ಕರ್ನಾಟಕ

karnataka

ETV Bharat / technology

'ಬ್ರಹ್ಮಾಂಡದಲ್ಲಿ ಡಾರ್ಕ್ ಎನರ್ಜಿ ಎಂಬುದೇ ಇಲ್ಲ, ಆ ಸಿದ್ಧಾಂತಗಳೆಲ್ಲವೂ ತಪ್ಪು' : ವಿಭಿನ್ನ ವಾದ - DARK ENERGY

Dark Energy: ವಿಜ್ಞಾನ ಜಗತ್ತಿನಲ್ಲಿ ಇದುವರೆಗೆ ಇರುವ ದೊಡ್ಡ ರಹಸ್ಯವೆಂದ್ರೆ ಅದು ಡಾರ್ಕ್ ಎನರ್ಜಿ. ವಿಜ್ಞಾನಿಗಳು ಕಳೆದ 100 ವರ್ಷಗಳಿಂದ ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಸದ್ಯ ಈ ಬಗ್ಗೆ ವಿಷಯವೊಂದು ಹೊರ ಬಿದ್ದಿದೆ.

DARK ENERGY DOES NOT EXIST  WHAT IS TIMESCAPE MODEL  DARK ENERGY MYSTERY SOLVE  BIGGEST MYSTERY OF THE UNIVERSE
ಡಾರ್ಕ್ ಎನರ್ಜಿ (Photo Credit- ETV Bharat via Copilot Design)

By ETV Bharat Tech Team

Published : Dec 28, 2024, 12:27 PM IST

Biggest Mystery of the Universe: ಈ ಬ್ರಹ್ಮಾಂಡದಲ್ಲಿ ಮನುಷ್ಯರ ಗ್ರಹಿಕೆಗೆ ನಿಲುಕದ ಅನೇಕ ರಹಸ್ಯಗಳು ಅಡಗಿವೆ. ಕಾಲಾನಂತರದಲ್ಲಿ ವಿಜ್ಞಾನಿಗಳು ಅವುಗಳನ್ನು ಭೇದಿಸಲು ಯತ್ನಿಸುತ್ತಿದ್ದಾರೆ. ಆದರೆ ಕೆಲವು ನಿಗೂಢವಾಗಿಯೇ ಉಳಿದಿವೆ. ಅದರಲೊಂದು ಡಾರ್ಕ್​ ಎನರ್ಜಿ ಎಂಬುದು ವಿಜ್ಞಾನದ ಲೋಕದಲ್ಲಿ ಅತಿದೊಡ್ಡ ರಹಸ್ಯಗಳಲ್ಲಿ ಒಂದಾಗಿದೆ.

ಡಾರ್ಕ್ ಎನರ್ಜಿ ಎಂದರೇನು ಎಂದು ಇಲ್ಲಿಯವರೆಗೆ ಯಾರಿಗೂ ಸರಿಯಾಗಿ ತಿಳಿದಿಲ್ಲ. ಅದು ಹೇಗಿದೆ ಎಂಬುದು ನೋಡಲು ಯಾರಿಗೂ ಸಾಧ್ಯವಾಗಿಲ್ಲ. ಕಳೆದ 100 ವರ್ಷಗಳಿಂದ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಈ ಬಗ್ಗೆ ಯಾವುದೇ ಪ್ರಮುಖ ಮಾಹಿತಿ ಸಿಕ್ಕಿಲ್ಲ.

