಳನ್ನು ಬಳಸುವವರಿಗೆ ದೀರ್ಘ ಬ್ಯಾಟರಿ ಬಾಳಿಕೆ ಮುಖ್ಯವಾಗಿದೆ.
  • ಟ್ರೂ ವೈರ್‌ಲೆಸ್‌ನ ಸಂದರ್ಭದಲ್ಲಿ, ಕೇಸ್, ಇಯರ್‌ಬಡ್‌ಗಳು ಪ್ರತ್ಯೇಕ ಬ್ಯಾಟರಿಗಳನ್ನು ಹೊಂದಿವೆ.
  • ಎರಡನ್ನೂ ಸಂಯೋಜಿಸಿದ ಕನಿಷ್ಠ 35 ಗಂಟೆಗಳ ಪ್ಲೇ ಬ್ಯಾಕಪ್ ಹೊಂದಿರುವ ಇಯರ್‌ಬಡ್‌ಗಳನ್ನು ಆಯ್ಕೆ ಮಾಡುವುದು ಉತ್ತಮ.
  • ಇಯರ್‌ಬಡ್‌ಗಳು ಸಾಮಾನ್ಯವಾಗಿ ಒಂದು ಅಥವಾ ಎರಡು ಗಂಟೆಗಳ ಬ್ಯಾಟರಿ ಬ್ಯಾಕಪ್‌ನೊಂದಿಗೆ ಕಂಪನಿಗಳು ಹೇಳಿಕೊಳ್ಳುವುದಕ್ಕಿಂತ ಕಡಿಮೆ ಬರುತ್ತವೆ ಎಂಬುದನ್ನು ನೆನಪಿನಲ್ಲಿಡಬೇಕು.

ಲೇಟೆನ್ಸಿ:

  • ಲೇಟೆನ್ಸಿ ಎನ್ನುವುದು ಸರಿಯಾದ ಸಮಯದಲ್ಲಿ ಆಡಿಯೋ ಮತ್ತು ವಿಡಿಯೋದ ಸಿಂಕ್ರೊನೈಸೇಶನ್ ಆಗಿದೆ.
  • ವಿಶೇಷವಾಗಿ ಆಟಗಳನ್ನು ಆಡುವವರು ಕಡಿಮೆ ಲೇಟೆನ್ಸಿ ಇರುವ ಇಯರ್‌ಬಡ್‌ಗಳನ್ನು ಆಯ್ಕೆ ಮಾಡುವುದು ಉತ್ತಮ.
  • ಇಯರ್‌ಫೋನ್‌ಗಳಲ್ಲಿ ಗರಿಷ್ಠ ಲೇಟೆನ್ಸಿ 100 ಮಿಲಿಸೆಕೆಂಡ್‌ಗಳು, ಸರಾಸರಿ 50-100 ಮಿಲಿಸೆಕೆಂಡ್‌ಗಳು, ಕಡಿಮೆ 20-40 ಮಿಲಿಸೆಕೆಂಡ್‌ಗಳು ಇರುತ್ತವೆ.
  • 20 ಮಿಲಿಸೆಕೆಂಡ್‌ಗಳಿಗಿಂತ ಕಡಿಮೆ ಇದ್ದರೆ ಉತ್ತಮ ಇಯರ್‌ಫೋನ್‌ಗಳು ಎಂದು ಪರಿಗಣಿಸಬಹುದು.

ಬ್ಲೂಟೂತ್:

  • ಬಹುತೇಕ ಎಲ್ಲಾ ಇಯರ್‌ಬಡ್‌ಗಳು ಈಗ ಬ್ಲೂಟೂತ್ 5.0+ ಕನೆಕ್ಟಿವಿಟಿಯೊಂದಿಗೆ ಬರುತ್ತವೆ.
  • 5.3 ಮತ್ತು 5.4 ಇತ್ತೀಚಿನ ಆವೃತ್ತಿಗಳಾಗಿವೆ. ಸಾಧ್ಯವಾದಷ್ಟು ಬ್ಲೂಟೂತ್ ಇಯರ್‌ಬಡ್‌ಗಳ ಇತ್ತೀಚಿನ ಆವೃತ್ತಿಯನ್ನು ಆರಿಸಿಕೊಳ್ಳುವುದು ಮುಖ್ಯ.
  • ಏಕೆಂದರೆ ಅವುಗಳು ಕಡಿಮೆ ಲೇಟೆನ್ಸಿ, ಉತ್ತಮ ಆಡಿಯೋ ಗುಣಮಟ್ಟ ಮತ್ತು ಶ್ರೇಣಿಯೊಂದಿಗೆ ಮಾರುಕಟ್ಟೆಯಲ್ಲಿ ಬರುತ್ತಿವೆ.

ನಾಯ್ಸ್​ ಕ್ಯಾನ್ಸಲೇಷನ್:

  • TWS ಇಯರ್‌ಬಡ್‌ಗಳನ್ನು ಖರೀದಿಸುವಾಗ ನಾಯ್ಸ್​ ಕ್ಯಾನ್ಸಲೇಷನ್ ಬಗ್ಗೆ ಗಮನಹರಿಸಬೇಕು.
  • ಇವುಗಳಲ್ಲಿ ಆ್ಯಕ್ಟಿವ್​ ನಾಯ್ಸ್​ ಕ್ಯಾನ್ಸಲೇಷನ್ ಒಂದಾಗಿದೆ.
  • ಎರಡನೆಯದು ಪ್ಯಾಸಿವ್​ ನಾಯ್ಸ್​ ಕ್ಯಾನ್ಸಲೇಷನ್.
  • ಇದನ್ನು ಎನ್ವಿರಾನ್ಮೆಂಟ್​ ನಾಯ್ಸ್​ ಕ್ಯಾನ್ಸಲೇಷನ್ ಎಂದೂ ಕರೆಯುತ್ತಾರೆ.

