ಕರ್ನಾಟಕ

karnataka

ETV Bharat / technology

2028ರ ವೇಳೆಗೆ ಶೇ 70ರಷ್ಟು ಸಾಫ್ಟ್​ವೇರ್ ಜೆನ್​ ಎಐನಿಂದ ಟೆಸ್ಟಿಂಗ್: ವರದಿ - ಸಾಫ್ಟ್​ವೇರ್ ಟೆಸ್ಟಿಂಗ್

2028ರ ವೇಳೆಗೆ ಸಾಫ್ಟ್​ವೇರ್ ಟೆಸ್ಟಿಂಗ್​ನಲ್ಲಿ ಜೆನ್ ಎಐ ಪ್ರಮುಖ ಪಾತ್ರ ವಹಿಸಲಿದೆ ಎಂದು ವರದಿ ಹೇಳಿದೆ.

GenAI-based Tools to write 70% of software tests by 2028
GenAI-based Tools to write 70% of software tests by 2028

By ETV Bharat Karnataka Team

Published : Jan 21, 2024, 1:25 PM IST

ನವದೆಹಲಿ: ಜೆನ್ ಎಐ ಆಧಾರಿತ ಉಪಕರಣಗಳು 2028ರ ವೇಳೆಗೆ ಶೇ 70ರಷ್ಟು ಸಾಫ್ಟ್​ವೇರ್​ಗಳನ್ನು ಪರೀಕ್ಷೆಗೊಳಪಡಿಸುವ (ಟೆಸ್ಟಿಂಗ್) ಸಾಮರ್ಥ್ಯ ಹೊಂದಿದ್ದು, ಹಸ್ತಚಾಲಿತ ಪರೀಕ್ಷೆಯ ಅಗತ್ಯವನ್ನು ಕಡಿಮೆ ಮಾಡಲಿವೆ. ಇದರ ಪರಿಣಾಮವಾಗಿ ಪರೀಕ್ಷಾ ವ್ಯಾಪ್ತಿ, ಸಾಫ್ಟ್​ವೇರ್ ಬಳಕೆ ಮತ್ತು ಕೋಡ್ ಗುಣಮಟ್ಟದಲ್ಲಿ ಸುಧಾರಣೆಯಾಗಲಿದೆ ಎಂದು ಹೊಸ ವರದಿಯೊಂದು ತಿಳಿಸಿದೆ.

ಐಡಿಸಿ ವರದಿಯ ಪ್ರಕಾರ, ಜಪಾನ್ (ಎಪಿಇಜೆ) ಪ್ರದೇಶವನ್ನು ಹೊರತುಪಡಿಸಿ ಏಷ್ಯಾ ಪೆಸಿಫಿಕ್ ವಲಯದಲ್ಲಿ ಶೇ 48ರಷ್ಟು ಉದ್ಯಮಗಳು ತಮ್ಮ ಕೋಡಿಂಗ್ ವಿಮರ್ಶೆ ಮಾಡುವುದು ಮತ್ತು ಟೆಸ್ಟಿಂಗ್ ವಿಷಯದಲ್ಲಿ ಎಐ ತನ್ನ ಡೆವಲಪರ್​ಗಳಿಗೆ ಸಹಕಾರಿಯಾಗಲಿದೆ ಎಂದು ಪರಿಗಣಿಸುತ್ತವೆ.

ಟೆಸ್ಟಿಂಗ್​ಗಳಿಗೆ ಆದ್ಯತೆ ನೀಡುವುದು, ವಿಫಲ ಟೆಸ್ಟಿಂಗ್​ಗಳಿಗೆ ಮೂಲ ಕಾರಣವನ್ನು ಕಂಡುಹಿಡಿಯುವುದು, ಟೆಸ್ಟಿಂಗ್ ಮಾದರಿಗಳನ್ನು ರಚಿಸುವುದು ಮತ್ತು ಸ್ವಯಂ- ಸರಿ ಪಡಿಸುವುದು ಮತ್ತು ಟೆಸ್ಟಿಂಗ್ ಕಾರ್ಯವಿಧಾನ ಈ ಕಾರಣಗಳಿಗಾಗಿ ಸಾಫ್ಟ್​ವೇರ್​ ಟೆಸ್ಟಿಂಗ್​ಗಾಗಿ ಎಐ / ಎಂಎಲ್ ಅನ್ನು ಬಳಸಲಾಗುವುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಟೆಸ್ಟಿಂಗ್ ಯಾಂತ್ರೀಕೃತಗೊಳಿಸುವಿಕೆಯು ಜೆನ್ ಎಐ ಟೆಸ್ಟಿಂಗ್ ಸ್ಕ್ರಿಪ್ಟ್​ಗಳನ್ನು ರಚಿಸುವುದು ಮತ್ತು ನಿರ್ವಹಿಸಲು ಎಐ ಕ್ರಮಾವಳಿಗಳ ಬಳಕೆಯನ್ನು ಒಳಗೊಂಡಿದೆ. ಇದು ಹೆಚ್ಚು ಪರಿಣಾಮಕಾರಿ ಮತ್ತು ಹೊಂದಿಕೊಳ್ಳಬಹುದಾದ ಟೆಸ್ಟಿಂಗ್ ಕಾರ್ಯ ವಿಧಾನಗಳಿಗೆ ಅನುವು ಮಾಡಿಕೊಡುತ್ತದೆ.