ಆದರೆ, ಕೆಲವು ದಶಕಗಳಿಂದ, ವಿಜ್ಞಾನಿಗಳು ಡಾರ್ಕ್ ಎನರ್ಜಿ ತುಂಬಾ ಶಕ್ತಿಯುತವಾಗಿದೆ ಎಂದು ಹೇಳುತ್ತಾರೆ. ಇದರಿಂದಾಗಿ ಬ್ರಹ್ಮಾಂಡವು ವೇಗವಾಗಿ ವಿಸ್ತರಿಸುತ್ತಿದೆ. ಆದರೆ ಇತ್ತೀಚೆಗೆ, ಇದು ಸಂಪೂರ್ಣವಾಗಿ ತಪ್ಪು ಎಂದು ಹೇಳುವ ವಿಭಿನ್ನ ವಾದಗಳು ಹುಟ್ಟಿಕೊಂಡಿವೆ. ವಿಶ್ವದಲ್ಲಿ ಡಾರ್ಕ್ ಎನರ್ಜಿಯಂತಹ ವಿಷಯವಿಲ್ಲ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಅದರ ಬಗ್ಗೆ ಅಸ್ತಿತ್ವದಲ್ಲಿರುವ ಎಲ್ಲಾ ಸಿದ್ಧಾಂತಗಳು ತಪ್ಪಾಗಿ ಪರಿಗಣಿಸಬಹುದಾಗಿದೆ.

ಡಾರ್ಕ್ ಎನರ್ಜಿ ನಿಗೂಢ ಬಿಟ್ಟು ಹೋಗಿದೆ!: ವಿಶ್ವದಲ್ಲಿ ಭೂಮಿ, ಮಂಗಳ, ಬುಧ, ಶನಿ, ಸೂರ್ಯ ಮತ್ತು ಚಂದ್ರನಂತಹ ಇನ್ನೂ ಹಲವು ಗ್ರಹಗಳು, ಉಪಗ್ರಹಗಳು ಮತ್ತು ಗೆಲಾಕ್ಸಿಗಳಿವೆ ಎಂದು ಆಲ್ಬರ್ಟ್ ಐನ್‌ಸ್ಟೈನ್ ಸುಮಾರು 100 ವರ್ಷಗಳ ಹಿಂದೆ ತಮ್ಮ ಸಂಶೋಧನೆಯ ಮೂಲಕ ಬಹಿರಂಗಪಡಿಸಿದರು. ಆದರೆ, ಬ್ರಹ್ಮಾಂಡದಲ್ಲಿ ಹಲವಾರು ಗ್ರಹಗಳು ಮತ್ತು ಉಪಗ್ರಹಗಳು ಇದ್ದರೆ, ಅವು ಏಕೆ ಪರಸ್ಪರ ಡಿಕ್ಕಿ ಹೊಡೆಯುವುದಿಲ್ಲ ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಈ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಾ ವಿಜ್ಞಾನಿಗಳು 'ಡಾರ್ಕ್ ಎನರ್ಜಿ' ಎಂಬ ನಿಗೂಢ ಸಿದ್ಧಾಂತವನ್ನು ಮಂಡಿಸಿದರು.

