ಬೆಂಗಳೂರು: ಭಾರತದ 10 ಸಾವಿರ ಸ್ಟಾರ್ಟ್‌ಅಪ್‌ಗಳನ್ನು ಕೃತಕ ಬುದ್ಧಿಮತ್ತೆ (ಎಐ)ನಲ್ಲಿ ಬಲಗೊಳಿಸಲು ಟೆಕ್ ದೈತ್ಯ ಗೂಗಲ್ ಮುಂದಾಗಿದೆ. ಇದಕ್ಕಾಗಿ ದೇಶದ ಡೆವಲಪರ್ಗಳಿಗಾಗಿ ಹೊಸ ಭಾಷಾ ಸಾಧನವನ್ನು ಅಭಿವೃದ್ಧಿ ಮಾಡಲಿದ್ದು, ಇದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಸ್ಟಾರ್ಟ್ ಹಬ್ನೊಂದಿಗೆ ಕೆಲಸ ಮಾಡುತ್ತಿರುವುದಾಗಿ ತಿಳಿಸಿದೆ.
ತನ್ನ ‘I/O Connect’ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆ, ಭಾರತೀಯ ಡೆವಲಪರ್‌ಗಳು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಸಶಕ್ತಗೊಳಿಸಲು ಕಂಪನಿಯು ಹಲವಾರು ಪರಿಕರಗಳು, ಕಾರ್ಯಕ್ರಮಗಳು ಮತ್ತು ಪಾಲುದಾರಿಕೆಗಳನ್ನು ಬಿಡುಗಡೆ ಮಾಡಿದೆ.
ಈ ಕುರಿತು ಮಾತನಾಡಿದ ಸಂಸ್ಥೆ, ಈ ಮೂಲಕ ಭಾರತದ ಡೆವಲಪರ್‌ಗಳು ಗೂಗಲ್ನ ಶಕ್ತಿಶಾಲಿ ಎಐ ಮಾದರಿಗಳ ಲಭ್ಯ ಪಡೆಯಲಿದ್ದಾರೆ. ಇದರ ಜೊತೆಗೆ 2 ಮಿಲಿಯನ್ ಟೋಕನ್ ಕಾಂಟೆಕ್ಸ್ಟ್ ವಿಂಡೋದಲ್ಲಿ ಜೆಮಿನಿ 1.5 ಪ್ರೊ ಮತ್ತು ಜೆಮ್ಮಾ 2 ಮತ್ತು ಮುಂದಿನ ಪೀಳಿಗೆಯ ಮುಕ್ತ ಮಾದರಿಗೆ ಪ್ರವೇಶ ಪಡೆಯಲಿದ್ದಾರೆ
ಭಾರತದ ಹೂಡಿಕೆದಾರರನ್ನು ಎಐ ಸಂಪೂರ್ಣ ಸಾಮರ್ಥ್ಯ ಬಳಸಿಕೊಳ್ಳಲು ಬಲಗೊಳಿಸುತ್ತಿದ್ದೇವೆ. ಭಾರತದ ವಿಶಿಷ್ಟತೆಗೆ ಮಾತ್ರ ಪರಿಹಾರ ರಚಿಸದೇ, ಜಾಗತಿಕವಾಗಿ ಎಐ ಭವಿಷ್ಯ ರೂಪಿಸುವುದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಗೂಗಲ್ ಉಪ ನಿರ್ದೇಶಕ ಅಂಬರೀಶ್ ಕೆಂಗೇ ತಿಳಿಸಿದರು.