ನವದೆಹಲಿ:ಸ್ಯಾಮ್ ಸಂಗ್ ತನ್ನ ಮುಂದಿನ ಶ್ರೇಣಿಯ ಮಡಚಬಹುದಾದ ಸ್ಮಾರ್ಟ್ಫೋನ್ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್ 6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್ 6 ಗಳ ಮುಂಗಡ ಬುಕ್ಕಿಂಗ್ ಅನ್ನು (pre-reservations) ಪ್ರಾರಂಭಿಸಿದೆ. ಈ ಅತ್ಯಾಧುನಿಕ ಸ್ಮಾರ್ಟ್ಪೋನ್ಗಳು ಜುಲೈ 10 ರಂದು ಪ್ಯಾರಿಸ್ ನಲ್ಲಿ ನಡೆಯಲಿರುವ ಗ್ಯಾಲಕ್ಸಿ ಅನ್ ಪ್ಯಾಕ್ಡ್ ಈವೆಂಟ್ನಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿವೆ. ಈ ಫೋನ್ಗಳನ್ನು ಎಲ್ಲರಿಗಿಂತ ಮೊದಲು ಕೊಳ್ಳಲು ಬಯಸುವವರು Samsung ಡಾಟ್ com, ಸ್ಯಾಮ್ ಸಂಗ್ ಎಕ್ಸ್ ಕ್ಲೂಸಿವ್ ಸ್ಟೋರ್ಗಳು, Amazon ಡಾಟ್ in, Flipkart ಡಾಟ್ com ಮತ್ತು ಭಾರತದಾದ್ಯಂತದ ಪ್ರಮುಖ ಚಿಲ್ಲರೆ ಮಳಿಗೆಗಳಲ್ಲಿ ಇವನ್ನು ಪ್ರಿ-ರಿಸರ್ವ್ ಮಾಡಬಹುದು.
ಪ್ರಿ-ರಿಸರ್ವ್ ಮಾಡುವುದು ಹೇಗೆ? : ಗ್ರಾಹಕರು 1,999 ರೂ.ಗಳ ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಹೊಸ ಫೊಲ್ಡಬಲ್ ಫೋನ್ ಅನ್ನು ಮುಂಚಿತವಾಗಿ ಕಾಯ್ದಿರಿಸಬಹುದು. ಈ ಮುಂಗಡ ಬುಕಿಂಗ್ ಸಮಯಾವಧಿ ಜೂನ್ 26, 2024 ರಂದು ಬೆಳಗ್ಗೆ 10:00 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಜುಲೈ 10, 2024 ರಂದು ರಾತ್ರಿ 11:59 ಕ್ಕೆ ಕೊನೆಗೊಳ್ಳುತ್ತದೆ.
ಆರಂಭಿಕ ಕೊಳ್ಳುಗರಿಗೆ ವಿಶೇಷ ಆಫರ್: ಮುಂಗಡ ಬುಕ್ಕಿಂಗ್ ಮಾಡುವ ಗ್ರಾಹಕರು ತಮ್ಮ ಮೆಚ್ಚಿನ ಗ್ಯಾಲಕ್ಸಿ ಸ್ಮಾರ್ಟ್ಫೋನ್ ಅನ್ನು ಎಲ್ಲರಿಗಿಂತ ಮೊದಲಿಗೆ ಪಡೆಯುವುದು ಮಾತ್ರವಲ್ಲದೇ ಇನ್ನೂ ಹಲವಾರು ಪ್ರಯೋಜನಗಳನ್ನು ಪಡೆಯುತ್ತಾರೆ. ಪ್ರಿ-ರಿಸರ್ವ್ ಮಾಡಿ ಹೆಚ್ಚುವರಿಯಾಗಿ 8,999 ರೂ.ಗಳವರೆಗೆ ಆಫರ್ಗಳನ್ನು ಪಡೆಯಬಹುದು ಎಂದು ಸ್ಯಾಮ್ಸಂಗ್ ಹೇಳಿದೆ.