ಈ ಸಿದ್ಧಾಂತದ ಪ್ರಕಾರ, ಡಾರ್ಕ್ ಎನರ್ಜಿ ಎಂಬ ಈ ಬಲದಿಂದ ಬ್ರಹ್ಮಾಂಡವು ಎಲ್ಲಾ ದಿಕ್ಕುಗಳಲ್ಲಿ ಸ್ಥಿರ ದರದಲ್ಲಿ ವಿಸ್ತರಿಸುತ್ತಾ ಸಾಗುತ್ತಿವೆ. ಈ ಸಿದ್ಧಾಂತವನ್ನು ತಂದ ಆ ಕಾಲದ ವಿಜ್ಞಾನಿಗಳೂ ಇದೇ ಸತ್ಯ ಎಂದು ಭಾವಿಸಿದ್ದರು. ಆದರೆ, ಅಂದಿನಿಂದ ಈ ಸಿದ್ಧಾಂತದ ಮೇಲೆ ಅನೇಕ ಪ್ರಶ್ನೆಗಳನ್ನು ಎತ್ತಲಾಗಿದೆ. ಆದರೆ, ಆ ಹಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಆದರೆ ಇತ್ತೀಚಿನ ಸಂಶೋಧನೆಯ ಮೂಲಕ ವಿಜ್ಞಾನಿಗಳು ಡಾರ್ಕ್ ಎನರ್ಜಿ ಬಗ್ಗೆ ಅತಿ ದೊಡ್ಡ ರಹಸ್ಯ ಬಹಿರಂಗಪಡಿಸಿದ್ದಾರೆ. ವಿಶ್ವದಲ್ಲಿ ಡಾರ್ಕ್ ಎನರ್ಜಿ ಎಂಬುದೇ ಇಲ್ಲ ಎಂದು ವಾದಿಸಲಾಗಿದೆ. ನ್ಯೂಜಿಲೆಂಡ್‌ನ ಕ್ಯಾಂಟರ್ಬರಿ ವಿಶ್ವವಿದ್ಯಾಲಯದ ಸಂಶೋಧಕರು ಸೂಪರ್ನೋವಾಗಳ ಬೆಳಕಿನ ವಕ್ರರೇಖೆಗಳನ್ನು (ಬೃಹತ್ ನಕ್ಷತ್ರಗಳಲ್ಲಿನ ಸ್ಫೋಟಗಳು) ಆಳವಾಗಿ ವಿಶ್ಲೇಷಿಸಿದ ನಂತರ ಈ ಹೊಸ ಸಿದ್ಧಾಂತವನ್ನು ಮಂಡಿಸಿದ್ದಾರೆ. ಈ ಹೊಸ ಸಂಶೋಧನೆಯನ್ನು 'ಮಂತ್ಲಿ ನೋಟೀಸ್ ಆಫ್ ದಿ ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿ ಲೆಟರ್ಸ್' ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ವಿಜ್ಞಾನಿಗಳು ಪ್ರಕಟಿಸಿದ ಹೊಸ ಸಿದ್ಧಾಂತದ ಪ್ರಕಾರ, ಬ್ರಹ್ಮಾಂಡವು ಏಕರೂಪವಾಗಿ ವಿಸ್ತರಿಸುತ್ತಿದೆ. ಸರಳವಾಗಿ ಹೇಳುವುದಾದರೆ, ಇದು ಜಿಂಜರ್ ಆಕಾರದಂತೆ ಅಸಮಾನವಾಗಿ ವಿಸ್ತರಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದರರ್ಥ ಬ್ರಹ್ಮಾಂಡದ ಕೆಲವು ಭಾಗಗಳು ವೇಗವಾಗಿ ವಿಸ್ತರಿಸುತ್ತಿವೆ ಮತ್ತು ಇತರವು ನಿಧಾನವಾಗಿ ವಿಸ್ತರಿಸುತ್ತಿವೆ. ಇದಲ್ಲದೇ, ಇದಕ್ಕೂ ಡಾರ್ಕ್ ಎನರ್ಜಿಗೂ ಯಾವುದೇ ಸಂಬಂಧವಿಲ್ಲ ಮತ್ತು ಮೂಲ ವಿಶ್ವದಲ್ಲಿ ಡಾರ್ಕ್ ಎನರ್ಜಿ ಎಂಬುದೇ ಇಲ್ಲ ಎಂದು ಬಲವಾಗಿ ವಾದಿಸಲಾಗಿದೆ.

ಡಾರ್ಕ್ ಎನರ್ಜಿ ಇಲ್ಲದಿದ್ದರೆ ವಿಶ್ವವು ಹೇಗೆ ವಿಸ್ತರಿಸುತ್ತಿದೆ?: ಅದೇನೆಂದರೆ.. ಆಗ ಕ್ಯಾಂಟರ್ಬರಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇದಕ್ಕೆ 'ಟೈಮ್‌ಸ್ಕೇಪ್' ಮಾದರಿಯನ್ನು ಸರಿಯಾಗಿ ಪರಿಗಣಿಸಬಹುದು ಎಂದು ಹೇಳುತ್ತಾರೆ. ಅವರು ನಡೆಸಿದ ಇತ್ತೀಚಿನ ಸಂಶೋಧನೆಯಲ್ಲಿ ಈ ವಿಷಯವನ್ನು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ. 'ಟೈಮ್‌ಸ್ಕೇಪ್' ಮಾದರಿಯು ಈ ಸಿದ್ಧಾಂತವನ್ನು ಸರಳ ಪದಗಳಲ್ಲಿ ವಿವರಿಸುತ್ತದೆ. ಬ್ರಹ್ಮಾಂಡವು ಹೇಗೆ ವಿಸ್ತರಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು 'ಟೈಂ' ಮತ್ತು 'ಡಿಸ್ಟೆನ್ಸ್​'ವನ್ನು ನೋಡುವ ಹೊಸ ಮಾರ್ಗವನ್ನು ಇದು ಸೂಚಿಸುತ್ತದೆ.

