ಕರ್ನಾಟಕ

karnataka

ETV Bharat / technology

ಲರ್ನ್​ ಅಬೌಟ್: ಹೊಸ ಕಲಿಕಾ ಟೂಲ್​ ಪರಿಚಯಿಸಿದ ಗೂಗಲ್ - NEW AI GOOGLE FEATURE

Google Learn about AI Tool: ಗೂಗಲ್​ ಹೊಸ ಕಲಿಕಾ ಟೂಲ್​ ಅನ್ನು ಪರಿಚಯಿಸಿದೆ. ಇದು ನಿಮಗೆ ಶಿಕ್ಷಕರಂತೆ ಕಾರ್ಯನಿರ್ವಹಿಸುತ್ತದೆ.

GOOGLE LEARN ABOUT AI TOOL  GOOGLE LAUNCHES NEW AI FEATURE  LEARN ABOUT FEATURE
ಗೂಗಲ್ ಲರ್ನ್‌ ಅಬೌಟ್‌ (Google)

By ETV Bharat Tech Team

Published : Nov 14, 2024, 12:08 PM IST

Google Learn about AI Tool: ಗೂಗಲ್​ ಹೊಸ ಎಐ-ಚಾಲಿತ ಫೀಚರ್​ ಪರಿಚಯಿಸಿದೆ. ಇದಕ್ಕೆ 'ಲರ್ನ್​ ಅಬೌಟ್​' ಎಂದು ಹೆಸರಿಡಲಾಗಿದೆ. ಇದು ಪ್ರಾಯೋಗಿಕ ಎಐ ಕಲಿಕಾ ಸಾಧನವಾಗಿದೆ.

ಈ ಫೀಚರ್​ ಗೂಗಲ್​ನ ಎಲ್​ಎಲ್​ಎಮ್​ ಎಐ ಮಾಡೆಲ್​ನಿಂದ ಕಾರ್ಯಾಚರಿಸಲ್ಪಡುತ್ತದೆ. ಹೊಸ ಚಾಟ್‌ಬಾಟ್ ಬಳಕೆದಾರರ ನಿರ್ದಿಷ್ಟ ಕಲಿಕೆಯ ಗುರಿಗಳನ್ನು ಬೆಂಬಲಿಸುವ, ಹೊಂದಾಣಿಕೆಯ ಶೈಕ್ಷಣಿಕ ಸಹಾಯವಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಚಾಟ್​ಜಿಪಿಟಿ ಮತ್ತು ಜೆಮಿನಿಯಂತಹ ಎಐ ಚಾಟ್​ಬಾಟ್​ಗಳಂತೆ ಇದು ಕೆಲಸ ಮಾಡುವುದಿಲ್ಲ. ಲರ್ನ್​ ಅಬೌಟ್​ ಫೀಚರ್​ ಇಂಟರಾಕ್ಟಿವ್​ ಲಿಸ್ಟ್​, ಕ್ವಿಜ್​ ಸಂದರ್ಭದಲ್ಲಿ ಒದಗಿಸುವ ಹೆಚ್ಚುವರಿ ಮಾಹಿತಿಯನ್ನು ಬಳಸಿಕೊಳ್ಳುತ್ತದೆ. ಬಳಿಕ ತಮ್ಮನ್ನು ತಾವೇ ತೊಡಗಿಸಿಕೊಳ್ಳುವ ರೀತಿಯಲ್ಲಿ ಡೇಟಾವನ್ನು ನೀಡುತ್ತದೆ. ಪ್ರತಿ ವಿಷಯದ ಬಗ್ಗೆ ಸಮಗ್ರ ಮಾಹಿತಿ ಒದಗಿಸಲು ಲೇಖನಗಳು ಮತ್ತು ವಿಡಿಯೋಗಳನ್ನೂ ನೀಡುತ್ತದೆ.

ಲರ್ನ್ ಅಬೌಟ್ ವೈಶಿಷ್ಟ್ಯವು ಪ್ರಾಥಮಿಕವಾಗಿ ಶೈಕ್ಷಣಿಕ ಸಂಶೋಧನೆಯನ್ನು ಗುರಿಯಾಗಿಸಿಕೊಂಡಿದೆ. ಅಷ್ಟೇ ಅಲ್ಲ, ವಿಶ್ವಾಸಾರ್ಹ ಶೈಕ್ಷಣಿಕ ವೇದಿಕೆಗಳಿಂದ ಮಾತ್ರ ಇದು ಮಾಹಿತಿ ನೀಡುತ್ತದೆ. ಉದಾಹರಣೆಗೆ, ಗೂಗಲ್ ಜೆಮಿನಿ ಸಾಮಾನ್ಯ ಪ್ರಶ್ನೆಗಳಿಗಾಗಿ ವಿಕಿಪೀಡಿಯಾದಿಂದ ಡೇಟಾ ಸಂಗ್ರಹಿಸುತ್ತದೆ. ದಿ ವರ್ಜ್‌ನ ವರದಿಯ ಪ್ರಕಾರ, ಬ್ರಹ್ಮಾಂಡದ ಗಾತ್ರದ ಬಗ್ಗೆ ಲರ್ನ್​ ಅಬೌಟ್​ಗೆ ಕೇಳಿದಾಗ, ಶೈಕ್ಷಣಿಕ ಸೈಟ್​ ಮತ್ತು ಭೌತಶಾಸ್ತ್ರದ ವೇದಿಕೆಗಳನ್ನು ಅದು ಉಲ್ಲೇಖಿಸಿದೆ ಎಂದು ವರದಿ ಮಾಡಿದೆ.

ಲರ್ನ್​ ಅಬೌಟ್​ ಚಾಟ್​ಬಾಟ್​ ವೆಬ್​ನಲ್ಲಿ ಪ್ರಾಯೋಗಿಕ ಫೀಚರ್​ನ ರೂಪದಲ್ಲಿ ಲಭ್ಯವಿದೆ. ಇದು ಪ್ರಸ್ತುತ ಆಯ್ದ ಪ್ರದೇಶಗಳಿಗೆ ಸೀಮಿತವಾಗಿದೆ. ಇನ್ನೂ ಭರತದಲ್ಲಿ ಲಭ್ಯವಿಲ್ಲ. ಆದ್ರೆ ಪರೀಕ್ಷಾ ಹಂತದ ನಂತರ ಜಾಗತಿಕವಾಗಿ ಪರಿಚಯಿಸಬಹುದು. ಜೆಮಿನಿ ಲೈವ್​ ಪ್ಲಾಟ್​ಫಾರ್ಮ್​ಗಾಗಿ ಡಾಕ್ಯುಮೆಂಟ್​ ತಿಳುವಳಿಕೆ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಗೂಗಲ್​ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು.

ಇದನ್ನೂ ಓದಿ:ಇನ್​ಸ್ಟಾಗ್ರಾಂ ಬಳಕೆದಾರರಿಗೆ ಅದ್ಭುತ ಫೀಚರ್​ ಪರಿಚಯಿಸುತ್ತಿದೆ ಮೆಟಾ

ABOUT THE AUTHOR

...view details