Upgraded Tata Punch Launched: ಟಾಟಾ ಮೋಟಾರ್ಸ್ ಭಾರತದ ಪ್ರಸಿದ್ಧ ಅಟೋಮೊಬೈಲ್ ಕಂಪನಿ. ಇತ್ತೀಚೆಗೆ ತನ್ನ ಕರ್ವ್ ಐಸ್ (ICE) ಮಾದರಿಯ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಹೊಸ ಟಾಟಾ ಪಂಚ್ ಅನ್ನು ಸೆಗ್ಮೆಂಟ್ ಲೀಡಿಂಗ್ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೊಳಿಸಿದೆ. 10 ರೂಪಾಂತರಗಳಲ್ಲಿ ಆಕರ್ಷಕ ಲುಕ್ನಲ್ಲಿ ವಿನ್ಯಾಸಗೊಳಿಸಲಾಗಿದೆ. ಟಾಟಾ ಮೋಟಾರ್ಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಗ್ರಾಹಕರು ಈ ಕಾರು ಬುಕ್ ಮಾಡಬಹುದು.
ಟಾಟಾ ಪಂಚ್ ಸನ್‌ರೂಫ್: ಹೊಸ ಟಾಟಾ ಪಂಚ್‌ನಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ. ಅಡ್ವೆಂಚರ್ ರೂಪಾಂತರದಲ್ಲಿ, ಅಟೋ ಕಂಪನಿಯು ಹೊಸ ಪಂಚ್‌ನಲ್ಲಿ ಸನ್‌ರೂಫ್ ಇದೆ. ಆಸಕ್ತಿದಾಯಕ ವಿಷಯವೆಂದರೆ, ಯಾವುದೇ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿಲ್ಲ. ಪವರ್‌ಟ್ರೇನ್ ಮತ್ತು ಬಣ್ಣದ ಆಯ್ಕೆಗಳಲ್ಲಿಯೂ ಬದಲಾವಣೆ ಇಲ್ಲ.
ಟಾಟಾ ಪಂಚ್ ಎಂಜಿನ್: ಹೊಸ ಟಾಟಾ ಪಂಚ್ 1.2-ಲೀಟರ್ ಮೋಟಾರ್‌ನಿಂದ ಪವರ್ ಪಡೆಯುತ್ತದೆ. ಇದು ಮೂರು ಸಿಲಿಂಡರ್, NA ಪೆಟ್ರೋಲ್ ಎಂಜಿನ್ ಹೊಂದಿದೆ. ಐದು-ಸ್ಪೀಡ್ ಮ್ಯಾನುವಲ್, AMT ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಇದಲ್ಲದೆ ಸಿಎನ್‌ಜಿ ಟ್ರಿಮ್‌ನಲ್ಲಿ ಲಭ್ಯವಿದೆ.
ಹೊಸ ಟಾಟಾ ಪಂಚ್ ವೈಶಿಷ್ಟ್ಯಗಳು:
- Android Auto ಜೊತೆಗೆ 10.25-ಇಂಚಿನ ಟಚ್‌ಸ್ಕ್ರೀನ್
- ಇನ್ಫೋಟೈನ್ಮೆಂಟ್ ಸಿಸ್ಟಮ್
- ವೈರ್ಲೆಸ್ ಆ್ಯಪಲ್ ಕಾರ್ಪ್ಲೇ
- ವೈರ್‌ಲೆಸ್ ಫೋನ್ ಚಾರ್ಜರ್
- ರಿಯರ್ ಎಸಿ ವೆಂಟ್ಸ್
- ಆರ್ಮ್‌ರೆಸ್ಟ್‌ನೊಂದಿಗೆ ಗ್ರ್ಯಾಂಡ್ ಕನ್ಸೋಲ್
- ಟೈಪ್-ಸಿ ವೇಗದ USB ಚಾರ್ಜಿಂಗ್ ಪೋರ್ಟ್
- CNG ಟ್ರಿಮ್
- ಟ್ರಾನ್ಸ್ಮಿಷನ್: ಮ್ಯಾನುಯಲ್, AMT ಗೇರ್ ಬಾಕ್ಸ್
ಟಾಟಾ ಪಂಚ್ ಎಂಜಿನ್ ಆಯ್ಕೆಗಳು:
- ಪೆಟ್ರೋಲ್
- ಡೀಸೆಲ್
ಬೆಲೆ: ₹6.12 ಲಕ್ಷ (ಎಕ್ಸ್ ಶೋ ರೂಂ)
ಮಾರುಕಟ್ಟೆಯಲ್ಲಿ ಸ್ಪರ್ಧೆ: ಟಾಟಾ ಪಂಚ್ ತನ್ನ ವಿಭಾಗದಲ್ಲಿ ಸಿಟ್ರೊಯೆನ್ C3 ಮತ್ತು ಹ್ಯುಂಡೈ ಎಕ್ಸೆಟರ್‌ನೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ: ಯೂಟ್ಯೂಬ್ ಬಳಿಕ ಈಗ ಪೋಷಕರ ಕೈಯಲ್ಲಿ ಇನ್ಸ್ಟಾ ಟೀನ್ ಅಕೌಂಟ್ ಕಂಟ್ರೋಲ್ - Insta Teen Accounts