Honda And Nissan Partnership:ಜಪಾನಿನ ಎರಡು ಕಾರು ಕಂಪನಿಗಳಾದ ಹೋಂಡಾ ಮತ್ತು ನಿಸ್ಸಾನ್ ಶೀಘ್ರದಲ್ಲೇ ಒಂದೇ ಕಂಪನಿಯನ್ನಾಗಿ ವಿಲೀನಗೊಳ್ಳಲಿವೆ ಎಂದು ವರದಿಯಾಗಿದೆ. ಹೋಂಡಾದ ಹೋಂಡಾ ಸಿಟಿ ಮತ್ತು ಹೋಂಡಾ ಅಮೇಜ್ ಭಾರತದಲ್ಲಿ ಅತ್ಯಂತ ಜನಪ್ರಿಯ ಕಾರುಗಳಾಗಿದ್ದು, ನಿಸ್ಸಾನ್ ಮೋಟಾರ್ಸ್‌ನ ನಿಸ್ಸಾನ್ ಮ್ಯಾಗ್ನೈಟ್ ಅತ್ಯಂತ ಕೈಗೆಟುಕುವ ಎಸ್‌ಯುವಿಗಳಲ್ಲಿ ಒಂದಾಗಿದೆ.
ಸದ್ಯ ಇಡೀ ಪ್ರಪಂಚದಲ್ಲಿ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ದೊಡ್ಡ ಬದಲಾವಣೆಗಳು ಕಂಡುಬರುತ್ತಿವೆ. ಒಂದು ತಂತ್ರಜ್ಞಾನ, ಅಲ್ಲಿ ಎಐ ಅಭಿವೃದ್ಧಿ ನಡೆಯುತ್ತಿದೆ. ಎರಡನೆಯದು ಆಟೋಮೊಬೈಲ್, ಅಲ್ಲಿ ಇಂಧನ ಪರಿವರ್ತನೆಯ ಕೆಲಸ ಮಾಡಲಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅತಿ ಶೀಘ್ರದಲ್ಲೇ ಎರಡು ಜಪಾನಿನ ಕಾರು ಕಂಪನಿಗಳಾದ ಹೋಂಡಾ ಮೋಟಾರ್ ಮತ್ತು ನಿಸ್ಸಾನ್ ಮೋಟಾರ್‌ನ ವಾಹನಗಳು ಸಹ ಒಂದೇ ಕಂಪನಿಯ ಅಡಿಯಲ್ಲಿ ಉತ್ಪಾದನೆಯಾಗಲಿವೆ. ಇದಕ್ಕಾಗಿ ಎರಡೂ ಕಂಪನಿಗಳು ಭರ್ಜರಿ ಯೋಜನೆ ರೂಪಿಸಿವೆ.
ನಿಸ್ಸಾನ್ ಮೋಟಾರ್ ಮತ್ತು ಹೋಂಡಾ ಮೋಟಾರ್ ಈಗ ವಿಲೀನದ ಬಗ್ಗೆ ಪರಸ್ಪರ ಮಾತುಕತೆ ನಡೆಸುತ್ತಿವೆ. ಜಪಾನ್‌ನ ನಿಕ್ಕಿಯ ವರದಿ ಪ್ರಕಾರ, ಜಾಗತಿಕ ಮಟ್ಟದಲ್ಲಿ ವಾಹನ ಉದ್ಯಮದಲ್ಲಿ ಬರುತ್ತಿರುವ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಎರಡೂ ಕಂಪನಿಗಳು ಪರಸ್ಪರ ವಿಲೀನಗೊಳ್ಳಲು ಯೋಜಿಸಿವೆ. ಇದರ ಪರಿಣಾಮ ನಿಸ್ಸಾನ್ ಮೋಟಾರ್ ಮತ್ತು ರೆನಾಲ್ಟ್ ಷೇರುಗಳ ಮೇಲೂ ಕಂಡುಬಂದಿದೆ.
ಎರಡೂ ಕಾರುಗಳನ್ನು ತಯಾರಿಸುತ್ತಿರುವ ಒಂದೇ ಕಂಪನಿ:ಮಾಹಿತಿ ಪ್ರಕಾರ, ಹೋಂಡಾ ಮತ್ತು ನಿಸ್ಸಾನ್ ಎರಡೂ ಒಂದೇ ಹೋಲ್ಡಿಂಗ್ ಕಂಪನಿ ಅಡಿಯಲ್ಲಿ ಕೆಲಸ ಮಾಡಬಹುದು. ಇದರ ನಂತರ, ಎರಡೂ ಕಾರುಗಳನ್ನು ಈ ಹೋಲ್ಡಿಂಗ್ ಕಂಪನಿ ಅಡಿಯಲ್ಲಿ ಉತ್ಪಾದಿಸಲಾಗುತ್ತದೆ. ಮಿತ್ಸುಬಿಷಿ ಮೋಟಾರ್ಸ್ ಅನ್ನು ಸಹ ಅದರಲ್ಲಿ ಸೇರಿಸುವ ಯೋಜನೆ ಇದೆ. ಈ ಕಂಪನಿಯು ಜನಪ್ರಿಯ ಪಜೆರೋ ಕಾರನ್ನು ತಯಾರಿಸುತ್ತದೆ. ನಿಸ್ಸಾನ್-ಹೋಂಡಾ-ಮಿತ್ಸುಬಿಷಿ ವಿಲೀನದ ನಂತರ, ಇದು ವಿಶ್ವದ ಅತಿದೊಡ್ಡ ಕಾರು ಕಂಪನಿಗಳಲ್ಲಿ ಒಂದಾಗಲಿದೆ. ಈ ವಿಲೀನದಲ್ಲಿ ಗರಿಷ್ಠ ಪಾಲನ್ನು ನಿಸ್ಸಾನ್ ಮೋಟಾರ್‌ನ ಸುಮಾರ್ಸ್ ಶೇ. 24ರಷ್ಟು ಆಗಿರಬಹುದು. ನಿಸ್ಸಾನ್ ಈ ಹಿಂದೆ ಫ್ರಾನ್ಸ್‌ನ ರೆನಾಲ್ಟ್ ಅನ್ನು ತನ್ನೊಂದಿಗೆ ವಿಲೀನಗೊಳಿಸಿದೆ.