ಕರ್ನಾಟಕ

karnataka

ETV Bharat / technology

ಚೀನಾದ ಐಸ್ಪೇಸ್​ ರಾಕೆಟ್​ ಪತನ: 3 ಉಪಗ್ರಹಗಳು ನಾಶ - China rocket fails - CHINA ROCKET FAILS

ಚೀನಾದ ರಾಕೆಟ್​ ಉಡಾವಣೆಯಾದ ಕೆಲವೇ ಹೊತ್ತಿನಲ್ಲಿ ಪತನಗೊಂಡಿದ್ದು, ಮೂರು ಉಪಗ್ರಹಗಳು ನಾಶವಾಗಿವೆ.

ರಾಕೆಟ್ (ಸಂಗ್ರಹ ಚಿತ್ರ)
ರಾಕೆಟ್ (ಸಂಗ್ರಹ ಚಿತ್ರ) (IANS)

By PTI

Published : Jul 12, 2024, 7:44 PM IST

ಬೀಜಿಂಗ್ : ಚೀನಾದ ರಾಕೆಟ್​ ಸ್ಟಾರ್ಟಪ್​ ಕಂಪನಿಯೊಂದು ಉಡಾವಣೆ ಮಾಡಿದ ರಾಕೆಟ್​ ಹಾರಿದ ಕೆಲವೇ ಹೊತ್ತಿನಲ್ಲಿ ಪತನಗೊಂಡಿದ್ದು, ಅದಕ್ಕೆ ಜೋಡಿಸಲಾಗಿದ್ದ ಮೂರು ಉಪಗ್ರಹಗಳು ನಾಶವಾಗಿವೆ. ಜಾಗತಿಕ ಹವಾಮಾನ ಮುನ್ಸೂಚನೆ ಮತ್ತು ಭೂಕಂಪದ ಮುನ್ಸೂಚನೆಗಾಗಿ ಬಾಹ್ಯಾಕಾಶದಲ್ಲಿ ಜೋಡಣೆ ಮಾಡಲಾಗುತ್ತಿರುವ ವಾಣಿಜ್ಯ ಉಪಗ್ರಹಗಳ ಸರಣಿಯ ಭಾಗವಾಗಿ ಈ ಉಪಗ್ರಹಗಳನ್ನು ಹಾರಿಸಲಾಗಿತ್ತು.

ರಾಕೆಟ್​ ಸ್ಟಾರ್ಟಪ್ ಕಂಪನಿ ಐಸ್ಪೇಸ್ ತಯಾರಿಸಿದ 24 ಮೀಟರ್ (79 ಅಡಿ) ಎತ್ತರದ ಘನ - ಇಂಧನ ರಾಕೆಟ್ ಹೈಪರ್ ಬೋಲಾ -1 ಚೀನಾದ ಗೋಬಿ ಮರುಭೂಮಿಯ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಗುರುವಾರ ಉಡಾವಣೆಯಾಗಿತ್ತು. ರಾಕೆಟ್​ನ ಮೊದಲ, ಎರಡನೇ ಮತ್ತು ಮೂರನೇ ಹಂತಗಳು ಸಾಮಾನ್ಯವಾಗಿ ನಡೆದವು.

ಆದರೆ, ನಾಲ್ಕನೇ ಹಂತದಲ್ಲಿ ಸಮಸ್ಯೆಗಳು ಉಂಟಾಗಿ, ಉಡಾವಣಾ ಕಾರ್ಯಾಚರಣೆಯು ವಿಫಲವಾಯಿತು ಎಂದು ಕಂಪನಿ ಹೇಳಿದೆ. ವಿವರವಾದ ತನಿಖೆಯ ನಂತರ ವೈಫಲ್ಯಕ್ಕೆ ನಿರ್ದಿಷ್ಟ ಕಾರಣಗಳನ್ನು ಬಹಿರಂಗಪಡಿಸಲಾಗುವುದು ಎಂದು ಹಾಂಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಶುಕ್ರವಾರ ವರದಿ ಮಾಡಿದೆ.

