ಕರ್ನಾಟಕ

karnataka

ETV Bharat / technology

ಚಂದ್ರನ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ ಚೀನಾ ಉಪಗ್ರಹ ತಂದ ಅವಶೇಷಗಳು

2020ರಲ್ಲಿ ಚೀನಾದ ಉಪಗ್ರಹವು ಚಂದ್ರನಿಂದ ತಂದ ಅವಶೇಷಗಳು ಚಂದ್ರನ ಇತಿಹಾಸ ತಿಳಿಸುವ ಹೊಸ ಮಾಹಿತಿಗಳನ್ನು ನೀಡಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Lunar sample returned by China's 2020 probe may provide clues to Moon's history
Lunar sample returned by China's 2020 probe may provide clues to Moon's history

By ETV Bharat Karnataka Team

Published : Feb 7, 2024, 7:50 PM IST

ಬೀಜಿಂಗ್: ಚೀನಾದ 2020ರ ಚಂದ್ರಯಾನ ನೌಕೆಯು ಭೂಮಿಗೆ ತಂದ ಚಂದ್ರನ ಮೇಲಿನ ಅವಶೇಷಗಳು ಚಂದ್ರನ ಇತಿಹಾಸದ ಸುಳಿವುಗಳನ್ನು ನೀಡುವ ಖನಿಜಗಳನ್ನು ಒಳಗೊಂಡಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಚೀನಾದ ಚಾಂಗ್ಇ -5 ನೌಕೆಯು ಚಂದ್ರನ ಮೇಲಿನ ಓಷಿಯನಸ್ ಪ್ರೊಸೆಲ್ಲರಮ್ ಎಂದು ಹೆಸರಿಸಲಾದ ಪ್ರದೇಶದಿಂದ 1.73 ಕಿಲೋಗ್ರಾಂಗಳಷ್ಟು ರೆಗೊಲಿತ್ ಅನ್ನು ಭೂಮಿಗೆ ತಂದಿತ್ತು. 1976 ರಲ್ಲಿ ಸೋವಿಯತ್ ಒಕ್ಕೂಟದ ಲೂನಾ 24 ನೌಕೆಯು ಮೊದಲ ಬಾರಿಗೆ ಚಂದ್ರನ ಮೇಲಿನ ಅವಶೇಷಗಳನ್ನು ತಂದಿತ್ತು. ಅದರ ನಂತರ ಮೊದಲ ಬಾರಿಗೆ ಚೀನಾದ ನೌಕೆ ಚಂದ್ರನ ಅವಶೇಷಗಳನ್ನು ಭೂಮಿಗೆ ತಂದಿದೆ.

2020 ರ ಕೊನೆಯಲ್ಲಿ ಚಾಂಗ್'ಇ -5 (ಸಿಇ -5) ತೆಗೆದುಕೊಂಡು ಬಂದ ಅವಶೇಷಗಳಲ್ಲಿ ಹೊಸ ಖನಿಜ, ಚಾಂಜೆಸೈಟ್​ (ವೈ) ಮತ್ತು ಸಿಲಿಕಾ ಖನಿಜಗಳ ಸಂಯೋಜನೆಯು ಕಂಡು ಬಂದಿದೆ. ಮ್ಯಾಟರ್ ಅಂಡ್ ರೇಡಿಯೇಷನ್ ಅಟ್ ಎಕ್ಸ್​ಟ್ರೀಮ್ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಸಂಶೋಧಕರು ಸಿಇ -5 ರ ವಸ್ತು ಸಂಯೋಜನೆಯನ್ನು ಇತರ ಚಂದ್ರ ಮತ್ತು ಮಂಗಳದ ರೆಗೊಲಿತ್ ಮಾದರಿಗಳೊಂದಿಗೆ ಹೋಲಿಸಿದ್ದಾರೆ.

