Best Gadgets For Monsoon:ಮಳೆಗಾಲದಲ್ಲಿ ವಾತಾವರಣವು ಆಹ್ಲಾದಕರವಾಗಿರುತ್ತದೆ. ಮಳೆಹನಿಗಳು ಬಹಳ ಸಂತೋಷವನ್ನು ತರುತ್ತವೆ. ಆದರೆ ಮಳೆಗಾಲವು ಸಂತೋಷದ ಜೊತೆಗೆ ರೋಗಗಳನ್ನು ತರುತ್ತವೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಈ ಅವಧಿಯಲ್ಲಿ ಎಲ್ಲೆಡೆ ಆರ್ದ್ರತೆ ಹೆಚ್ಚಾಗಿರುವುದರಿಂದ ಇದು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಇದು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಆದರೆ ಅಂತಹ ಸಂದರ್ಭಗಳಲ್ಲಿ ನಮ್ಮ ಮನೆಯಲ್ಲಿ ಈ ವಸ್ತುಗಳು ಇದ್ದರೆ, ಮುಂಗಾರು ಮಳೆಯ ಆನಂದವು ಸಾಮಾನ್ಯವಾಗುವುದಿಲ್ಲ,
1. Vacuum Cleaner: ಮಳೆಗಾಲದಲ್ಲಿ ಎಲ್ಲಿ ನೋಡಿದರೂ ಒದ್ದೆ. ಅಂತಹ ಸಂದರ್ಭಗಳಲ್ಲಿ, ಪ್ರತಿಯೊಬ್ಬರೂ ಮನೆಯಲ್ಲಿ ಒಣ ವಾತಾವರಣವನ್ನು ನೋಡಲು ಬಯಸುತ್ತಾರೆ. ಈ ಅವಧಿಯಲ್ಲಿ ಮನೆಯನ್ನು ಸ್ವಚ್ಛಗೊಳಿಸಲು ವ್ಯಾಕ್ಯೂಮ್ ಕ್ಲೀನರ್ ಖಂಡಿತವಾಗಿಯೂ ಅಗತ್ಯವಿದೆ. ವ್ಯಾಕ್ಯೂಮ್ ಕ್ಲೀನರ್ ಖರೀದಿಸಲು ಬಯಸುವವರಿಗೆ 'ಫಿಲಿಪ್ಸ್ ಪವರ್‌ಪ್ರೊ' ಉತ್ತಮ ಆಯ್ಕೆಯಾಗಿದೆ. ಇದು Amazon ನಲ್ಲಿ 8,999 ರೂ.ಗೆ ಲಭ್ಯವಿದೆ.
2. Robotic Vacuum Cleaner:ಮಳೆಗಾಲದಲ್ಲಿ ಯಾವುದೇ ಕೆಲಸ ಮಾಡಲು ಸ್ವಲ್ಪ ಸೋಮಾರಿತನ ಅನಿಸುತ್ತದೆ. ಅಂತಹವರಿಗೆ ಮನೆಯನ್ನು ಸ್ವಚ್ಛಗೊಳಿಸಲು ರೋಬೋಟಿಕ್ ವ್ಯಾಕ್ಯೂಮ್ ಕ್ಲೀನರ್ ತುಂಬಾ ಉಪಯುಕ್ತವಾಗಿದೆ. ಸ್ವಯಂಚಾಲಿತ ವ್ಯಾಕ್ಯೂಮ್ ಕ್ಲೀನರ್ ಖರೀದಿಸಲು ಬಯಸುವವರಿಗೆ 'ECOVACS Deebot U2 Pro' ಉತ್ತಮ ಆಯ್ಕೆಯಾಗಿದೆ. ಇದು Amazon ನಲ್ಲಿ 14,900 ರೂ.ಗೆ ಲಭ್ಯವಿದೆ. ಟೈಲ್ಸ್, ಕಾರ್ಪೆಟ್ಸ್, ವುಡನ್ ಫ್ಲೋರಿಂಗ್ಗೆ ಇದು ಅನುಕೂಲಕರವಾಗಿದೆ. ಇದು ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್‌ಗಳನ್ನು ಸಪೋರ್ಟ್ ಮಾಡುತ್ತದೆ.
3. SHARP Electric Home Dehumidifier: ವಿಶೇಷವಾಗಿ ಮಳೆಗಾಲದಲ್ಲಿ ಎಲ್ಲರೂ ಎದುರಿಸುವ ದೊಡ್ಡ ಸಮಸ್ಯೆ ಎಂದರೆ ಅದು ಬಟ್ಟೆಯ ದುರ್ವಾಸನೆ. ಹೊರಗೆ ಮಳೆ ಬರುತ್ತಿರುವುದರಿಂದ ಬಟ್ಟೆ ಸರಿಯಾಗಿ ಒಣಗುವುದಿಲ್ಲ. ಅಂತಹ ಸಮಯದಲ್ಲಿ ಡಿಹ್ಯೂಮಿಡಿಫೈಯರ್ ಸೂಕ್ತವಾಗಿದೆ. 'ಶಾರ್ಪ್ ಎಲೆಕ್ಟ್ರಿಕ್ ಹೋಮ್ ಡಿಹ್ಯೂಮಿಡಿಫೈಯರ್' ಬಜೆಟ್ ಬೆಲೆಯಲ್ಲಿ ಗುಣಮಟ್ಟದೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಬೆಲೆ ಕೇವಲ 24,988 ರೂ. ಇದು ಆಟೋ-ಡ್ರೈ, ಲಾಂಡ್ರಿ, ಪ್ರಿ-ಫಿಲ್ಟರ್ ವಿಧಾನಗಳನ್ನು ಹೊಂದಿದೆ.