ಹೈದರಾಬಾದ್: ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ - ಎಚ್‌ಸಿಐಎಲ್ ಬುಧವಾರ ಅಮೇಜ್‌ನ ಬಹು ನಿರೀಕ್ಷಿತ ಫೇಸ್‌ಲಿಫ್ಟ್ ಲಾಂಚ್ ಮಾಡಿದೆ. 7,99,990 ರೂ(ಎಕ್ಸ್ ಶೋ ರೂಂ, ದೆಹಲಿ)ಗಳ ಆರಂಭಿಕ ಬೆಲೆಯಲ್ಲಿ ಪರಿಚಯಿಸಿದೆ. ಹೊಸ ಸ್ಟೈಲಿಂಗ್ ಜೊತೆಗೆ ಸೆಗ್ಮೆಂಟ್ - ಮೊದಲ ADAS ಸೂಟ್ ಸೇರಿದಂತೆ ಇನ್ನೂ ಅನೇಕ ವೈಶಿಷ್ಟ್ಯಗಳೊಂದಿಗೆ ಮೂರನೇ ತಲೆಮಾರಿನ ಅಮೇಜ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸುಜುಕಿ ಡಿಜೈರ್‌ಗೆ ಪ್ರತಿಸ್ಪರ್ಧಿಯಾಗಿ ಹೊಸ ಅಮೇಜ್ ಬಿಡುಗಡೆಗೊಂಡಿದೆ.
2025 ಹೋಂಡಾ ಅಮೇಜ್ ವಿನ್ಯಾಸ ಹೇಗಿದೆ ಗೊತ್ತಾ? : ಈ ಸೆಡಾನ್‌ನ ಕಾರ್ನ ಅತ್ಯಂತ ಗಮನಾರ್ಹ ವೈಶಿಷ್ಟ್ಯವೆಂದರೆ ನವೀಕರಿಸಿದ ನೂತನ ವಿನ್ಯಾಸವಾಗಿದೆ. ಮುಂಭಾಗದ ಗ್ರಿಲ್ ಜೇನುಗೂಡು ವಿನ್ಯಾಸ ಹೊಂದಿದ್ದರೆ, ಹೋಂಡಾ ಎಲಿವೇಟ್‌ನಂತೆಯೇ ಕೆಳಭಾಗದಲ್ಲಿ ಬೈ ಪ್ರೊಜೆಕ್ಟರ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿಯಾ 15-ಇಂಚಿನ ಮಿಶ್ರಲೋಹದ ಚಕ್ರಗಳು ಈ ಬಾರಿ ಗಮನ ಸೆಳೆಯುವಂತಿದೆ.
ಗಮನಾರ್ಹ ವಿಚಾರ ಎಂದರೆ LED ಟೈಲ್‌ಲೈಟ್‌ಗಳು ಇತ್ತೀಚಿನ ಪೀಳಿಗೆಯ ಹೋಂಡಾ ಸಿಟಿಯಿಂದ ಇವು ಸ್ಫೂರ್ತಿ ಪಡೆದಿವೆ. ಇದರ ಹೊರತಾಗಿ ಕಾಂಪ್ಯಾಕ್ಟ್ ಸೆಡಾನ್ ನಾಲ್ಕು ಸಂವೇದಕಗಳೊಂದಿಗೆ ಹಿಂಬದಿಯ ಬಂಪರ್ ಮತ್ತು ಬೂಟ್ ಲಿಡ್ ಅಡಿ ರಿಯರ್ ವ್ಯೂ ಕ್ಯಾಮೆರಾ ಅಳವಡಿಸಲಾಗಿದೆ. ಸುಮಾರು 416 ಲೀಟರ್ ಬೂಟ್ ಸ್ಪೇಸ್ ಅನ್ನು ಕೂಡಾ ಹೊಂದಿದೆ.
ಹೇಗಿದೆ ಗೊತ್ತಾ ಹೋಂಡಾ ಅಮೇಜ್ 2025ರ ಇಂಟೀರಿಯರ್:ಕಾಂಪ್ಯಾಕ್ಟ್ ಸೆಡಾನ್ ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸ ಹೊಂದಿದೆ. ಇದು 8-ಇಂಚಿನ ಹೊಸ ಫ್ಲೋಟಿಂಗ್ ಟಚ್ ಸ್ಕ್ರೀನ್, HVAC ನಿಯಂತ್ರಣಗಳು ಮತ್ತು ಎಲಿವೇಟ್‌ನಂತೆಯೇ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕೂಡಾ ಹೊಂದಿದೆ. ಈ ಸೇರ್ಪಡೆಗಳ ಜೊತೆಗೆ ಹೊಸ ಅಮೇಜ್ ವೈರ್‌ಲೆಸ್ ಚಾರ್ಜರ್ ಮತ್ತು ಹಿಂಭಾಗದ ದ್ವಾರಗಳೊಂದಿಗೆ ಪರಿಚಯಿಲಾಗಿದೆ.