ಚೈನೀಸ್ ಅಕಾಡೆಮಿ ಆಫ್ ಸೈನ್ಸ್​ನ ತಂಡವು ಚಂದ್ರನ ಮಾದರಿಯ ವಿಶಿಷ್ಟ ಸಂಯೋಜನೆಯ ಸಂಭಾವ್ಯ ಕಾರಣಗಳು ಮತ್ತು ಮೂಲಗಳನ್ನು ಪರಿಶೀಲಿಸಿತು. "ಕ್ಷುದ್ರಗ್ರಹಗಳು ಮತ್ತು ಧೂಮಕೇತುಗಳು ತೀವ್ರ ವೇಗದಲ್ಲಿ ಚಂದ್ರನಿಗೆ ಡಿಕ್ಕಿ ಹೊಡೆಯುತ್ತವೆ. ಇದು ಚಂದ್ರನ ಬಂಡೆಗಳಲ್ಲಿ ರೂಪಾಂತರದ ಪರಿಣಾಮ (ಆಘಾತ)ಗಳನ್ನು ಉಂಟುಮಾಡುತ್ತದೆ. ಈ ತಾಪಮಾನ ಮತ್ತು ಒತ್ತಡದ ಬದಲಾವಣೆಯು ವೇಗವಾಗಿ ಸಂಭವಿಸುತ್ತದೆ ಮತ್ತು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ಸ್ಟಿಶೋವೈಟ್ ಮತ್ತು ಸೀಫರ್ ಟೈಟ್​ನಂಥ ಸಿಲಿಕಾ ಪಾಲಿಮಾರ್ಫ್​ಗಳ ರಚನೆಯೂ ಸೇರಿದೆ. ಅವು ರಾಸಾಯನಿಕವಾಗಿ ಕ್ವಾರ್ಟ್ಸ್​ ಗಳನ್ನು ಹೋಲುತ್ತವೆ. ಆದರೆ ವಿಭಿನ್ನ ಸ್ಫಟಿಕ ರಚನೆಗಳನ್ನು ಹೊಂದಿವೆ" ಎಂದು ತಜ್ಞರ ತಂಡ ಹೇಳಿದೆ.

"ಚಂದ್ರನ ಮೇಲ್ಮೈ ಹತ್ತಾರು ಪರಿಣಾಮ ಕುಳಿಗಳಿಂದ ಆವೃತವಾಗಿದ್ದರೂ, ಚಂದ್ರನ ಮಾದರಿಗಳಲ್ಲಿ ಹೆಚ್ಚಿನ ಒತ್ತಡದ ಖನಿಜಗಳು ಕಾಣಿಸುವುದು ಅಪರೂಪ" ಎಂದು ಅಕಾಡೆಮಿಯ ಲೇಖಕ ವೀ ಡು ಹೇಳಿದ್ದಾರೆ. "ಹೆಚ್ಚಿನ ಒತ್ತಡದ ಖನಿಜಗಳು ಹೆಚ್ಚಿನ ತಾಪಮಾನದಲ್ಲಿ ಅಸ್ಥಿರವಾಗಿರುತ್ತವೆ. ಆದ್ದರಿಂದ, ಪರಿಣಾಮದ ಸಮಯದಲ್ಲಿ ರೂಪುಗೊಂಡವು ಹಿಮ್ಮುಖ ಪ್ರಕ್ರಿಯೆಯನ್ನು ಅನುಭವಿಸಿರಬಹುದು ಎಂಬುದು ಈ ವಿದ್ಯಮಾನದ ಸಂಭಾವ್ಯ ವಿವರಣೆಗಳಲ್ಲೊಂದಾಗಿದೆ" ಎಂದು ಡು ಹೇಳಿದರು.

ಇದನ್ನೂ ಓದಿ:20 ಲಕ್ಷ ಭಾರತೀಯರಿಗೆ ಮೈಕ್ರೋಸಾಫ್ಟ್​ನಿಂದ AI ತರಬೇತಿ: ಬೆಂಗಳೂರಿನಲ್ಲಿ ನಾದೆಲ್ಲಾ ಹೇಳಿಕೆ

ABOUT THE AUTHOR

...view details