ಕರ್ನಾಟಕ

karnataka

ಹೈಯರ್ Smart QLED ಸರಣಿಯ ಹೊಸ ಟಿವಿ ಬಿಡುಗಡೆ: ಬೆಲೆ ಎಷ್ಟು ಗೊತ್ತಾ? - HAIER TV

By ETV Bharat Karnataka Team

Published : Apr 17, 2024, 12:41 PM IST

ಹೈಯರ್​ ತನ್ನ Smart QLED ಸರಣಿಯಲ್ಲಿನ ನಾಲ್ಕು ಹೊಸ ಟಿವಿಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Haier launches new TV series in four sizes in India
Haier launches new TV series in four sizes in India

ನವದೆಹಲಿ: ಗೃಹೋಪಯೋಗಿ ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತಯಾರಿಸುವ ಕಂಪನಿ ಹೈಯರ್ ಮಂಗಳವಾರ ತನ್ನ ಇತ್ತೀಚಿನ ಸ್ಮಾರ್ಟ್ ಕ್ಯೂಎಲ್ಇಡಿ ಸರಣಿಯ 'ಎಸ್ 800 ಕ್ಯೂಟಿ' (S800QT) ಟಿವಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ನಾಲ್ಕು ವಿಭಿನ್ನ ಅಳತೆಗಳ ಎಸ್ 800 ಕ್ಯೂಟಿ ಟಿವಿಗಳನ್ನು ಬಿಡುಗಡೆ ಮಾಡಲಾಗಿದೆ.

ಈ ಸರಣಿಯ ಟಿವಿಗಳು 75 ಇಂಚು, 65 ಇಂಚು, 55 ಮತ್ತು 43 ಇಂಚಿನ ಗಾತ್ರಗಳಲ್ಲಿ ಲಭ್ಯವಿವೆ. ಆಫ್​ಲೈನ್ ಮತ್ತು ಆನ್​ಲೈನ್ ಚಾನೆಲ್​ಗಳ ಮೂಲಕ 38,990 ರೂ.ಗಳ ಆರಂಭಿಕ ಬೆಲೆಯಲ್ಲಿ ಇವನ್ನು ನೀವು ಖರೀದಿಸಬಹುದು.

"ತಮ್ಮ ಮನೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ದೃಶ್ಯ ಮತ್ತು ಅತ್ಯಾಕರ್ಷಕ ಸಿನಿಮೀಯ ಅನುಭವವನ್ನು ಬಯಸುವ ಗ್ರಾಹಕರಿಗಾಗಿ ಹೈಯರ್ ಸಾಟಿಯಿಲ್ಲದ ಮನರಂಜನೆಯನ್ನು ನೀಡುತ್ತದೆ" ಎಂದು ಹೈಯರ್ ಇಂಡಿಯಾದ ಅಧ್ಯಕ್ಷ ಎನ್ ಎಸ್ ಸತೀಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೊಸ ಶ್ರೇಣಿಯ ಟಿವಿಗಳು ಡಿಎಲ್ ಜಿ (ಡ್ಯುಯಲ್ ಲೈನ್ ಗೇಟ್) ತಂತ್ರಜ್ಞಾನ ಹೊಂದಿದ್ದು, ಅದ್ಭುತ ವೀಕ್ಷಣೆಯ ಅನುಭವ ನೀಡುತ್ತವೆ ಎಂದು ಕಂಪನಿ ತಿಳಿಸಿದೆ. ಈ ಟಿವಿಗಳು ಕಂಟೆಂಟ್​ ಅನ್ನು ಸ್ವಯಂಚಾಲಿತವಾಗಿ ಗ್ರಹಿಸಿ, ಅದರ ರಿಫ್ರೆಶ್ ರೇಟ್ ಅನ್ನು 120Hz ವರೆಗೆ ಸರಿಹೊಂದಿಸುತ್ತದೆ ಎಂದು ಕಂಪನಿ ಉಲ್ಲೇಖಿಸಿದೆ.

