ISRO Chairman Interview :ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಂದಿನ 10 ವರ್ಷಗಳಲ್ಲಿ ಅನೇಕ ಯೋಜನೆಗಳನ್ನು ಹೊಂದಿದೆ. ಇದರಲ್ಲಿ ಹೊಸ ಪ್ರೊಪಲ್ಷನ್ ಸಿಸ್ಟಮ್, 200-ಟನ್ ಥ್ರಸ್ಟ್ ಎಂಜಿನ್, ವೀನಸ್ ಮಿಷನ್, ಮಾರ್ಸ್ ಆರ್ಬಿಟಲ್ ಮಿಷನ್, ಚಂದ್ರಯಾನ್-4 ಮತ್ತು ಚಂದ್ರಯಾನ 5 ಸೇರಿವೆ. ಗಗನಯಾನ ಕಾರ್ಯಕ್ರಮವು ಬಾಹ್ಯಾಕಾಶ ಸಂಸ್ಥೆಗೆ ತಕ್ಷಣದ ಆದ್ಯತೆಯಾಗಿದೆ ಎಂದು ಇಸ್ರೋ ಅಧ್ಯಕ್ಷ ವಿ ನಾರಾಯಣನ್ ಈಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾಹಿತಿ ನೀಡಿದರು.
ಸಂದರ್ಶನದಲ್ಲಿ ಗಗನಯಾನ ಮಾನವ ಬಾಹ್ಯಾಕಾಶ ಹಾರಾಟದ ಸೇರಿದಂತೆ ಮುಂದಿನ ಹತ್ತಾರು ಯೋಜನೆಗಳ ಬಗ್ಗೆ ಇಸ್ರೋ ಅಧ್ಯಕ್ಷರು ಸುದೀರ್ಘವಾಗಿ ಮಾತನಾಡಿದರು. ಸವಾಲುಗಳು ಮತ್ತು ಬಾಹ್ಯಾಕಾಶ ಸಂಸ್ಥೆಯ ಸಿದ್ಧತೆಯನ್ನು ಕುರಿತು ಅವರು ವಿವರಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಇತ್ತೀಚೆಗೆ ಗಗನಯಾನ ಮಿಷನ್ ಅನ್ನು 2026 ರಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ದೃಢಪಡಿಸಿದ್ದರು. ಯೋಜನೆಯ ಮೊದಲ ಅನ್ಕ್ರೂವ್ಡ್ (ಸಿಬ್ಬಂದಿ ಇಲ್ಲದ) ಮಿಷನ್ ಆಗಿದ್ದು, ಇದರಲ್ಲಿ ವ್ಯೋಮಿತ್ರ ರೋಬೋಟ್ ಅನ್ನು ಹೊತ್ತೊಯ್ಯುವುದಾಗಿದೆ. ಈ ಮಿಷನ್ ಈ ವರ್ಷ ಉಡಾವಣೆಗೊಳ್ಳಲಿದೆ.
ಇಸ್ರೋ ಅಧ್ಯಕ್ಷ ವಿ ನಾರಾಯಣನ್ ಈಟಿವಿ ಭಾರತಗೆ ಅನ್ಕ್ರೂವ್ಡ್ ಮಿಷನ್‌ಗೂ ಮೊದಲು ಭಾರತೀಯ ಬಾಹ್ಯಾಕಾಶ ಸಂಸ್ಥೆ ಒಟ್ಟು ಮೂರು ಅನ್ಕ್ರೂವ್ಡ್ ಟೆಸ್ಟ್ ಫ್ಲೈಟ್ಸ್ ಪ್ರಾರಂಭಿಸಲಿದೆ. ಮೊದಲ ಹಾರಾಟ ಈ ವರ್ಷ ಶ್ರೀಹರಿಕೋಟಾದಿಂದ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಯಶಸ್ವಿ ಪರೀಕ್ಷೆಯ ನಂತರ ಕ್ರೂವ್ಡ್ ಮಿಷನ್ (ಸಿಬ್ಬಂದಿ ಇರುವ) ಮುಂದುವರಿಯುತ್ತದೆ. ಮಿಷನ್‌ಗೆ ಆಯ್ಕೆಯಾದ ಗಗನಯಾತ್ರಿಗಳು ಮಿಷನ್ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಕಠಿಣ ದೈಹಿಕ ಮತ್ತು ತರಬೇತಿ ಮಾಡ್ಯೂಲ್‌ಗಳಿಗೆ ಒಳಗಾಗುತ್ತಾರೆ ಎಂದು ಅಧ್ಯಕ್ಷರು ಒತ್ತಿ ಹೇಳಿದರು.