"ಕೋಡ್ ಜನರೇಷನ್, ಯೂಸರ್ ಇಂಟರ್​ಫೇಸ್, ಟೆಸ್ಟಿಂಗ್ ಮತ್ತು ಇತರ ಬಳಕೆಯ ಪ್ರಕರಣಗಳನ್ನು ಒಳಗೊಂಡಂತೆ ಉತ್ಪಾದನಾ ಎಐ ನೆರವಿನ ಸಾಫ್ಟ್​ವೇರ್ ಅಭಿವೃದ್ಧಿಯಲ್ಲಿ ಏಷ್ಯಾ-ಪೆಸಿಫಿಕ್ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಸಾಫ್ಟ್​ವೇರ್ ಟೆಸ್ಟಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲು ಚೀನಾ, ಭಾರತ ಮತ್ತು ಜಪಾನ್ ಗಮನಾರ್ಹವಾಗಿ ಹೂಡಿಕೆ ಮಾಡುತ್ತಿವೆ" ಎಂದು ಐಡಿಸಿ ಏಷ್ಯಾ / ಪೆಸಿಫಿಕ್​ನ ಡಿಜಿಟಲ್ ನಾವೀನ್ಯತೆಗಳು, ಎಕ್ಸ್ಒಪಿಎಸ್ ಮತ್ತು ಡೆವಲಪರ್ ಸ್ಟ್ರಾಟಜಿಗಳ ಹಿರಿಯ ಸಂಶೋಧನಾ ವ್ಯವಸ್ಥಾಪಕ ಧೀರಜ್ ಬದ್ಗುಜರ್ ಹೇಳಿದರು.

ಸಾಫ್ಟ್​ವೇರ್ ಡೆವಲಪ್​ಮೆಂಟ್​ನ ಎಲ್ಲ ಹಂತಗಳಲ್ಲಿ ಎಐ ಯಾಂತ್ರೀಕೃತಗೊಳಿಸುವಿಕೆಯನ್ನು ಹೆಚ್ಚಿಸುತ್ತದೆ. ಡೆವಲಪರ್​ಗಳು ಮತ್ತು ಡೆವ್ಆಪ್ಸ್ ತಜ್ಞರು ಈ ಹೊಸ ಮಾದರಿಯ ಮುಂಚೂಣಿಯಲ್ಲಿದ್ದಾರೆ ಎಂದು ವರದಿ ತಿಳಿಸಿದೆ. 2026 ರ ವೇಳೆಗೆ ಶೇಕಡಾ 50 ಕ್ಕಿಂತ ಹೆಚ್ಚು ಗ್ರಾಹಕರು ತಾವು ಬಯಸುವ ಬಹುತೇಕ ಉತ್ಪನ್ನಗಳು ಮತ್ತು ಸೇವೆಗಳನ್ನು ಹುಡುಕಲು, ಮೌಲ್ಯಮಾಪನ ಮಾಡಲು ಮತ್ತು ಖರೀದಿಸಲು ಮೊಬೈಲ್ ಸಾಧನಗಳ ಮೂಲಕ ಎಐ ಅನ್ನು ಬಳಸುತ್ತಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ : ಸ್ಯಾಮ್​ಸಂಗ್ ಹಿಂದಿಕ್ಕಿ ವಿಶ್ವದ ನಂ.1 ಸ್ಮಾರ್ಟ್​ಫೋನ್​ ಕಂಪನಿಯಾದ ಆ್ಯಪಲ್

ABOUT THE AUTHOR

...view details