ಕರ್ನಾಟಕ

karnataka

ETV Bharat / technology

ಬಹುದೊಡ್ಡ ಸಮಸ್ಯೆಯಲ್ಲಿ ಸಿಲುಕಿದ ಚಾಟ್​ಜಿಪಿಟಿ; ಸಾವಿರಾರು ಬಳಕೆದಾರರ ಮೇಲೆ ಪರಿಣಾಮ! - CHATGPT FACES OUTAGE

ChatGPT Faces Outage: ಮೈಕ್ರೋಸಾಫ್ಟ್​ ಬೆಂಬಲಿತ ಓಪನ್​ಎಐನ ತನ್ನ ಜನಪ್ರಿಯ ಚಾಟ್​ಬಾಟ್​ ಚಾಟ್​ಜಿಪಿಟಿ ಲಭ್ಯವಿಲ್ಲವಾಗಿದೆ. ಇದರಿಂದ ಬಹುದೊಡ್ಡ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಕಂಪನಿ ಹೇಳಿದೆ.

CHATGPT FACES MASSIVE OUTAGE  CHATGPT USERS  MICROSOFT BACKED OPENAI
ಬಹುದೊಡ್ಡ ಸಮಸ್ಯೆ ಎದುರಿಸುತ್ತಿರುವ ಚಾಟ್​ಜಿಪಿಟಿ (ETV Bharat)

By ETV Bharat Tech Team

Published : Nov 9, 2024, 11:27 AM IST

ChatGPT Faces Outage: ಓಪನ್​ಎಐನ ಚಾಟ್​ಜಿಪಿಟಿ ಬಹುದೊಡ್ಡ ಸಮಸ್ಯೆಯಲ್ಲಿ ಸಿಲುಕಿಕೊಂಡಂತಿದೆ. ಸದ್ಯ ಬಳಕೆದಾರರಿಗೆ ಚಾಟ್​ಜಿಪಿಟಿ ಲಭ್ಯವಿಲ್ಲವಾಗಿದ್ದು, ಬಹುದೊಡ್ಡ ಸಮಸ್ಯೆಗೆ ಸಿಲುಕಿಕೊಂಡಿದೆ. ಇದರಿಂದಾಗಿ ಸಾವಿರಾರೂ ಬಳಕೆದಾರರ ಮೇಲೆ ಪರಿಣಾಮ ಬೀರಿದೆ.

ಸಮಸ್ಯೆ ಉಲ್ಬಣಗೊಂಡಿರುವುದರ ಬಗ್ಗೆ ಪರಿಶೀಲಿಸಲಾಗುತ್ತಿದೆ. ಆದಷ್ಟು ಬೇಗ ಕಾರ್ಯವನ್ನು ಮರುಸ್ಥಾಪಿಸಲು ಯತ್ನಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಭಾರತೀಯ ಕಾಲಮಾನ ಪ್ರಕಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಸುಮಾರು 20 ಸಾವಿರ ಬಳಕೆದಾರರು ಮೇಲೆ ಚಾಟ್​ಜಿಪಿಟಿ ಸಮಸ್ಯೆಯಾಗಿ ಪರಿಣಾಮ ಬೀರಿದೆ ಎಂದು ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ Downdetector.com ಹೇಳಿದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಓದಿ:ಹ್ಯಾಕರ್​ಗಳ ಕಾಟವೇ? ನಿಮ್ಮ ಮೊಬೈಲ್​ ಫೋನ್​ ಸುಮ್ನೆ ಸ್ವಿಚ್​ ಮಾಡಿ ಅಂತಾರೆ ತಜ್ಞರು

ABOUT THE AUTHOR

...view details