ಈ 'ಟೈಮ್‌ಸ್ಕೇಪ್' ಮಾದರಿ... ಗುರುತ್ವಾಕರ್ಷಣೆಯು ಸಮಯವನ್ನು ನಿಧಾನಗೊಳಿಸುತ್ತದೆ. ಅಂದರೆ ಸಮಯವು ಹೊರಗಿಗಿಂತ ಗ್ಯಾಲಕ್ಸಿಗಳ ಒಳಗೆ ನಿಧಾನವಾಗಿ ಚಲಿಸುತ್ತದೆ ಎಂದು ವಿವರಿಸುತ್ತದೆ. ಈ ಹಿನ್ನೆಲೆ ಬ್ರಹ್ಮಾಂಡದ ವಿಸ್ತರಣೆಯನ್ನು ‘ಡಾರ್ಕ್ ಎನರ್ಜಿ’ಗಿಂತ ‘ಟೈಂ ಆ್ಯಂಡ್​ ಡಿಸ್ಟೆನ್ಸ್​’ದ ದೃಷ್ಟಿಯಿಂದ ನೋಡಬೇಕು ಎನ್ನುತ್ತಾರೆ ವಿಜ್ಞಾನಿಗಳು.

ಇಂತಹ ಪರಿಸ್ಥಿತಿಯಲ್ಲಿ ನಾವು ಗೆಲಕ್ಸಿಗಳಿಂದ ದೂರ ಹೋದಂತೆ.. 'ಟೈಂ ಆ್ಯಂಡ್​ ಡಿಸ್ಟೆನ್ಸ್'ದಲ್ಲಿ ವ್ಯತ್ಯಾಸ ಹೆಚ್ಚುತ್ತದೆ. ಆದ್ದರಿಂದ ಬ್ರಹ್ಮಾಂಡವು ವೇಗವಾಗಿ ವಿಸ್ತರಿಸುತ್ತಿರುವಂತೆ ತೋರುತ್ತಿದೆ. ಆದರೆ ಇಲ್ಲಿಯವರೆಗೆ ಇದನ್ನು ಡಾರ್ಕ್ ಎನರ್ಜಿ ಎಂದು ಕರೆಯಲಾಗುತ್ತಿತ್ತು ಎಂದು ಕ್ಯಾಂಟರ್ಬರಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದಾರೆ. ನ್ಯೂಜಿಲೆಂಡ್‌ನ ಕ್ರೈಸ್ಟ್‌ ಚರ್ಚ್‌ನಲ್ಲಿರುವ ಕ್ಯಾಂಟರ್‌ಬರಿ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆಯನ್ನು ಪ್ರೊಫೆಸರ್ ಡೇವಿಡ್ ವಿಲ್ಟ್‌ಶೈರ್ ನೇತೃತ್ವ ವಹಿಸಿದ್ದರು.

ನಿಖರವಾಗಿ ಡಾರ್ಕ್ ಎನರ್ಜಿ ಎಂದರೇನು?:ಕಳೆದ ಕೆಲವು ವರ್ಷಗಳಿಂದ ಜಗತ್ತಿನಾದ್ಯಂತ ವಿಜ್ಞಾನಿಗಳು ಡಾರ್ಕ್ ಎನರ್ಜಿಯನ್ನು ನಿಗೂಢ ಶಕ್ತಿ ಎಂದು ಪರಿಗಣಿಸಿದ್ದಾರೆ. ಈ ಕಾರಣದಿಂದಾಗಿ ವಿಶ್ವವು ವೇಗವಾಗಿ ವಿಸ್ತರಿಸುತ್ತಿದೆ ಎಂದು ನಂಬಲಾಗಿದೆ. ಸುಮಾರು 100 ವರ್ಷಗಳ ಹಿಂದೆ ವಿಜ್ಞಾನಿಗಳು ವಿಶ್ವದಲ್ಲಿನ ಗೆಲಕ್ಸಿಗಳು ಮೊದಲಿಗಿಂತ ವೇಗವಾಗಿ ಪರಸ್ಪರ ದೂರ ಹೋಗುತ್ತಿರುವುದನ್ನು ಗಮನಿಸಿದರು. ಈ ಹಿನ್ನೆಲೆಯಲ್ಲಿ ಇದನ್ನು ಅರ್ಥಮಾಡಿಕೊಳ್ಳಲು ಅಂದಿನ ವಿಜ್ಞಾನಿಗಳು ಈ ಡಾರ್ಕ್ ಎನರ್ಜಿ ಸಿದ್ಧಾಂತವನ್ನು ಪರಿಚಯಿಸಿದರು.