2025ರ ಹೋಂಡಾ ಅಮೇಜ್ನಲ್ಲಿ ಸುರಕ್ಷತೆಗೆ ಎಷ್ಟು ಆದ್ಯತೆ? ; ಥರ್ಡ್-ಜೆನ್ ಅಮೇಜ್ ವೈರ್‌ಲೆಸ್ ಆಂಡ್ರಿಯೋಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಹೋಂಡಾ ಕನೆಕ್ಟ್, ಹೋಂಡಾ ಸೆನ್ಸಿಂಗ್, ಲೇನ್‌ವಾಚ್ ಕ್ಯಾಮೆರಾ, ಲೆವೆಲ್-2 ಎಡಿಎಎಸ್, 6-ಏರ್‌ಬ್ಯಾಗ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್, ಇಎಸ್‌ಸಿ ಒಳಗೊಂಡಿರುವ ಮನರಂಜನೆ ಮತ್ತು ಸುರಕ್ಷತೆ ವಿಭಾಗದಲ್ಲಿ ಲೋಡ್ ಟನ್ ವೈಶಿಷ್ಟ್ಯ ಸೇರ್ಪಡೆ ಮಾಡಲಾಗಿದೆ. ಕ್ರೂಸ್ ಕಂಟ್ರೋಲ್ ಮತ್ತು ಎಲ್ಲ ಪ್ರಯಾಣಿಕರಿಗೆ 3-ಪಾಯಿಂಟರ್ ಸೀಟ್ ಬೆಲ್ಟ್ ವ್ಯವಸ್ಥೆಯನ್ನು ಹೊಸ ಅಮೇಜ್ನಲ್ಲಿ ಅಳವಡಿಕೆ ಮಾಡಲಾಗಿದೆ.
ಹೇಗಿದೆ ಗೊತ್ತಾ ಹೊಸ ಇಂಜಿನ್:ಫೇಸ್‌ಲಿಫ್ಟ್ - ಫೇಸ್‌ಲಿಫ್ಟ್ ಮಾದರಿಯಲ್ಲಿದ್ದ ಅದೇ ಹಳೆಯ 1.2L NA (ನೈಸರ್ಗಿಕವಾಗಿ ಆಸ್ಪಿರೇಟೆಡ್) i-VTEC ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಎಂಜಿನ್ 5-ಸ್ಪೀಡ್ ಮ್ಯಾನುವಲ್ ಅಥವಾ CVT ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ 90 bhp ಮತ್ತು 110 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಾಮಾನ್ಯ ಚಾಲಿತ ಮಾದರಿಯು 18.65 kmpl ಇಂಧನ ದಕ್ಷತೆಯನ್ನು ನೀಡುತ್ತದೆ. ಇನ್ನು ಆಟೋಮ್ಯಾಟಿಕ್( CVT) ಮಾದರಿಯು 19.46 kmpl ಇಂಧನ ದಕ್ಷತೆ ನೀಡುತ್ತದೆ.
2025 ಹೋಂಡಾ ಅಮೇಜ್ ಬೆಲೆ:ಫೇಸ್‌ಲಿಫ್ಟ್ ಮೂರು ರೂಪಾಂತರಗಳಲ್ಲಿ ಹೊರ ತರಲಾಗಿದೆ. V, VX ಮತ್ತು ZX. ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಹೊಂದಿರುವ V ರೂಪಾಂತರವು 7,99,990 ರೂ (ಎಕ್ಸ್-ಶೋ ರೂಂ, ದೆಹಲಿ) ನ ಆರಂಭಿಕ ಬೆಲೆಯಲ್ಲಿ ಬರುತ್ತದೆ. ಇನ್ನು ಟಾಪ್-ಎಂಡ್ ZX CVT ಮಾದರಿಯು 10,89,900 ರೂ (ಎಕ್ಸ್ ಶೋ ರೂಂ, ದೆಹಲಿ) ಆಗಿದೆ.
ಮಾದರಿಗಳು | ಹಸ್ತ ಚಾಲಿತ | CVT( ಆಟೋಮ್ಯಾಟಿಕ್) |
V | Rs 7,99,990 | Rs 9,19,900 |
VX | Rs 9,09,900 | Rs 9,99,900 |
ZX | Rs 9,69,900 | Rs 10,89,900 |