ಕರ್ನಾಟಕ

karnataka

ETV Bharat / technology

Sukhoi 30 MKI ಯುದ್ಧ ವಿಮಾನಕ್ಕೆ 240 ಏರೋ-ಎಂಜಿನ್‌ ಖರೀದಿಗೆ ಕೇಂದ್ರ ಸರ್ಕಾರ ಅಸ್ತು - Aero Engines For Sukhoi Aircraft - AERO ENGINES FOR SUKHOI AIRCRAFT

Sukhoi 30 MKI aircraft: ಭದ್ರತಾ ಸಂಪುಟ ಸಮಿತಿಯು ಭಾರತೀಯ ವಾಯುಪಡೆಯ Sukhoi 30 MKI ವಿಮಾನಕ್ಕಾಗಿ 240 AL-31FP ಏರೋ-ಎಂಜಿನ್‌ಗಳ ಖರೀದಿಗೆ ಅನುಮೋದನೆ ನೀಡಿದೆ. ಈ ಎಂಜಿನ್‌ಗಳನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ತಯಾರಿಸಲಿದೆ. ಇದರ ವೆಚ್ಚ 26 ಸಾವಿರ ಕೋಟಿಗೂ ಹೆಚ್ಚು.

SU 30 MKI AIRCRAFT  PROCUREMENT OF 240 AERO ENGINES  CABINET GREEN SIGNAL
Sukhoi 30 MKI ಯುದ್ಧ ವಿಮಾನ (ETV Bharat)

By ETV Bharat Tech Team

Published : Sep 3, 2024, 2:12 PM IST

ನವದಹಲಿ: ದೇಶದ ರಕ್ಷಣಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸಚಿವ ಸಂಪುಟದ ಭದ್ರತಾ ಸಮಿತಿ ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತೀಯ ವಾಯುಪಡೆಯು ತನ್ನ ಪ್ರಮುಖ ಯುದ್ಧ ವಿಮಾನ ಸುಖೋಯ್-30ಗಾಗಿ 26,000 ಕೋಟಿ ರೂಪಾಯಿ ವೆಚ್ಚದಲ್ಲಿ 240 ಏರೋ ಎಂಜಿನ್‌ಗಳನ್ನು ಖರೀದಿಸುವ ಪ್ರಸ್ತಾವನೆಯನ್ನು ಸೋಮವಾರ ಅನುಮೋದಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ.

ಒಂದು ವರ್ಷದ ನಂತರ ಏರೋ ಇಂಜಿನ್‌ಗಳ ವಿತರಣೆ ಆರಂಭವಾಗಲಿದೆ. ಏರ್ ಫೋರ್ಸ್‌ನ ಸುಖೋಯ್ 30 MKI ಫೈಟರ್ ಜೆಟ್‌ಗಳಿಗಾಗಿ 240 ಏರೋ-ಎಂಜಿನ್‌ಗಳನ್ನು (AL-31 FP) ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ ಖರೀದಿಸಲಾಗುತ್ತದೆ. ಈ ವಿಮಾನಗಳ ಖರೀದಿಗೆ ಎಲ್ಲಾ ತೆರಿಗೆಗಳು ಮತ್ತು ಸುಂಕಗಳು ಸೇರಿದಂತೆ 26 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ವರದಿಯಾಗಿದೆ.

ಶೇ 54ಕ್ಕೂ ಹೆಚ್ಚು ಸ್ವದೇಶಿ ಭಾಗಗಳು:ರಕ್ಷಣಾ ಸಚಿವಾಲಯ ನೀಡಿರುವ ಹೇಳಿಕೆಯಲ್ಲಿ ಈ ಎಂಜಿನ್‌ಗಳು ಶೇ 54ರಷ್ಟು ಅಧಿಕ ಸ್ವದೇಶಿ ಭಾಗಗಳನ್ನು ಹೊಂದಿರುತ್ತವೆ. ಈ ಭಾಗಗಳನ್ನು ಹೆಚ್‌ಎಎಲ್‌ನ ಕೊರಾಪುಟ್ ವಿಭಾಗದಲ್ಲಿ ತಯಾರಿಸಲಾಗುತ್ತದೆ. ಸುಖೋಯ್-30 ವಾಯುಪಡೆಯ ಅತ್ಯಂತ ಶಕ್ತಿಶಾಲಿ ವಿಮಾನ. HALನಿಂದ ಏರೋ-ಎಂಜಿನ್‌ಗಳ ಪೂರೈಕೆಯು ವಾಯುಪಡೆಯ ಫ್ಲೀಟ್ ಅವಶ್ಯಕತೆಗಳನ್ನು ಪೂರೈಸುತ್ತದೆ. ಇದರಿಂದ ದೇಶದ ರಕ್ಷಣಾ ಸಾಮರ್ಥ್ಯ ಮತ್ತಷ್ಟು ಬಲಗೊಳ್ಳಲಿದೆ.

3 ಸಾವಿರ ಕಿ.ಮೀ.ವರೆಗೆ ಹೊಡೆದುರುಳಿಸಬಲ್ಲ ಸಾಮರ್ಥ್ಯ: ಇದು ರಷ್ಯಾ ನಿರ್ಮಿತ ಟ್ವಿನ್​-ಸೀಟರ್​ ಅವಳಿ-ಎಂಜಿನ್ ಮಲ್ಟಿರೋಲ್ ಫೈಟರ್ ಜೆಟ್. ಒಂದು ಜೆಟ್ 30 ಎಂಎಂ ಜಿಎಸ್‌ಎಚ್ ಗನ್ ಜೊತೆಗೆ 8 ಸಾವಿರ ಕೆ.ಜಿ ಬಾಹ್ಯ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಈ ವಿಮಾನವು ಗಾಳಿಯಿಂದ ನೆಲಕ್ಕೆ ಮತ್ತು ಗಾಳಿಯಿಂದ ಗಾಳಿಯಲ್ಲಿ ಏಕಕಾಲದಲ್ಲಿ ಗುರಿಗಳ ಮೇಲೆ ದಾಳಿ ಮಾಡಬಲ್ಲದು. ಸುಖೋಯ್ 30 MKI 3 ಕಿಲೋಮೀಟರ್‌ಗಳವರೆಗೆ ದಾಳಿ ಮಾಡುವ ಸಾಮರ್ಥ್ಯ ಇದಕ್ಕಿದೆ. ಭಾರತೀಯ ವಾಯುಪಡೆಯು ಸದ್ಯ 260ಕ್ಕೂ ಹೆಚ್ಚು ಸುಖೋಯ್ 30 MKI ಯುದ್ಧ ವಿಮಾನಗಳನ್ನು ಹೊಂದಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಸಿದ್ಧವಾಗುತ್ತಿದೆ ವಂದೇಭಾರತ್ ಸ್ಲೀಪರ್; ರೈಲಿನಲ್ಲಿ ಸ್ನಾನ ಸೌಲಭ್ಯ, ಹಲವು ವೈಶಿಷ್ಟ್ಯಗಳು! - Vande Bharat Sleeper Train

ABOUT THE AUTHOR

...view details