400 ಕಿ.ಮೀ. ಕಡಿಮೆ ಭೂಮಿಯ ಕಕ್ಷೆಗೆ (ಲೋ ಅರ್ಥ್ ಆರ್ಬಿಟ್) ಮೂರು ಗಗನಯಾತ್ರಿಗಳನ್ನು ಕಳುಹಿಸುವ ಗುರಿಯನ್ನು ಹೊಂದಿರುವ ಗಗನಯಾನ ಮಿಷನ್, ಹ್ಯೂಮನ್-ರೇಟೆಡ್ LVM 3 ವೆಹಿಕಲ್ (HLVM 3) ಅನ್ನು ಬಳಸಿಕೊಳ್ಳುತ್ತದೆ. ಈ ವಾಹನವು ವರ್ಧಿತ ರಚನಾತ್ಮಕ ಮತ್ತು ಥರ್ಮಲ್ ಮಾರ್ಜೆನ್ಸ್ ಹೊಂದಿದ್ದು, ವಿಶ್ವಾಸಾರ್ಹತೆಯನ್ನು ಸುಧಾರಿಸಲು ಹೆಚ್ಚಿದ ಪುನರುಕ್ತಿಯನ್ನು ಹೊಂದಿದೆ. ಪ್ರಮುಖ ಬೆಳವಣಿಗೆಗಳಲ್ಲಿ ರಿಯಲ್-ಟೈಂ ವೆಹಿಕಲ್ ಆರೋಗ್ಯ ಮೇಲ್ವಿಚಾರಣಾ ವ್ಯವಸ್ಥೆ, ಸಿಬ್ಬಂದಿ ಸುರಕ್ಷತೆಗಾಗಿ ಕಕ್ಷೆಯ ಮಾಡ್ಯೂಲ್ ವ್ಯವಸ್ಥೆ ಮತ್ತು ಸುಧಾರಿತ ಪರಿಸರ ನಿಯಂತ್ರಣ ಮತ್ತು ಸುರಕ್ಷತಾ ವ್ಯವಸ್ಥೆ ಸೇರಿವೆ ಎಂದು ಇಸ್ರೋ ಅಧ್ಯಕ್ಷರು ಹೇಳಿದರು.
ಈ ವೆಹಿಕಲ್ ಗಗನಯಾತ್ರಿಗಳನ್ನು ಭೂಮಿಯಿಂದ 170 ಕಿ.ಮೀ. ದೂರದ ಆಗಸದತ್ತ ಸಾಗಿಸುತ್ತದೆ. ನಂತರ 400 ಕಿ.ಮೀ.ವರೆಗೆ ಮುನ್ನಡೆಯುತ್ತದೆ. ನಂತರ ಕಕ್ಷೆಗೆ ತಲುಪುತ್ತದೆ. ಮಿಷನ್ನ ಉದ್ದೇಶ ಪೂರ್ಣಗೊಂಡ ನಂತರ ಅವರನ್ನು ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿಸುತ್ತದೆ ಎಂದು ಹೈಲೈಟ್ ಮಾಡಿದ ಇಸ್ರೋ ಅಧ್ಯಕ್ಷರು, ಸರ್ವೀಸ್ ಮಾಡ್ಯೂಲ್‌ನ ಪ್ರೊಪಲ್ಷನ್ ಸಿಸ್ಟಮ್ ಆರೋಹಣ ಮತ್ತು ಅವರೋಹಣ ಎರಡನ್ನೂ ನಿರ್ವಹಿಸುತ್ತದೆ. ರೀ-ಎಂಟ್ರಿ ಸಮಯದಲ್ಲಿ ವೇಗ ಕಡಿತ, ನಂತರ ಪ್ಯಾರಾಚೂಟ್ ಸಹಾಯದಿಂದ ಇಳಿಯುವಿಕೆಯ ಕಾರ್ಯ ನಡೆಯುತ್ತದೆ. ಈ ಪ್ಯಾರಾಚೂಟ್‌ಗಳನ್ನು ಆಗ್ರಾದಲ್ಲಿ ಡಿಆರ್ಡಿಒ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.