Economic Survey:ಕಳೆದ 10 ವರ್ಷಗಳಲ್ಲಿ ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು ಹಲವು ಪಟ್ಟು ಹೆಚ್ಚಾಗಿದೆ. ಈ ವರ್ಷದ ಎಂದರೆ 2023-24ನೇ ಹಣಕಾಸು ವರ್ಷದಲ್ಲಿ ರೂ. 9.52 ಲಕ್ಷ ಕೋಟಿಗೆ ತಲುಪಿದೆ. ಆದರೂ ಉದ್ಯಮವು ಪ್ರಾಥಮಿಕವಾಗಿ ಜೋಡಣೆಯ ಮೇಲೆ ಕೇಂದ್ರೀಕರಿಸಿರುವುದರಿಂದ ಡಿಸೈನ್ ಮತ್ತು ಕಾಂಪೊನೆನ್ಟ್ ತಯಾರಿಕೆಯಲ್ಲಿ ಸೀಮಿತ ಪ್ರಗತಿ ಕಂಡು ಬಂದಿದೆ. ಇದನ್ನು 2024-25ರ ಎಕನಾಮಿಕ್ ಸರ್ವೇಯಲ್ಲಿ ಉಲ್ಲೇಖಿಸಲಾಗಿದೆ.
ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾದ 2024-25ರ ಆರ್ಥಿಕ ವರ್ಷದ ಎಕನಾಮಿಕ್ ಸರ್ವೇ ಪ್ರಕಾರ, ಜಾಗತಿಕ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಭಾರತದ ಪಾಲು ನಾಲ್ಕು ಪ್ರತಿಶತದಷ್ಟಿದೆ. ಆದರೆ, ಅದರ ಗಮನವು ಮುಖ್ಯವಾಗಿ ಅಸೆಂಬ್ಲಿಂಗ್ ಚಟುವಟಿಕೆ ಮೇಲಿದೆ. ಉತ್ತಮ ಮೂಲಸೌಕರ್ಯ, ವ್ಯವಹಾರ ಮಾಡುವ ಸುಲಭತೆ ಮತ್ತು ವಿವಿಧ ಪ್ರೋತ್ಸಾಹಕಗಳ ಜೊತೆಗೆ ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಂತಹ ಕಾರ್ಯಕ್ರಮಗಳು ದೇಶೀಯ ಉತ್ಪಾದನೆಯನ್ನು ಹೆಚ್ಚಿಸಿವೆ ಮತ್ತು ವಿದೇಶಿ ಹೂಡಿಕೆಗಳನ್ನು ಆಕರ್ಷಿಸಿವೆ ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ. ಆದಾಗ್ಯೂ, ವಿನ್ಯಾಸ ಮತ್ತು ಕಾಂಪೊನೆನ್ಟ್ ತಯಾರಿಕೆಯಲ್ಲಿ ಸೀಮಿತ ಪ್ರಗತಿ ಕಂಡುಬಂದಿದೆ.
ಸರ್ವೇ ಪ್ರಕಾರ, 2014-15ನೇ ಹಣಕಾಸು ವರ್ಷದಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳ ದೇಶಿಯ ಉತ್ಪಾದನೆಯು 1.90 ಲಕ್ಷ ಕೋಟಿ ರೂ.ಗಳಾಗಿದ್ದು, 2023-24ನೇ ಹಣಕಾಸು ವರ್ಷದಲ್ಲಿ ಶೇ. 17.5 ರಷ್ಟು ವಾರ್ಷಿಕ ಬೆಳವಣಿಗೆಯೊಂದಿಗೆ 9.52 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಾಗುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ, ಮೊಬೈಲ್ ಫೋನ್‌ಗಳ ತಯಾರಿಕೆಯಲ್ಲಿ ದಾಖಲಾಗಿರುವ ಗಮನಾರ್ಹ ಬೆಳವಣಿಗೆಯಿಂದಾಗಿ ಆಮದಿನ ಮೇಲಿನ ಅವಲಂಬನೆ ಕಡಿಮೆಯಾಗಿದೆ ಮತ್ತು ಒಟ್ಟು ಸ್ಮಾರ್ಟ್‌ಫೋನ್ ಅವಶ್ಯಕತೆಗಳಲ್ಲಿ ಶೇ 99 ರಷ್ಟು ದೇಶೀಯ ಉತ್ಪಾದನೆಯ ಮೂಲಕ ಪೂರೈಸಲಾಗುತ್ತಿದೆ.