ಇದು ಗೂಗಲ್​ನೊಂದಿಗೆ ಸುಲಭವಾಗಿ ಸಿಂಕ್ ಆಗುತ್ತದೆ. ಹೀಗಾಗಿ ಇದರಲ್ಲಿ ಹಲವಾರು ಆ್ಯಂಡ್ರಾಯ್ಡ್​ ಅಪ್ಲಿಕೇಶನ್​ಗಳು, ಕಂಟೆಂಟ್​ ಮತ್ತು ಸ್ಟ್ರೀಮಿಂಗ್ ಆ್ಯಪ್​ಗಳನ್ನು ಸುಲಭವಾಗಿ ಬಳಸಬಹುದು. ಇದಲ್ಲದೆ, ಟಿವಿ ಸರಣಿಯು ವೇಗದ ಮತ್ತು ಸುಗಮ ಬಳಕೆದಾರ ಇಂಟರ್ಫೇಸ್ ಅನ್ನು ಹೊಂದಿದೆ ಮತ್ತು ಪ್ರತಿ ಫ್ರೇಮ್​ನಲ್ಲಿ ಸ್ಪಷ್ಟವಾದ ಚಿತ್ರವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇದರಲ್ಲಿ ಹ್ಯಾಂಡ್ಸ್-ಫ್ರೀ ವಾಯ್ಸ್ ಕಮಾಂಡ್​ ವೈಶಿಷ್ಟ್ಯವಿದ್ದು, ಇದರ ಮೂಲಕವೇ ಟಿವಿಯನ್ನು ನಿಯಂತ್ರಿಸಬಹುದು. ಈ ವೈಶಿಷ್ಟ್ಯದೊಂದಿಗೆ, ಬಳಕೆದಾರರು ಸುಲಭವಾಗಿ ಸೆಟ್ಟಿಂಗ್​ಗಳನ್ನು ಸರಿ ಹೊಂದಿಸಬಹುದು, ಚಾನೆಲ್​ಗಳನ್ನು ಬದಲಾಯಿಸಬಹುದು, ಕಂಟೆಂಟ್​ ಅನ್ನು ಹುಡುಕಬಹುದು ಮತ್ತು ವಿವಿಧ ಇತರ ಕಾರ್ಯಗಳನ್ನು ಮಾಡಬಹುದು.

ಹೈಯರ್ ನ ಎಸ್ 800 ಕ್ಯೂಟಿ ಕ್ಯೂಎಲ್ಇಡಿ ಸ್ಮಾರ್ಟ್ ಟಿವಿ ಮಾದರಿಗಳು ಬ್ಲೂಟೂತ್ ವಾಯ್ಸ್ ರಿಮೋಟ್ ಕಂಟ್ರೋಲ್ ನೊಂದಿಗೆ ಜೋಡಿಸಲ್ಪಟ್ಟಿವೆ. ಟಿವಿಗಳು ಎರಡು ಯುಎಸ್​ಬಿ ಪೋರ್ಟ್, ನಾಲ್ಕು ಎಚ್​ಡಿಎಂಐ ಪೋರ್ಟ್​ ಮತ್ತು ಹೆಡ್​ಫೋನ್ ಔಟ್ ಪುಟ್ ಅನ್ನು ಒಳಗೊಂಡಿವೆ. ಇವುಗಳಲ್ಲಿ ನೆಟ್ ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಂತಹ ವಿವಿಧ ಒಟಿಟಿ ಪ್ಲಾಟ್​ಫಾರ್ಮ್​ಗಳನ್ನು ಕೂಡ ಬಳಸಬಹುದು.

ಇದನ್ನೂ ಓದಿ : 2 ಸ್ಕ್ರೀನ್​ಗಳ ಆಸೂಸ್ 'Zenbook DUO' ಲ್ಯಾಪ್​ಟಾಪ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ? - Asus Zenbook Duo

ABOUT THE AUTHOR

...view details