ಕರ್ನಾಟಕ

karnataka

ETV Bharat / technology

ಗೂಗಲ್​ ಕ್ರೋಮ್​ ಬಳಕೆದಾರರೇ ಎಚ್ಚರ: ನಿಮ್ಮ ಕ್ರೋಮ್​ ಬ್ರೌಸರ್​ನಲ್ಲಿದೆ ಲೋಪ, ಈಗಲೇ ಅಪ್​​ಡೇಟ್​ ಮಾಡಿ - google chrome fault

ಗೂಗಲ್​ ಕ್ರೋಮ್​ ಬಳಕೆದಾರರೇ ಇಲ್ಲಿ ನೋಡಿ. ನಿಮ್ಮ ಕ್ರೋಮ್​ನಲ್ಲಿ ದೊಡ್ಡ ಲೋಪ ಕಂಡುಬಂದಿದ್ದು, ತಕ್ಷಣವೇ ಅದನ್ನು ಅಪ್​​ಡೇಟ್​ ಮಾಡಿ. ಇಲ್ಲವಾದಲ್ಲಿ ನಿಮ್ಮ ಮಾಹಿತಿಯನ್ನು ಹ್ಯಾಕರ್​ಗಳು ಕದಿಯುವ ಸಾಧ್ಯತೆ ಇದೆ.

ಗೂಗಲ್​ ಕ್ರೋಮ್​ ಬಳಕೆದಾರರೇ ಎಚ್ಚರ
ಗೂಗಲ್​ ಕ್ರೋಮ್​ ಬಳಕೆದಾರರೇ ಎಚ್ಚರ (ETV Bharat)

By ETV Bharat Karnataka Team

Published : Aug 11, 2024, 10:03 PM IST

ನವದೆಹಲಿ:ಹೇಳಿಕೇಳಿ ಇದು ಸಾಫ್ಟ್​ವೇರ್​, ಆನ್​ಲೈನ್​ ಕಾಲ. ಇಲ್ಲಿ ಕಂಪ್ಯೂಟರ್​ ಮಾತ್ರವಲ್ಲದೆ, ಮೊಬೈಲ್​ನಲ್ಲೂ ಇಂಟರ್​ನೆಟ್​​ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂ ಗೂಗಲ್​ ಕ್ರೋಮ್​ ಬ್ರೌಸರ್​ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಅದು ಎಷ್ಟು ಸುರಕ್ಷಿತವಾಗಿದೆ ಎಂಬುದು ಪ್ರಶ್ನೆಯಾಗಿದೆ.

ಹೌದು, ನಿಮ್ಮ ಕಂಪ್ಯೂಟರ್​ನಲ್ಲಿ ಗೂಗಲ್​ ಕ್ರೋಮ್​ ಬಳಸುತ್ತಿದ್ದೀರಾ ಎಚ್ಚರ. ನೀವು ಕಂಪ್ಯೂಟರ್​ ಅನ್ನು ಆಫ್​ ಮಾಡಿದ ಬಳಿಕವೂ ಹ್ಯಾಕರ್​ಗಳು ನಿಮ್ಮಲ್ಲಿನ ಪ್ರಮುಖ ಮಾಹಿತಿಯನ್ನು ಕದಿಯಬಹುದು. ಇದಕ್ಕೆ ಕಾರಣ ಗೂಗಲ್​ ಕ್ರೋಮ್​​ನಲ್ಲಿ ಲೋಪ. ಹ್ಯಾಕರ್​ಗಳು ಅದನ್ನು ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಇಂಥದ್ದೊಂದು ಎಚ್ಚರಿಕೆಯನ್ನು ಸರ್ಕಾರಿ ಸಂಸ್ಥೆಯಾದ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ನೀಡಿದೆ. Google Chrome ನ ಡೆಸ್ಕ್‌ಟಾಪ್ ಬಳಕೆದಾರರು ತ್ವರಿತವಾಗಿ ಎಚ್ಚರಿಕೆ ವಹಿಸಲು ಅದು ಸೂಚಿಸಿದೆ. ಗೂಗಲ್‌ನ ವೆಬ್ ಬ್ರೌಸರ್‌ನಲ್ಲಿ ಹಲವು ದೋಷಗಳನ್ನು ಸಂಸ್ಥೆಯು ಗುರುತಿಸಿದ್ದು, ಇದನ್ನೇ ಬಳಸಿಕೊಂಡು ನಿಮ್ಮ ಪ್ರಮುಖ ಮಾಹಿತಿಯನ್ನು ಹ್ಯಾಕರ್‌ಗಳು ಮತ್ತು ಸ್ಕ್ಯಾಮರ್‌ಗಳು ಪಡೆದುಕೊಳ್ಳಬಹುದು ಎಂದಿದೆ.