ಈ ಸಿದ್ಧಾಂತದ ಪ್ರಕಾರ, ಡಾರ್ಕ್ ಎನರ್ಜಿ ಗುರುತ್ವಾಕರ್ಷಣೆಯ ವಿರುದ್ಧ ಕಾರ್ಯನಿರ್ವಹಿಸುವ ಶಕ್ತಿಯಾಗಿದೆ. ಗುರುತ್ವಾಕರ್ಷಣೆಯು ವಸ್ತುಗಳನ್ನು ಹತ್ತಿರಕ್ಕೆ ಎಳೆಯಲು ಪ್ರಯತ್ನಿಸಿದರೆ, ಡಾರ್ಕ್ ಎನರ್ಜಿ ವಿರುದ್ಧ ದಿಕ್ಕಿನಲ್ಲಿ ಕಾರ್ಯನಿರ್ವಹಿಸುವುದರಿಂದ ಬ್ರಹ್ಮಾಂಡವು ವಿಸ್ತರಿಸುತ್ತಿದೆ ಎಂದು ಈ ಸಿದ್ಧಾಂತವು ವಿವರಿಸುತ್ತದೆ. ಆ ಸಮಯದಲ್ಲಿ ವಿಜ್ಞಾನಿಗಳು ಡಾರ್ಕ್ ಎನರ್ಜಿ ವಿಶ್ವದಲ್ಲಿ ಸುಮಾರು ಶೇಕಡ 68 ರಷ್ಟು ಶಕ್ತಿಯನ್ನು ಹೊಂದಿದೆ ಎಂದು ನಂಬಿದ್ದರು.

ಆದ್ರೂ ಸಹ ಈ ಬಗ್ಗೆ ಹಲವಾರು ಪ್ರಶ್ನೆಗಳು ಮತ್ತು ಅನುಮಾನಗಳು ಹುಟ್ಟಿಕೊಂಡಿವೆ.. ವಿಜ್ಞಾನಿಗಳು ಇದುವರೆಗೆ ಬಹಳ ಕಡಿಮೆ ಮಾಹಿತಿಯನ್ನು ಕಂಡುಹಿಡಿಯಲು ಸಾಧ್ಯವಾಯಿತು. ಇದು ಕಳೆದ ಹಲವಾರು ವರ್ಷಗಳಿಂದ ವಿಜ್ಞಾನಿಗಳಿಗೆ ಒಂದು ದೊಡ್ಡ ನಿಗೂಢವಾಗಿಯೇ ಉಳಿದಿದೆ. ಆದರೆ ಈಗ ನ್ಯೂಜಿಲೆಂಡ್ ವಿಜ್ಞಾನಿಗಳು ವಿಶ್ವದಲ್ಲಿ ಡಾರ್ಕ್ ಎನರ್ಜಿ ಎಂಬುದೇ ಇಲ್ಲ ಎಂದು ಹೇಳುತ್ತಿದ್ದಾರೆ.

ಓದಿ:ಪ್ರಜ್ವಲಿಸುವ ಸೂರ್ಯನ ಸಮೀಪಕ್ಕೆ ತಲುಪಿದ ಬಳಿಕವೂ ಈ ಬಾಹ್ಯಾಕಾಶ ನೌಕೆ ಜೀವಂತವಾಗಿರುವುದು ಹೇಗೆ?

ABOUT THE AUTHOR

...view details