ANC:

  • ANC ಸುಧಾರಿತ ತಂತ್ರಜ್ಞಾನವಾಗಿದೆ.
  • ಇದು ಅಲ್ಗಾರಿದಮ್‌ಗಳು ಮತ್ತು ಮೈಕ್ರೊಫೋನ್‌ಗಳ ಮೂಲಕ ಹೊರಗಿನಿಂದ ಬರುವ ಶಬ್ಧಗಳನ್ನು ವಿಶ್ಲೇಷಿಸುತ್ತದೆ. ಹೊರಗಿನ ಶಬ್ಧಗಳನ್ನು ನಿರ್ಬಂಧಿಸಲು ಆಂಟಿ-ನಾಯ್ಸ್​ ಸೌಂಡ್​ ತರಂಗಗಳನ್ನು ಕಳುಹಿಸುತ್ತದೆ.
  • ಈ ಕಾರಣದಿಂದಾಗಿ ನೀವು ಉತ್ತಮ ANC ಜೊತೆಗೆ ಇಯರ್‌ಬಡ್‌ಗಳನ್ನು ಧರಿಸಿದರೆ ನೀವು ಬಾಹ್ಯ ಶಬ್ಧವಿಲ್ಲದೆ ಸಂಗೀತವನ್ನು ಆನಂದಿಸಬಹುದು.
  • ENC:
  • ಎನ್ವಿರಾನ್ಮೆಂಟ್​ ನಾಯ್ಸ್​ ಕ್ಯಾನ್ಸಲೇಷನ್ ಎಂದ್ರೆ ನೀವು ಕೆಫೆಯಲ್ಲಿದ್ದೀರಿ ಎಂದು ಭಾವಿಸೋಣ.
  • ಅದೇ ಸಮಯದಲ್ಲಿ ಒಂದು ಪ್ರಮುಖ ಕರೆ ಬರುತ್ತದೆ. ಆಗ ಕೆಫೆಯು ಶಬ್ಧದಿಂದ ಕೂಡಿರುತ್ತದೆ ಎಂದು ತಿಳಿದುಕೊಳ್ಳೋಣ.
  • ಅಂತಹ ಸಮಯದಲ್ಲಿ, ನೀವು ಉತ್ತಮವಾದ ENC ಇಯರ್‌ಬಡ್‌ಗಳೊಂದಿಗೆ ಮಾತನಾಡಿದರೆ, ಈ ವೈಶಿಷ್ಟ್ಯವು ಇತರ ವ್ಯಕ್ತಿಗೆ ನಿಮ್ಮ ಸುತ್ತಲಿನ ಶಬ್ಧವನ್ನು ಕೇಳದಂತೆ ತಡೆಯುತ್ತದೆ.
  • ಅಂತಹ ಸಮಯದಲ್ಲಿ ಇದು ಹಿನ್ನೆಲೆ ಶಬ್ಧವನ್ನು ಕಡಿಮೆ ಮಾಡಲು ಮತ್ತು ಕರೆ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
  • ಈ ವೈಶಿಷ್ಟ್ಯವು ವಿನ್ಯಾಸವನ್ನು ಅವಲಂಬಿಸಿರುತ್ತದೆ.

ಇಯರ್‌ಬಡ್‌ಗಳನ್ನು ಖರೀದಿಸುವಾಗ ಎರಡನ್ನೂ ಹೊಂದಿರುವ ಹೈಬ್ರಿಡ್ ನಾಯ್ಸ್​ ಕ್ಯಾನ್ಸಲೇಷನ್​ ಇಯರ್‌ಬಡ್‌ಗಳನ್ನು ಖರೀದಿಸುವುದು ಉತ್ತಮ.

ಟಚ್​ ಕಂಟ್ರೋಲ್​ ವೈಶಿಷ್ಟ್ಯಗಳು:

  • TWS ಬಡ್‌ಗಳನ್ನು ತೆಗೆದುಕೊಂಡರೆ ಟಚ್​ ಕಂಟ್ರೋಲ್​ ವೈಶಿಷ್ಟ್ಯಗಳು ಎಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು.
  • ಅದಕ್ಕಾಗಿ ನೀವು ವಿಮರ್ಶೆಗಳನ್ನು ನೋಡಬೇಕು. ಐಪಿ ರೇಟಿಂಗ್ ಇದೆಯೇ ಅಥವಾ ಇಲ್ಲವೋ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕು.
  • ಗ್ರಾಹಕ ಸೇವೆ ಮತ್ತು ಬ್ರ್ಯಾಂಡ್‌ನ ವಾರಂಟಿಯನ್ನು ನೋಡಿದ ನಂತರವೇ ಖರೀದಿಸುವುದು ಉತ್ತಮ.

ಓದಿ:ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌: ₹7 ಸಾವಿರಕ್ಕಿಂತ ಕಡಿಮೆ ಬೆಲೆಗೆ POCO 5G ಫೋನ್‌ - Discount On POCO Smartphones

ABOUT THE AUTHOR

...view details