ಸೂಕ್ಷ್ಮ ಡೇಟಾಗೆ ಹ್ಯಾಕರ್​ಗಳ ಕನ್ನ: CERT-In ಸಂಸ್ಥೆಯ ಪ್ರಕಾರ, ಸೈಬರ್ ಸ್ಕ್ಯಾಮರ್‌ಗಳು ಈ ಲೋಪವನ್ನು ಬಳಕೆದಾರರ ಸಿಸ್ಟಮ್‌ಗಳನ್ನು ಪ್ರವೇಶಿಸಿ ಸೂಕ್ಷ್ಮ ಡೇಟಾವನ್ನು ಕದಿಯಲು ಬಳಸಬಹುದು. ಇದು ಮಾತ್ರವಲ್ಲದೆ, ಸ್ಕ್ಯಾಮರ್‌ಗಳು ಬಳಕೆದಾರರ ಸಾಧನಗಳಿಗೆ ರಿಮೋಟ್ ಎಂಟ್ರಿ ಸಹ ಪಡೆಯಬಹುದು. ಆತಂಕಕಾರಿ ವಿಷಯವೆಂದರೆ, ಕಂಪ್ಯೂಟರ್ ಸಿಸ್ಟಮ್ ಅನ್ನು ಸ್ಥಗಿತಗೊಳಿಸಿದ (Shutdown) ನಂತರವೂ ಹ್ಯಾಕರ್‌ಗಳು ಆಪರೇಟ್​ ಮಾಡಬಹುದಾಗಿದೆ. ಹ್ಯಾಕರ್‌ಗಳು ನಿಮ್ಮ ಕಂಪ್ಯೂಟರ್​ಗಳನ್ನು ತಮ್ಮ ವಶಕ್ಕೆ ಪಡೆದು ನಿಮ್ಮ ಸಾಧನದಲ್ಲಿ ಅಕ್ರಮವಾಗಿ ಕೋಡ್ ಅಥವಾ ಸಾಫ್ಟ್‌ವೇರ್ ಅನ್ನು ಇನ್​​ಸ್ಟಾಲ್​ ಮಾಡಲಿದ್ದಾರೆ.

ಹ್ಯಾಕರ್​ಗಳಿಂದ ತಪ್ಪಿಸಿಕೊಳ್ಳುವುದು ಹೇಗೆ?:ಈ ಲೋಪದಿಂದ ರಕ್ಷಿಸಿಕೊಳ್ಳಲು ಗೂಗಲ್​ ಕ್ರೋಮ್ ಬಳಕೆದಾರರು ಮೊದಲು ತಮ್ಮ ಕಂಪ್ಯೂಟರ್​​ನಲ್ಲಿನ Google Chrome ಅನ್ನು ಅಪ್​​ಡೇಟ್​ ಮಾಡಿ. ವಿಂಡೋಸ್​ ಅಥವಾ MacOS ಮೋಡಲ್​​ನ ಕಂಪ್ಯೂಟರ್​​ಗೆ 127.0.6533.88/89, Linux ಮೋಡಲ್​​ಗೆ 127.0.6533.88 ಅಪಡೇಟರ್​ ವರ್ಷನ್​ ಲಭ್ಯವಿದೆ.

ಕ್ರೋಮ್​ ಅಪ್​ಡೇಟ್​ ಮಾಡುವುದು ಹೇಗೆ?:Google Chrome ಅನ್ನು ಅಪ್​ಡೇಟ್​​ ಮಾಡಲು ಬಳಕೆದಾರರು ಮೊದಲು ಬ್ರೌಸರ್‌ನ ಮೆನು ಒತ್ತಬೇಕು. ನಂತರ, about ಗೂಗಲ್​ ಕ್ರೋಮ್​ ಅನ್ನು ಕ್ಲಿಕ್ಕಿಸಿ, ನಿಮ್ಮ ಸಾಫ್ಟ್​​ವೇರ್​ ಅಪ್​​ಡೇಟ್​ಗೆ ಲಭ್ಯವಿದ್ದಲ್ಲಿ, ನವೀಕೃತ ಮಾದರಿಯನ್ನು ಅಲ್ಲಿ ತೋರಿಸುತ್ತದೆ. ಅಪ್​ಡೇಟ್​ ಲಭ್ಯವಿದ್ದಲ್ಲಿ, ಅದು ತಾನಾಗೇ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ:ಗೂಗಲ್​ ಆವಿಷ್ಕಾರದ ತಂತ್ರಜ್ಞೆ, ಯೂಟ್ಯೂಬ್​ ಮಾಜಿ ಸಿಇಒ ಸುಸಾನ್ ವೊಜ್ಸಿಕಿ ಕ್ಯಾನ್ಸರ್​​ಗೆ ಬಲಿ - Susan Wojcicki Dies

ABOUT THE AUTHOR

...view details