300 ಕೆಜಿ (661 ಪೌಂಡ್) ಪೇಲೋಡ್ ಅನ್ನು 500 ಕಿ.ಮೀ (311 ಮೈಲಿ) ಸೂರ್ಯ-ಸಿಂಕ್ರೊನಸ್ ಕಕ್ಷೆಗೆ ತಲುಪಿಸಬಲ್ಲ ತುಲನಾತ್ಮಕವಾಗಿ ಸಣ್ಣ ಹೈಪರ್ಬೋಲಾ -1 ರಾಕೆಟ್​ ಟಿಯಾಂಜಿನ್ ಮೂಲದ ಯುನ್ಯಾವೊ ಏರೋಸ್ಪೇಸ್ ಟೆಕ್ನಾಲಜಿ ಕಂಪನಿಗಾಗಿ ಯುನ್ಯಾವೊ -1 ಹವಾಮಾನ ಉಪಗ್ರಹ ಸರಣಿಯ 15, 16 ಮತ್ತು 17 ನೇ ಉಪಗ್ರಹಗಳನ್ನು ಹೊತ್ತೊಯ್ಯುತ್ತಿತ್ತು. ಆದರೆ, ಈ ಉಪಗ್ರಹಗಳು ಕಕ್ಷೆಯನ್ನು ತಲುಪಲಿಲ್ಲ.

ಯುನ್ಯಾವೊ ಏರೋಸ್ಪೇಸ್ ಟೆಕ್ನಾಲಜಿ ಈ ವರ್ಷ ಸುಮಾರು 40 ಉಪಗ್ರಹಗಳನ್ನು ಉಡಾವಣೆ ಮಾಡಲು ಮತ್ತು ಮುಂದಿನ ವರ್ಷದ ವೇಳೆಗೆ ತನ್ನ 90 ಉಪಗ್ರಹ ಯುನ್ಯಾವೊ -1 ನಕ್ಷತ್ರಪುಂಜವನ್ನು ಪೂರ್ಣಗೊಳಿಸಲು ಯೋಜಿಸಿದೆ ಎಂದು ವರದಿ ತಿಳಿಸಿದೆ.

2019 ರಲ್ಲಿ, ಐಸ್ಪೇಸ್ ಹೈಪರ್ ಬೋಲಾ -1 ರಾಕೆಟ್​ನೊಂದಿಗೆ ಭೂಮಿಯ ಕಕ್ಷೆಯನ್ನು ತಲುಪಿದ ಚೀನಾದ ಮೊದಲ ಖಾಸಗಿ ರಾಕೆಟ್ ಕಂಪನಿಯಾಗಿದೆ. ಆದರೆ, ಅಂದಿನಿಂದ, ರಾಕೆಟ್ ಸತತ ಮೂರು ಸಂದರ್ಭಗಳಲ್ಲಿ ವಿಫಲವಾಗಿದೆ. ಇನ್ಸುಲೇಷನ್ ಫೋಮ್ ಕಳಚಿ ಬೀಳುವುದು, ಮೊದಲ ಹಂತದ ಸ್ಟೀರಿಂಗ್ ರೆಕ್ಕೆಗೆ ಹಾನಿಯಾಗುವುದು ಮತ್ತು ಎರಡನೇ ಹಂತದ ಎತ್ತರ ನಿಯಂತ್ರಣ ವ್ಯವಸ್ಥೆಯಲ್ಲಿ ಇಂಧನ ಸೋರಿಕೆ ಹೀಗೆ ಹಲವಾರು ತಾಂತ್ರಿಕ ವೈಫಲ್ಯಗಳು ರಾಕೆಟ್​ನಲ್ಲಿ ಕಂಡು ಬಂದಿವೆ.

ಇದನ್ನೂ ಓದಿ : ಗ್ರೂಪ್​ ಸೇರ್ಪಡೆಗೆ ಮತ್ತೊಂದು ಸುರಕ್ಷತಾ ವೈಶಿಷ್ಟ್ಯ ಪರಿಚಯಿಸಿದ ವಾಟ್ಸ್​ಆ್ಯಪ್ - WhatsApp New Feature

ABOUT THE AUTHOR

...view details