Apple iPhone: ಕೇಂದ್ರ ಸರ್ಕಾರದ ಇಂಡಿಯನ್ ಕಂಪ್ಯೂಟರ್ ಎಮೆರ್ಜೆನ್ಸ್ ರೆಸ್ಪಾನ್ಸ್ ಟೀಂ (CERT-In) ಐಫೋನ್ ಮತ್ತು ಇತರ ಆಪಲ್ ಸಾಧನ ಬಳಕೆದಾರರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಹಳೆಯ ಸಾಫ್ಟ್ವೇರ್ ಆವೃತ್ತಿಗಳನ್ನು ಬಳಸುತ್ತಿರುವ ಸಾಧನಗಳಿಗೆ ವಿಶೇಷವಾಗಿ ಈ ಎಚ್ಚರಿಕೆಯನ್ನು ನೀಡಲಾಗಿದೆ. ವರದಿಯ ಪ್ರಕಾರ, ಈ ಸಾಧನಗಳಲ್ಲಿ ಗಂಭೀರವಾದ ಭದ್ರತಾ ದೋಷಗಳು ಕಂಡುಬಂದಿವೆ. ಇದು ಸೈಬರ್ ಬೆದರಿಕೆಗಳನ್ನು ಉತ್ತೇಜಿಸುತ್ತದೆ.
ಯಾವ ಸಾಧನಗಳಿಗೆ ಎಚ್ಚರಿಕೆ?:ಆಪಲ್ ಸಾಫ್ಟ್ವೇರ್ನ ಹಳೆಯ ಆವೃತ್ತಿಯನ್ನು ಆಧರಿಸಿದ ಸಾಧನಗಳಿಗೆ ಈ ಎಚ್ಚರಿಕೆಯನ್ನು ನೀಡಲಾಗಿದೆ. ಅಂದ್ರೆ ಐಫೋನ್, ಐಪ್ಯಾಡ್, ಮ್ಯಾಕ್ ಮತ್ತು ಸಫಾರಿನಂತಹ ಉತ್ಪನ್ನಗಳನ್ನು ಸಹ ಈ ಪಟ್ಟಿಯಲ್ಲಿ ಸೇರಿಸಲಾಗಿದೆ.
iOS:ಆವೃತ್ತಿ 18.1.1 ಗಿಂತ ಹಳೆಯ ಆವೃತ್ತಿಗಳು
iPadOS:ಆವೃತ್ತಿ 17.7.2 ಗಿಂತ ಹಳೆಯ ಆವೃತ್ತಿಗಳು
macOS: ಆವೃತ್ತಿ 15.1.1 ಗಿಂತ ಹಳೆಯ ಆವೃತ್ತಿಗಳು
Safari: ಆವೃತ್ತಿ 18.1.1 ಗಿಂತ ಹಳೆಯ ಆವೃತ್ತಿಗಳು
ನಿಮ್ಮ ಸಾಧನವು ಈ ಯಾವುದೇ ಆವೃತ್ತಿಗಳಲ್ಲಿ ರನ್ ಆಗುತ್ತಿದ್ದರೆ ಅದು ಸೈಬರ್ ಬೆದರಿಕೆಗಳಿಗೆ ಗುರಿಯಾಗಬಹುದಾಗಿದೆ.